ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷಮಿಸಿ, ರಸ್ತೆ ನಿರ್ಮಾಣ ಕಾರ್ಯ ಸಾಗುತ್ತಿದೆ

By Staff
|
Google Oneindia Kannada News

ಬೆಂಗಳೂರು, ಜ.16:ನಗರದ ಸ್ಯಾಂಕಿ ಕೆರೆ ಹಾಗೂ ಕಾವೇರಿ ಜಂಕ್ಷನ್ ನಲ್ಲಿ ಮೂರು ದಿನಗಳ ಕಾಲ ರಸ್ತೆಗಳು ವಾಹನಗಳಿಗೆ ಬಂದ್ ಆಗಲಿವೆ. ಬಹು ನಿರೀಕ್ಷಿತ ಅಂಡರ್ ಪಾಸ್ ಅಳವಡಿಸುವ ಕಾಮಗಾರಿ ಬುಧವಾರ ಬೆಳಗ್ಗೆ ಆರಂಭಗೊಂಡಿದೆ. ಮುಂದಿನ ಮೂರು ದಿನಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಇದೇ ಮೊದಲ ಬಾರಿಗೆ ಅತ್ಯಾಧುನಿಕ ಆರ್ ಸಿ ಪ್ರಿಕಾಸ್ಟ್ ಎಲಿಮೆಂಟ್ ಗಳನ್ನು ಬಳಸಿ, 1.5 ಕೋಟಿ ರು ವೆಚ್ಚದಲ್ಲಿ ಈ ಅಂಡರ್ ಪಾಸ್ ನಿರ್ಮಾಣವಾಗುತ್ತಿದೆ.ಈ ಕಾಮಗಾರಿ ಪೂರ್ಣಗೊಳ್ಳಲು ಜ.19 ರವರೆಗೂ ಕಾಯಬೇಕಾದ ಹಿನ್ನೆಲೆಯಲ್ಲಿ ವಾಹನ ಚಾಲಕರಿಗೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.

1. ಮಲ್ಲೇಶ್ವರ, ಯಶವಂತಪುರ, ಸದಾಶಿವ ನಗರ ಹಾಗೂ ವೈಯಾಲಿಕಾವಲ್ ಕಡೆಯಿಂದ ಬರುವ ವಾಹನಗಳು ಭಾಷ್ಯಂ ವೃತ್ತದ ಬಳಿ ಮಾರ್ಗ ಬದಲಿಸಿ ವೈಯಾಲಿಕಾವಲ್ 2ನೇ ಮುಖ್ಯರಸ್ತೆಯಲ್ಲಿನ ಪೊಲೀಸ್ ಠಾಣೆ ಜಂಕ್ಷನ್ ವರೆಗೂ ಸಾಗಿ ಅಲ್ಲಿಂದ ಬಲಕ್ಕೆ ತಿರುವು ಪಡೆದು ದೇವಸ್ಥಾನ ರಸ್ತೆಯ ಕಡೆಗೆ ಸಾಗಬಹುದು.

2. ಇದೇ ಮಾರ್ಗದಲ್ಲಿ ಬರುವ ವಾಹನಗಳು ವೈಯಾಲಿಕಾವಲ್ ಪೊಲೀಸ್ ಠಾಣೆ ಜಂಕ್ಷನ್ ಮಾರ್ಗವಾಗಿ 11ನೇ ಅಡ್ಡರಸ್ತೆ ಮೂಲಕ ದೇವಸ್ಥಾನ ರಸ್ತೆಗೆ ಹೋಗಬಹುದು.

3. ಭಾಷ್ಯಂ ವೃತ್ತದಿಂದ ಉತ್ತರದ ಕಡೆ ಸದಾಶಿವನಗರ ಮಾರುತಿ ವೃತ್ತದ ಕಡೆಗೆ ಸಾಗಿ ಅಲ್ಲಿಂದ ಬಲಕ್ಕೆ ತಿರುವು ಪಡೆದು 8 ನೇ ಮುಖ್ಯರಸ್ತೆಯಲ್ಲಿ ಸಾಗಿ ರಮಣ ಮಹರ್ಷಿ ರಸ್ತೆ ಜಂಕ್ಷನ್ ಕಡೆಗೆ ಮುಂದುವರೆಯಬಹುದು.

4. ಪ್ಯಾಲೇಸ್ ಗುಟ್ಟಹಳ್ಳಿ ರಸ್ತೆಯನ್ನು ಜಟಕಾ ಸ್ಟ್ಯಾಂಡ್ ವೃತ್ತದಿಂದ ವಿನಾಯಕ ವೃತ್ತದವರೆಗೂ ಹಾಗೂ ಅಲ್ಲಿಂದ ಬಲ ತಿರುವು ಪಡೆದು ವೈಯಾಲಿಕಾವಲ್ 2ನೇಮುಖ್ಯ ರಸ್ತೆ ಮತ್ತು 11ನೇಅಡ್ಡರಸ್ತೆ ಜಂಕ್ಷನ್ ವರೆಗೆ ಸಾಗುವ ಮಾರ್ಗವು ಪ್ರಸ್ತುತ ದ್ವಿಮುಖ ಸಂಚಾರವಿದ್ದು, ಅದನ್ನು ತಾತ್ಕಾಲಿಕವಾಗಿ ಏಕಮುಖ ಸಂಚಾರವಾಗಿ ಮಾರ್ಪಡಿಸಲಾಗಿದೆ.ಪೊಲೀಸ್ ಸ್ಟೇಷನ್ ಹಾಗೂ 11ನೇ ಅಡ್ಡರಸ್ತೆ, ಜಂಕ್ಷನ್ ನಿಂದ ಮುಂದೆ ಭಾಷ್ಯಂ ವೃತ್ತದ ಕಡೆಗೆ ದ್ವಿಮುಖ ಸಂಚಾರ ಮುಂದುವರೆಯಬಹುದು.

(ದಟ್ಸ್ ಕನ್ನಡವಾರ್ತೆ)
ಎಪ್ಪತ್ತೆರಡುಗಂಟೆಗಳಲ್ಲಿ ಸುರಂಗಮಾರ್ಗಗಳ ನಿರ್ಮಾಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X