ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿದ ಕೇಬಲ್‌ಗಳು ಪರದಾಡಿದ ನೆಟ್ಟಿಗರು

By Staff
|
Google Oneindia Kannada News

ನವದೆಹಲಿ, ಜ.31: ಮೆಡಿಟರೇನಿಯನ್ ಸಮುದ್ರದ ಮೂಲಕ ಹಾದುಹೋಗುವ ಕೇಬಲ್‌ಗಳಿಗೆ ಹಾನಿಯಾಗಿರುವ ಕಾರಣ ಅಂತಾರಾಷ್ಟೀಯ ಸಂಪರ್ಕ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದು ಭಾರತದ ಅಂತರ್ಜಾಲ ಸಂಪರ್ಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿದೆ.

ಈಜಿಪ್ಟಿನ ಅಲೆಕ್ಜಾಂಡ್ರಿಯಾ ಎಂಬ ಲಂಗರು ನೌಕೆ ಆಗ್ನೇಯ ಏಷ್ಯಾ-ಮಧ್ಯ ಪೂರ್ವ-ಪಾಶ್ಚಿಮಾತ್ಯ ಯೂರೋಪ್ ಹಾಗೂ ಭಾರತದ (cable_system) ಅಂತರ್ಜಾಲ ಸಂಪರ್ಕದ ಎರಡು ಕೇಬಲ್‍ಗಳನ್ನು ಬುಧವಾರ ಬೆಳಿಗ್ಗೆ ಘಾಸಿಗೊಳಿಸಿತ್ತು. ಹಾಳಾಗಿರುವ ಎರಡು ಕೇಬಲ್‌ಗಳನ್ನು ದುರುಸ್ತಿಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಹಾನಿಗೊಳಗಾಗಿರುವ ಕೇಬಲ್‌‍ಗಳನ್ನು ದುರುಸ್ತಿಗೊಳಿಸಲು ಹತ್ತು ದಿನಗಳ ಸಮಯ ಬೇಕಾಗುತ್ತದೆ ಎಂದು ರಿಲಯನ್ಸ್ ಗ್ರೂಪ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂತರ್ಜಾಲ ಸಂಪರ್ಕ ವ್ಯವಸ್ಥೆಯಲ್ಲಿ ಉಂಟಾದ ವ್ಯತ್ಯಯ ದೇಶದ ಹೊರಗುತ್ತಿಗೆ ಸಂಸ್ಥೆಗಳು ಹಾಗೂ ಅಂತರ್ಜಾಲ ಸೇವೆಯನ್ನು ಒದಗಿಸುವ ಸಂಸ್ಥೆಗಳಿಗೆ ತೀವ್ರ ನಷ್ಟ ತಂದೊಡ್ಡಿದೆ. ಆಗ್ನೇಯ ಏಷ್ಯಾ-ಮಧ್ಯ ಪೂರ್ವ-ಪಾಶ್ಚಿಮಾತ್ಯ ಯೂರೋಪ್ ಮೂಲಕ ಹಾದುಹೋಗುವ ಅಂತಾರಾಷ್ಟ್ರೀಯ ಕೇಬಲ್ ವ್ಯವಸ್ಥೆಯ ಮೇಲೂ ಇದು ಪರಿಣಾಮ ಬೀರಲಿದೆ. ಆದರೆ ಭಾರತ ಸಂಪರ್ಕ ಹೊಂದಿರುವ ಕೇಬಲ್‌ಗಳನ್ನು ಬುಧವಾರ ಸಂಜೆ ರಿಪೇರಿಯಾಗಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X