ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಲಿಗಳ ರಕ್ಷಣೆಗಾಗಿ ಮಹತ್ವದ ಯೋಜನೆ

By Staff
|
Google Oneindia Kannada News

ಹುಲಿಗಳ ರಕ್ಷಣೆಗಾಗಿ ಮಹತ್ವದ ಯೋಜನೆನವದೆಹಲಿ, ಜ.30: ಸುಮಾರು 320 ದಶಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ 8ಹುಲಿ ರಕ್ಷಿತ ಪ್ರದೇಶಗಳನ್ನು 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಸ್ಥಾಪಿಸಲು ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ(ಸಿಸಿಇಎ) ತೀರ್ಮಾನಿಸಿದೆ.

ಕರ್ನಾಟಕ, ತಮಿಳುನಾಡು, ಕೇರಳ, ಒರಿಸ್ಸಾ, ಅಸ್ಸಾಂ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಈ ಹೊಸ ಮೀಸಲು ಹುಲಿ ಸಂರಕ್ಷಣಾ ಕ್ಷೇತ್ರಗಳನ್ನು ತರಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ತಿಳಿಸಿದ್ದಾರೆ.

ಭಾರತದಲ್ಲಿ ಹುಲಿ ಸಂತತಿ ದಿನದಿಂದ ದಿನಕ್ಕೆ ನಶಿಸುತ್ತಿರುವ ಕಾರಣ ಪ್ರಧಾನಿ ಮನಮೋಹನ್ ಸಿಂಗ್ ಹುಲಿ ಸಂರಕ್ಷಣೆಗೆ ವಿಶೇಷಪಡೆ ಸ್ಥಾಪಿಸಲು ಶಿಫಾರಸ್ಸು ಮಾಡಿದ್ದರು. ಹುಲಿ ಸಂರಕ್ಷಣೆ ಯೋಜನೆಗಾಗಿ ಸಿಸಿಇಎ 600ಕೋಟಿ ರೂ.ಗಳ ಒಪ್ಪಿಗೆ ನೀಡಿತ್ತು. ಜನರನ್ನು ಬೇರೆಡೆಗೆ ವರ್ಗಾಯಿಸಿ ಅವರಿಗೆ ಪುನರ್ವಸತಿ ಕಲ್ಪಿಸುವ ಮತ್ತಿತರ ಕಾರ್ಯಗಳಿಗಾಗಿ 508 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುವುದು ಎಂದು ಚಿದಂಬರಂ ತಿಳಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X