ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜ್‌ಪತ್‌ನಲ್ಲಿ ಸಾಗಿದ ಶಕ್ತಿಯ ಪಥ ಸಂಚಲನ

By Staff
|
Google Oneindia Kannada News

Republic of India turns 58, nation celebratesನವದೆಹಲಿ, ಜ.26: ರಜ್‌ಪಥ್‌ನಲ್ಲಿ ಭಾರತ ತನ್ನ ಸೈನಿಕ ಶಕ್ತಿ, ಶೌರ್ಯವನು ಪ್ರದರ್ಶಿಸುವ ಮೂಲಕ ಶನಿವಾರ 59ನೇ ರಾಷ್ಟ್ರೀಯ ದಿನಾಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಗೌರವ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಆಗಮಿಸಿದ್ದರು.

ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ (72)ಗುಂಡು ನಿರೋಧಕ ಗಾಜಿನ ರಕ್ಷಣೆಯಲ್ಲಿ ಸೈನಿಕರ ಪಥ ಸಂಚಲನವನ್ನು ವೀಕ್ಷಿಸಿದರು.ದೇಶಕ್ಕೆ ಸ್ವಾತಂತ್ರ್ಯ ಬಂದ ಮೂರು ವರ್ಷಗಳ ನಂತರ ಅಂದರೆ 1950ರಿಂದ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದೆ. ಇಂದು ರಜ್‌ಪಥ್‌ನಲ್ಲಿ ನಡೆದ ಸಾಂಸ್ಕೃತಿಕ, ಸೈನಿಕ , ತಾಂತ್ರಿಕ ಪ್ರದರ್ಶನವು ಭಾರತದ ಸಮಗ್ರತೆ, ಏಕತೆಯನ್ನು ಪ್ರಪಂಚಕ್ಕೇ ಸಾರಿದವು.

ಗಣರಾಜ್ಯೋತ್ಸವ ಪಥ ಸಂಚಲನ ನಡೆಯುತ್ತಿರುವ ಸುತ್ತ ಮುತ್ತಲ ಪ್ರದೇಶದಲ್ಲಿ ದೆಹಲಿ ಪೊಲೀಸರು, ಅರೆ ಸೈನಿಕ ಪಡೆ ಹಾಗೂ ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಇದಕ್ಕಾಗಿ 20,000 ಭದ್ರತಾ ಸಿಬ್ಬಂದಿ ಸಜ್ಜಾಗಿ ನಿಂತಿದ್ದರು.

ಜಾಗತಿಕ ಆರ್ಥಿಕ ವ್ಯವಸ್ಥೆಯನ್ನು ಮುಂದುವರಿಯುತ್ತಿರುವ ಭಾರತ ಆರ್ಥಿಕ ವ್ಯವಸ್ಥೆಯು ಪ್ರಭಾವಿಸುತ್ತಿದೆ ಎಂದು ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ತಿಳಿಸಿದರು. ಪದೇಪದೇ ಆಗುತ್ತಿರುವ ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಅವರು ಸಮುಷ್ಟಿ ಹೋರಾಟದಿಂದ ಉಗ್ರವಾದವನ್ನು ಕಿತ್ತೊಗೆಯಬೇಕಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X