ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12ದಿನಗಳ ಕಾಲ ಮೈಸೂರಿನಲ್ಲಿ ಆದಿಕವಿ ಪಂಪನ ಕಾವ್ಯ ಹಬ್ಬ

By Staff
|
Google Oneindia Kannada News

ಮೈಸೂರು, ಜ.16: ಆದಿಕವಿ ಪಂಪನ ವಿಕ್ರಮಾರ್ಜುನ ವಿಜಯಂ ಕಾವ್ಯದ ವಾಚನ, ವ್ಯಾಖ್ಯಾನ, ಉಪನ್ಯಾಸ ಹಾಗೂ ಆದಿಪುರಾಣದ ವಾಚನ ಕಾರ್ಯಕ್ರಮವನ್ನು ಇಲ್ಲಿನ ಗಾನಭಾರತೀ ಸಭಾಂಗಣದಲ್ಲಿ ಪರಂಪರೆ ಸಂಸ್ಥೆ ಹಮ್ಮಿಕೊಂಡಿದೆ.

(ಜ.16)ಇಂದಿನಿಂದ ಜ. 27 ರವರೆಗೂ ನಡೆಯಲಿರುವ ಈ ವಿಶಿಷ್ಟ ಕಾರ್ಯಕ್ರಮವನ್ನು ಪರಂಪರೆ ಸಂಸ್ಥೆಯ ಜತೆಗೆ ಮೈಸೂರಿನ ಭಾರತೀಯ ಭಾಷಾ ಕೇಂದ್ರ ಮತ್ತು ಗಾನಭಾರತೀ ಸಂಸ್ಥೆಗಳು ನಡೆಸಲಿವೆ. ಆದಿಚುಂಚನಗಿರಿ ರಸ್ತೆಯಲ್ಲಿನ ವೀಣೆ ಶೇಷಣ್ಣ ಭವನದಲ್ಲಿ ನಡೆವ ಹನ್ನೆರಡು ದಿನಗಳ ಕಾಲದ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಗಮಕಿಗಳು, ಕನ್ನಡ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ. ಇದಲ್ಲದೆ ಕನ್ನಡ ವಿದ್ವತ್ ಪರಂಪರೆಯ ಹಿರಿಯ ಗುರುಗಳ ಸ್ಮರಣೆಯ ಉದ್ದೇಶದಿಂದ ಬಹುಪಾಲು ಪ್ರೊ.ಡಿ.ಎಲ್. ನರಸಿಂಹಾಚಾರ್ ಮತ್ತು ಪ್ರೊ.ತೀ.ನಂ.ಶ್ರೀಕಂಠಯ್ಯ ಅವರ ನೇರ ಶಿಷ್ಯರಿಂದ ವ್ಯಾಖ್ಯಾನ/ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಮೂಲಕ ಅಪರೂಪದ ಗುರುನಮನ ಕಾರ್ಯಕ್ರಮವಾಗಲಿದೆ.

ಅದಿಕವಿಪಂಪನ ಕುರಿತಾದ ಮೂರು ವಿಡಿಯೋ ಸಿಡಿಗಳ ಪ್ರದರ್ಶನ ಹಾಗೂ ವಸ್ತು ಪ್ರದರ್ಶನ ಈ ಉತ್ಸವದ ಇನ್ನೊಂದು ಪ್ರಮುಖ ಆಕರ್ಷಣೆ. ವಿದ್ಯಾರ್ಥಿಗಳು, ಕನ್ನಡ ಕಾವ್ಯಾಸಕ್ತರು, ಸಂಸ್ಕೃತಿಪ್ರಿಯರಿಗೆ ಈ ಸಾಹಿತ್ಯ ಉತ್ಸವ ರಸದೌತಣ ನೀಡಲಿದೆ. ಈ ಉತ್ಸವದಲ್ಲಿ 22ಕ್ಕೂ ಹೆಚ್ಚಿನ ಗಮಕಿಗಳು, 15 ಕ್ಕೂ ಅಧಿಕ ಹಿರಿಯ ಪ್ರಾಧ್ಯಾಪಕರು ಪಾಲ್ಗೊಳ್ಳಲಿದ್ದಾರೆ.

ಉದ್ಘಾಟನಾ ದಿನದ ವಿವರ:

ಸಂಜೆ 4:45 :ವಸ್ತು ಪ್ರದರ್ಶನ ಉದ್ಘಾಟನೆ : ಪ್ರೊ.ಜಿ..ವೆಂಕಟಸುಬ್ಬಯ್ಯ
ಸಂಜೆ 6:00:ಉದ್ಘಾಟನಾ ಸಮಾರಂಭ :ಉಪಸ್ಥಿತಿ:ಶ್ರೀಭುವನಕೀರ್ತಿ ಸ್ವಾಮೀಜಿ
ಉತ್ಸವದ ಉದ್ಘಾಟನೆ: ಪ್ರೊ.ದೇ.ಜವರೇಗೌಡ
ಸಂಜೆ 6:45 ರಿಂದ 8:15: ಪಂಪನ ಜೀವನ ಮತ್ತು ಕೃತಿಗಳು , ಉಪನ್ಯಾಸ:ವಿದ್ವಾನ್ ಪಾವಗಡ ಪ್ರಕಾಶ್ ರಾವ್
ರಾತ್ರಿ 8:15 ರಿಂದ 8:45 : ಕನ್ನಡ ಗಣಕ ಪರಿಷತ್ತು ತಯಾರಿಸಿದ ಸಿಡಿ ಪ್ರದರ್ಶನ/ ವಿವರಣೆ.

ದಿನಾಂಕ 17ರಿಂದ ಆದಿಕವಿ ಪಂಪನ ಆದಿಪುರಾಣ ಹಾಗೂ ವಿಕ್ರಮಾರ್ಜುನ ವಿಜಯ ಮಹಾಕಾವ್ಯಗಳ ಗಮಕ ವಾಚನ ಹಾಗೂ ವ್ಯಾಖ್ಯಾನ /ಉಪನ್ಯಾಸ ಕಾರ್ಯಕ್ರಮ ಪ್ರಾರಂಭವಾಗಲಿದೆ. ಪ್ರೊ.ಅ.ರಾ.ಮಿತ್ರ, ಪ್ರೊ.ಎಂ.ರಾಮಚಂದ್ರ, ಪ್ರೊ.ಜಿ.ಎಸ್, ಜಿ.ಎಸ್.ಸಿದ್ಧಲಿಂಗಯ್ಯ, ಪ್ರೊ.ಜಿ.ಹೆಚ್. ನಾಯಕ, ಪ್ರೊ. ಎಂ. ವೃಷಭೇಂದ್ರಸ್ವಾಮಿ, ಪ್ರೊ. ಹಂಪನಾಗರಾಜಯ್ಯ, ಪ್ರೊ.ಕಮಲಾ ಹಂಪನಾ ಹಾಗೂ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಮುಂತಾದ ವಿದ್ವಾಂಸರ ವ್ಯಾಖ್ಯಾನದಲ್ಲಿ ಆದಿಕವಿ ಪಂಪನ ಕಾವ್ಯಾಧಾರೆ ಹರಿಯಲಿದೆ.

ಸಮಾರೋಪ ಸಮಾರಂಭದ ದಿನ ಮುಖ್ಯ ಅತಿಥಿಗಳಾಗಿ ಪ್ರೊ.ಸಾ.ಶಿ. ಮರುಳಯ್ಯ ಅವರು ಆಗಮಿಸಲಿದ್ದಾರೆ. ಡಾ. ಪ್ರಭುಶಂಕರ, ಪ್ರೊ.ಬಿ.ಎ.ವಿವೇಕ ರೈ, ಕಾ.ತ. ಚಿಕ್ಕಣ್ಣ,,ಶ್ರೀನಿವಾಸ ಹಾವನೂರ್ ಸೇರಿದಂತೆ ತೀನಂಶ್ರೀ ಹಾಗೂ ಡಿಎಲ್ ಎನ್ ಅವರ ಕುಟುಂಬದವರು ಈ ಉತ್ಸವಕ್ಕೆ ಆಗಮಿಸಿ ಮೆರಗು ನೀಡಲಿದ್ದಾರೆ. ಒಟ್ಟಿನಲ್ಲಿ ಸಾಹಿತ್ಯಾಸಕ್ತರು ಕಾತುರದಿಂದ ಕಾದಿರುವ ಆದಿಕವಿ ಪಂಪನ ಉತ್ಸವ ಅಭೂತಪೂರ್ವ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಪರಂಪರೆ ಸಂಸ್ಥೆ:08212542952
ಪಿ.ಕೃಷ್ಣಕುಮಾರ:99860 37311

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X