ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡವೇ ಸಕತ್ ಹಾಟ್ ಮಗಾ ರೇಡಿಯೋ ಮಿರ್ಚಿನಂ.1

By Staff
|
Google Oneindia Kannada News

ಕನ್ನಡವೇ ಸಕತ್ ಹಾಟ್ ಮಗಾ ರೇಡಿಯೋ ಮಿರ್ಚಿನಂ.1ಬೆಂಗಳೂರು, ಜ.22: ನಗರದ ಜನತೆಗೆ ಕನ್ನಡ ಹಾಡುಗಳನ್ನೇ ಕೇಳಿಸುವ ಪ್ರಯತ್ನ ಮಾಡಿದ ಸಕತ್ ಹಾಟ್ ಮಗಾ ಖ್ಯಾತಿಯ ರೇಡಿಯೋ ಮಿರ್ಚಿಗೆ ಶುಭಕಾಲ.ಕನ್ನಡದ ಎಫ್ ಎಂ ವಾಹಿನಿಗಳಲ್ಲಿ ರೇಡಿಯೋ ಮಿರ್ಚಿಗೆ ಮೊದಲ ಸ್ಥಾನ.ಇದರಿಂದ ಬೆಂಗಳೂರಿನಲ್ಲಿ ಕನ್ನಡ ಹಾಡು ಕೇಳುವ ಮಂದಿ ಇನ್ನೂ ಜೀವಂತ ಇದ್ದಾರೆ ಎಂಬುದು ಖಾತ್ರಿ ಆಗಿದೆ.

ಮಿರ್ಚಿ,ಬಿಗ್ ಎಫ್ ಎಂ, ರೈನ್ ಬೊ ಎಲ್ಲದರ ಅಂಕಿ ಅಂಶ ಸೇರಿಸಿದರೆ ಮಾರುಕಟ್ಟೆಯಲ್ಲಿ ಕನ್ನಡ ಹಾಡುಗಳನ್ನು ಕೇಳುವವರ ಸಂಖ್ಯೆ ಶೇ. 75 ರಷ್ಟಾಗಿರುವುದು. ಅಚ್ಚರಿಯ ಜೊತೆಗೆ ಉತ್ತಮ ಬೆಳವಣಿಗೆ ಎಂದು ರೇಡಿಯೋ ಮಿರ್ಚಿವಾಹಿನಿ ಪತ್ರಿಕಾ ಪ್ರಕಟನೆ ನೀಡಿದೆ.

ಕೆಲವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕನ್ನಡಿಗರೇ ಇಲ್ಲ. ಬರೀ ಹಿಂದಿ ಹಾಗೂ ಇಂಗ್ಲೀಷ್ ಕೇಳುಗರೇ ಮಾತ್ರ ಹಾಗಾಗಿ ನಾವು ಅದನ್ನೇ ಪ್ರಸಾರ ಮಾಡುತ್ತೇವೆ ಎಂದಿದ್ದ ಖಾಸಗಿ ಎಫ್ ಎಂ ವಾಹಿನಿಗಳ ಮುಖಕ್ಕೆ ಹೊಡೆದ ಹಾಗೆ ಆಗಿದೆ ಇಂದಿನ ಅಂಕಿ ಅಂಶ. ಇದಕ್ಕೆ ಲ್ಲಾ ಕಾರಣ ಕನ್ನಡ ಚಿತ್ರಸಂಗೀತದಲ್ಲಿನ ಇತ್ತೀಚಿನ ಏಳಿಗೆ ಎಂದರೆ ತಪ್ಪಾಗಲಾರದು.ಉತ್ತಮ ಗುಣಮಟ್ಟದ ಸಂಗೀತ, ಸಾಹಿತ್ಯ ಇತರೆ ಭಾಷೆಯ ಕೇಳುಗರನ್ನು ಆಕರ್ಷಿಸಿದೆ .

ಮನೋಮೂರ್ತಿ, ಗುರುಕಿರಣ್ ಸಂಗೀತಕ್ಕೆ ಭಾರಿ ಬೇಡಿಕೆಯಿದೆ ಎನ್ನುತ್ತಾರೆ ರೇಡಿಯೋ ಮಿರ್ಚಿ ವ್ಯವಹಾರಿಕ ಮುಖ್ಯಸ್ಥ ರಾಹುಲ್.ಕನ್ನಡ ಕೇಂದ್ರ ಸ್ಥಾನದಲ್ಲಿ ಇಲ್ಲ ಎಂಬ ಗ್ರಹಿಕೆಯನ್ನು ಜಾಹೀರಾತುದಾರರು ಮೊದಲು ಬದಲಿಸಿಕೊಳ್ಳಬೇಕಿದೆ. ಕನ್ನಡದ ಮೂಲಕವೇ ನಾವು ಉತ್ಪನ್ನಗಳನ್ನು ಪ್ರಚುರಪಡಿಸಲು ಸಾಧ್ಯ ಎಂಬುದು ಗ್ರಹಿಸಬೇಕು ಎಂದು ರೇಡಿಯೊ ಮಿರ್ಚಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನವೀನ್ ಚಂದ್ರ ಹೇಳಿದ್ದಾರೆ.ಒಟ್ಟಿನಲ್ಲಿ ಮಿರ್ಚಿ ಕನ್ನಡ ಹಾಡುಗಳಿಗೆ ಕೂಡ ಮಾರುಕಟ್ಟೆ ಇದೆ ಎಂಬುದನ್ನು ಸಾಧಿಸಿ ತೋರಿಸಿದೆ.

(ಏಜನ್ಸೀಸ್ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X