ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮೇಲೆ ಶಾಪಿಂಗ್ ಚಾನೆಲ್ ನೋಡಿ:ಖರೀದಿ ಮಾಡಿ

By Staff
|
Google Oneindia Kannada News

ನವದೆಹಲಿ: ದಿನಪೂರ್ತಿ ಖರೀದಿಯಲ್ಲಿ ಮುಳುಗಿರುವವರಿಗಾಗಿ ಸಹಾಯಕವಾಗುವಂತೆ 24 ಗಂಟೆ ಗಳ ಕಾಲ ಪ್ರಸಾರವಾಗುವ ಶಾಪಿಂಗ್ ಚಾನೆಲ್ ಬರಲಿದೆ. ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಭಾರತದ ಮೊದಲ ಶಾಪಿಂಗ್ ಚಾನೆಲ್, 'ಹೋಮ್ ಶಾಪ್ 18' ನಿಮ್ಮ ಟಿವಿ ಪರದೆಯನ್ನು ಆವರಿಸಲಿದೆ.

ನೆಟ್ ವರ್ಕ್ 18 ಪ್ರಾರಂಭಿಸುತ್ತಿರುವ ಈ ಚಾನೆಲ್ ಸುಮಾರು 150 ಬ್ರಾಂಡ್ ಗಳ 15,000 ಉತ್ಪನ್ನಗಳನ್ನು ವೀಕ್ಷಕರಿಗೆ ತೋರಿಸಲು ತಯಾರಿ ಮಾಡಿಕೊಂಡಿದೆ. ಸುಮಾರು 2ಸಾವಿರ ನಗರಗಳಿಗೆ ನಮ್ಮ ಚಾನೆಲ್ ಅನ್ನು ಪ್ರಸಾರ ಮಾಡುವ ಉದ್ದೇಶ ಹೊಂದಿದೆ ಎಂದು ಚಾನೆಲ್ ನ ಸಿಇಒ ಸಂದೀಪ್ ಮಲ್ಹೋತ್ರಾ ಹೇಳಿದ್ದಾರೆ.


ಗೆಟ್ಟಿ ಇಮೇಜಸ್ ಮಾರಾಟಕ್ಕಿದೆ

ವಾಷಿಂಗ್ಟನ್: ಅಂತರ್ಜಾಲ ವಲಯದಲ್ಲಿ ಫೊಟೋ ಪೂರೈಕೆ ಹೆಸರುವಾಸಿಯಾದ ಗೆಟ್ಟಿ ಇಮೇಜಸ್ ಮಾರಾಟಕ್ಕಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.ಜನವರಿ ಅಂತ್ಯದವರೆಗೂ ಖರೀದಿಗಾಗಿ ಬಿಡ್ ಸಲ್ಲಿಸಲು ಅವಕಾಶವಿದೆ.

ಈಗಾಗಲೇ ಕೋಲ್ಬರ್ಗ್, ಕ್ರೆವಿಸ್ ರಾಬರ್ಟ್, ಬೈನ್ ಕ್ಯಾಪಿಟಲ್ ಸೇರಿದಂತೆ ಅನೇಕ ಕಂಪೆನಿಗಳು ಬಿಡ್ ಸಲ್ಲಿಸಿವೆ. ಸುಮಾರು 1.5 ಬಿಲಿಯನ್ ಡಾಲರ್ ಗಿಂತ ಹೆಚ್ಚಿಗೆ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆಯಿದೆ ಎಂಬುದು ನೆಟ್ ಪ್ರಪಂಚದ ಪಂಡಿತರ ಅಭಿಪ್ರಾಯ.
(ಏಜನ್ಸೀಸ್ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X