ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಮೆಟ್ರೊ ಕಣ್ಣು ಲಾಲ್ ಬಾಗ್ ಮರಗಳ ಮೇಲೆ

By Staff
|
Google Oneindia Kannada News

ಬೆಂಗಳೂರು, ಜ.22: ನಗರದ ಪ್ರಮುಖ ಸಸ್ಯಕಾಶಿಯ ಮರಗಳಿಗೆ ಕುತ್ತು ಬಂದಿದೆ. ನಮ್ಮ ಮೆಟ್ರೋ ರೈಲು ಯೋಜನೆಗೆ ಲಾಲ್ ಬಾಗ್ ತೊಟದ ಕಾಲು ಎಕರೆ ಭೂಮಿ ಧ್ವಂಸವಾಗಲಿದೆ.

ಸುಮಾರು 250 ಎಕರೆ ವಿಸ್ತೀರ್ಣದ ಲಾಲ್ ಬಾಗ್ ತೋಟದಿಂದ 1,135 ಚ.ಮೀ ಗಳಷ್ಟು ಭೂಮಿ ಮೆಟ್ರೋ ರೈಲು ಯೋಜನೆಪಾಲಾಗಲಿದೆ.ಇದರ ಪರಿಣಾಮವಾಗಿ ಬೆಳೆದು ನಿಂತ ಸುಮಾರು 35 ಮರಗಳ ಮಾರಣ ಹೋಮ ನಡೆಯಲಿದೆ.ಈ ಬಗ್ಗೆ ರಾಜ್ಯ ಪಾಲರ ಕಾರ್ಯಕಾರಣಿ ಸಮಿತಿ ಗುಟ್ಟಾಗಿ(ಜ.17)ಈ ಜಾಗವನ್ನು ಮೆಟ್ರೊ ಯೋಜನೆ ನಿರ್ವಹಣೆ ಹೊತ್ತಿರುವ ಬಿಎಂಆರ್ ಸಿಎಲ್ ಅವರಿಗೆ ನೀಡಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಲಾಲ್ ಬಾಗ್ ಪಶ್ಚಿಮ ದ್ವಾರದಿಂದ ಸೌಥ್ ಎಂಡ್ ರಸ್ತೆ ಕಡೆಗೆ ಸಾಗುವ ಮೆಟ್ರೊ ರೈಲಿನ ನಿಲ್ದಾಣವನ್ನು ಆರ್ ವಿ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. 5 ಮೀ ಅಗಲ ಹಾಗೂ 135 ಮೀ ಉದ್ದದ ಲಾಲ್ ಬಾಗ್ ಸ್ಟೇಷನ್ ತಲೆ ಎತ್ತಲಿದೆ. ಪ್ರಸ್ತುತ ಯೋಜನೆಯನ್ನು ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಬಿಎಂಆರ್ ಸಿಯ ವ್ಯವಸ್ಥಾಪಕ ನಿರ್ದೇಶಕ ವಿ ಮಧು ಹೇಳಿದ್ದಾರೆ.

ಅಧಿಕಾರಿಗಳ ಅರಣ್ಯರೋದನ:

ಲಾಲ್ ಬಾಗ್ ನ ಭೂಮಿಯನ್ನು ನೀಡಲು ಅಸಮ್ಮತಿಯನ್ನು ಸೂಚಿಸಿರುವ ರಾಜ್ಯ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಲಾಲ್ ಬಾಗ್ ಬದಲು ಬೇರೆ ಸ್ಥಳವನ್ನು ಪಡೆಯುವಂತೆ ಬಿಎಂಆರ್ ಸಿ ಎಲ್ ಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಕರ್ನಾಟಕ ಉದ್ಯಾನ ಮತ್ತು ಸಂರಕ್ಷಣಾ 1975 ರ ಕಾಯ್ದೆ ಅಡಿ ಲಾಲ್ ಬಾಗ್ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ತೋಟಗಾಅರಿಕೆ ಹೊರತುಪಡಿಸಿ ಉಳಿದ ಚಟುವಟಿಕೆಗಳಿಗೆ ನಿಷಿದ್ಧ ಹೇರಲಾಗಿದೆ.

ಆದರೆ, ಸದರಿ ಕಾಯ್ದೆಯನ್ನೇ ತಿದ್ದುಪಡಿ ಮಾಡಲು ರಾಜ್ಯಪಾಲರ ಸಮಿತಿ ಮುಂದಾಗಿದೆ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಸಮಿತಿ ಹೇಳಿದೆ. ಲಾಲ್ ಬಾಗ್ ಜತೆಗೆ ನೆಹರೂ ತಾರಾಲಯದ ಎದುರು ಇರುವ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನದ 1,123 ಚದರ ಅಡಿ ಜಾಗವನ್ನ್ನು ರಸ್ತೆ ಅಗಲೀಕರಣ ಮಾಡಲು ಬಳಸುವಂತೆ ರಾಜ್ಯಪಾಲರ ಕಾರ್ಯಕಾರಣಿ ನೀಡಲು ನಿರ್ಧರಿಸಿದೆ.

(ಏಜನ್ಸೀಸ್ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X