ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿ ಶೇಷಾದ್ರ್ರಿರವರ ಅತಿಥಿ ಚಿತ್ರ ಮಲ್ಲೇಶ್ವರದಲ್ಲಿ ಪ್ರದರ್ಶನ

By Staff
|
Google Oneindia Kannada News

ದತ್ತಣ್ಣ,ಬೆಂಗಳೂರು, ಜ.16: ಪಿ.ಶೇಷಾದ್ರಿ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ 'ಅತಿಥಿ' ಚಿತ್ರದ ವಿಶೇಷ ಪ್ರದರ್ಶನವನ್ನು ಅವಿರತ ಟ್ರಸ್ಟ್ ಹಮ್ಮಿಕೊಂಡಿದೆ. ದಾರಿ ತಪ್ಪುತ್ತಿರುವ ಇಂದಿನ ಯುವ ಪೀಳಿಗೆಗೆ ತಿಳಿಹೇಳುವ ಕಥೆಯನ್ನು ಹೊಂದಿರುವ ಕಾರಣ ಗಣತಂತ್ರ ದಿನದಂದು ಈ ಚಿತ್ರ ಪ್ರದರ್ಶನವನ್ನು ಹಮ್ಮಿಕೊಂಡಿದ್ದೇವೆ ಎಂದು ಅವಿರತ ಟ್ರಸ್ಟ್ ನ ಅಧ್ಯಕ್ಷ ಕೆ.ಟಿ. ಸತೀಶ್ ಗೌಡ ತಿಳಿಸಿದರು.

ವಿದ್ಯಾವಂತ ಯುವಕರು ಭಯೋತ್ಪಾದಕರಾಗಿ ಮಾರ್ಪಾಡಾಗಿ, ನಾಗರಿಕ ಸಮಾಜದಲ್ಲಿ ದುಷ್ಕೃತ್ಯದಲ್ಲಿ ತೊಡಗುವುದು, ಅದರಿಂದ ಮುಗ್ಧ ಜನರಿಗೆ ಆಗುವ ನೋವು, ಇದಕ್ಕೆ ಸಿಗದ ಪರಿಹಾರದ ಸುತ್ತ ಹೆಣೆದ ಕಥೆಯನ್ನು ಪಿ. ಶೇಷಾದ್ರಿ ಹಾಗೂ ಜೆ ಎಂ ಪ್ರಹ್ಲಾದ್ ರಚಿಸಿದ್ದಾರೆ. ಹಿರಿಯ ನಟ ದತ್ತಾತ್ರೇಯ , ಪ್ರಕಾಶ್ ರೈ, ಲಕ್ಷ್ಮಿ ಚಂದ್ರಶೇಖರ್, ಬೇಬಿ ರಕ್ಷಾ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಥಾ ಹಂದರ ಹೊಂದಿದೆ.

ಸದಭಿರುಚಿಯ ಚಿತ್ರಗಳನ್ನು ಹೆಚ್ಚಾಗಿ ಐಟಿ ಕ್ಷೇತ್ರದ ಜನತೆಗೆ ಪ್ರದರ್ಶನ ಮಾಡುತ್ತಾ ಬಂದಿರುವ ಅವಿರತ ಟ್ರಸ್ಟ್ , ಕೆಲ ದಿನಗಳ ವಿರಾಮದ ನಂತರ ಪುನಃ ಚಲನಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳುತ್ತಿದೆ. ಎಂದಿನಂತೆ ಅವಿರತ ಟ್ರಸ್ಟ್ ಜತೆಗೆ ಬಾನುಲಿ ಡಿಸೈನ್ ಸ್ಟುಡಿಯೋ(ಈ ಮುಂಚೆ ಐಡಿ ಟೆಕ್ನಾಲಜೀಸ್) ಹಾಗೂ ಸೈನೈಡ್ ಚಿತ್ರ ನಿರ್ಮಾಪಕ ಮುರಳಿಧರ ಹಾಲಪ್ಪ ಕೈ ಜೋಡಿಸಿದ್ದಾರೆ. ಪಿ. ಶೇಷಾದ್ರಿಯವರ ಬೇರು ಚಿತ್ರದ ಮೂಲಕ ಸದಭಿರುಚಿ ಚಿತ್ರಗಳ ಪ್ರದರ್ಶನ ಪ್ರಾರಂಭಿಸಿದ ಅವಿರತ ಟ್ರಸ್ಟ್, ಇದುವರೆವಿಗೂ ಸುಮಾರು 20ಕ್ಕೂ ಅಧಿಕ ವಿಶೇಷ ಪ್ರದರ್ಶನ ಹಾಗೂ ಸಂವಾದಗಳನ್ನು ಯಶಸ್ವಿಯಾಗಿ ಏರ್ಪಡಿಸಿದೆ.

ದಿನಾಂಕ : 26 ಜನವರಿ ಶನಿವಾರ
ಸ್ಥಳ: ಶ್ರೀಗಂಧ ಪ್ರಿವ್ಯೂ ಚಿತ್ರಮಂದಿರ, 4ನೇ ಮುಖ್ಯರಸ್ತೆ, 18 ನೇ ಅಡ್ಡರಸ್ತೆ, ಮಲ್ಲೇಶ್ವರ
ಸಮಯ : ಸಂಜೆ 4.30
ಟಿಕೆಟ್ ಬೆಲೆ : 100 ರೂ.

ಟಿಕೆಟ್ ಕಾದಿರಿಸಲು ಸಂಪರ್ಕಿಸಿ:
ಕೆ.ಟಿ. ಸತೀಶ್ ಗೌಡ
ಈ-ಮೇಲ್ : [email protected]
ಸಂಪರ್ಕ : 98800 86300 ( ಸಂಜೆ 4 ಗಂಟೆ ನಂತರ ಕರೆಮಾಡಿ)

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X