ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ನಿಲ್ದಾಣಕ್ಕೆ ಹೊಸ ಚಿನ್ಹೆ, ಹೊಸ ಹೆಸರು

By Super
|
Google Oneindia Kannada News

ಬೆಂಗಳೂರು, ಜ.30: ಇಂಗ್ಲಿಷ್‌ನ ಬ್ಯಾಂಗಲೂರಿಗೆ ಬದಲಾಗಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 'ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ'ಎಂದು ನಾಮಕರಣ ಮಾಡಲಾಗಿದೆ. ಇದೇ ಹೆಸರಿನಲ್ಲಿ ಹೊಸ ಲಾಂಛನವನ್ನೂ ಪ್ರಾಧಿಕಾರ ಪಡೆದುಕೊಂಡಿದೆ.

'ಬ್ಯಾಂಗಲೂರು' ಹೆಸರನ್ನು ಬೆಂಗಳೂರು ಎಂದು ಬದಲಾಯಿಸಲು ಕೇಂದ್ರ ಗೃಹ ಇಲಾಖೆ ಇನ್ನೂ ಯೋಚಿಸುತ್ತಿರಬೇಕಾದರೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎ‍ಎಲ್) ಮಾತ್ರ Bengaluru International Airport ಎಂದು ನಾಮಕರಣ ಮಾಡಿದೆ. ಮಾ.30ರಿಂದ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ ಎಂದು ಪ್ರಾಧಿಕಾರ ತಿಳಿಸಿದೆ.

ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಿರ್ಮಾತೃ ಕೆಂಪೇಗೌಡ, ಮೈಸೂರಿನ ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ, ನಟ ಡಾ.ರಾಜ್‌ಕುಮಾರ್ ಹಾಗೂ ಟಿಪ್ಪು ಸುಲ್ತಾನ್ ಅವರ ಹೆಸರಿಡಲು ಒತ್ತಾಯಿಸಲಾಗಿತ್ತು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಪಾಲುದಾರ ಸಂಸ್ಥೆಗಳಾದ ಸೀಮನ್ಸ್ ಪ್ರೊಜೆಕ್ಟ್ ವೆಂಚರ್ಸ್, ಎಲ್ ಅಂಡ್ ಟಿ, ಯೂನಿಕ್ ಜೂರಿಕ್ ಏರ್‌ಫೋರ್ಟ್, ಕರ್ನಾಟಕ ರಾಜ್ಯ ಬಂಡವಾಳ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮದ ಸೂಚನೆ ಸಲಹೆಗಳ ಪ್ರಕಾರ ಲಾಂಛನವನ್ನು ಸಿದ್ದಪಡಿಸಲಾಗಿದೆ.

(ದಟ್ಸ್‌ಕನ್ನಡ ವಾರ್ತೆ)

English summary
Airport to be named after Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X