ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾತಾಳಕ್ಕೆ ಸೂಚ್ಯಂಕ;ಸ್ಥಗಿತಗೊಂಡ ಮಾರುಕಟ್ಟೆ

By Staff
|
Google Oneindia Kannada News

ಮುಂಬೈ, ಜ.22: ಮಂಗಳವಾರದ ಷೇರುಪೇಟೆ ಆರಂಭವಾಗುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಸಂವೇದಿ ಸೂಚ್ಯಂಕ15,576.30 ಪಾಯಿಂಟ್‌‍ಗಳಷ್ಟು ಕುಸಿತ ಕಂಡಿತು. ಆದ ಕಾರಣ ಒಂದು ಗಂಟೆ ಕಾಲ ಷೇರುಮಾರುಕಟ್ಟೆಯ ಎಲ್ಲಾ ವ್ಯವಹಾರಗಳನ್ನು ನಿಲ್ಲಿಸಲಾಯಿತು.

ಅಮೆರಿಕ ಸೇರಿದಂತೆ ಜಾಗತಿಕ ಮಾರುಕಟ್ಟೆಗಳು ದುರ್ಬಲಗೊಂಡ ಕಾರಣ ಸೋಮವಾರ ಷೇರುಪೇಟೆಯ ಸಂವೇದಿ ಸೂಚ್ಯಂಕ ಇತಿಹಾಸದಲ್ಲೇ ಅತ್ಯಧಿಕ ಪಾಯಿಂಟ್‌ಗಳಷ್ಟು ಕುಸಿತ ಕಂಡಿತ್ತು. ಸೋಮವಾರ 1,408.35ಪಾಯಿಂಟ್‌ಗಳಷ್ಟು ಕುಸಿದಿತ್ತು.

ಇಂದಿನ ಬೆಳಗಿನ ಪಾಳಿಯ ಷೇರು ಮಾರುಕಟ್ಟೆ 6,884.09 ಪಾಯಿಂಟ್‌ಗಳಲ್ಲಿ ಆರಂಭವಾಯಿತು. ಷೇರುಪೇಟೆಯ ಎಲ್ಲಾ ವ್ಯವಹಾರಗಳನ್ನೂ ನಿಲ್ಲಿಸುವ ಸಮಯಕ್ಕೆ 15,576.30ಪಾಯಿಂಟ್‌ಗಳಲ್ಲಿ ಕೊನೆಗೊಂಡಿತು.

ಹಾಗೆಯೇ ರಾಷ್ಟ್ರೀಯ ಷೇರುಪೇಟೆಯಲ್ಲೂ(ಎನ್‌ಎಸ್‌ಸಿ)ಸಂವೇದಿ ಸೂಚ್ಯಂಕ ಕುಸಿತ ಕಂಡಿದೆ. ಮಂಗಳವಾರ ಎನ್‌ಎಸ್‌ಸಿ 5,203.35ಪಾಯಿಂಟ್‌ಗಳಿಂದ ಆರಂಭವಾಗಿ 4,569.50 ಪಾಯಿಂಟ್‌ಗಳಲ್ಲಿ ಕೊನೆಗೊಂಡಿತು. ಶೇ.12.1ರಷ್ಟು ಕುಸಿತ ಕಂಡಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X