ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯಾ ಶಾಲೆಗೆ ಬಾಂಬ್ ಬೆದರಿಕೆ

By Staff
|
Google Oneindia Kannada News

ಬೆಂಗಳೂರು, ಜ.14: ಸೋಮವಾರ ಬೆಳಗ್ಗೆ ಜಯನಗರದ ವಿಜಯಾ ಪ್ರೌಢಶಾಲೆ (ಸೌ‌ತ್‌ ಎಂಡ್ ಸರ್ಕಲ್) ಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಯಭೀತರಾಗಿ ಹೊರಗೆ ಓಡಿಬಂದರು. ಪೊಲೀಸ್ ತಪಾಸಣೆಯ ನಂತರ ಇದು ಹುಸಿ ಬಾಂಬ್ ಕರೆ ಎಂದು ಗೊತ್ತಾಯಿತು.

ಇಂದು ಬೆಳಗ್ಗೆ ಶಾಲೆಗೆ ಫೋನ್ ಮಾಡಿದ ಯುವಕಿ ತನ್ನ ಹೆಸರು ವೇದಿಕಾ ಎಂದು ಪರಿಚಯಿಸಿಕೊಂಡು ತಾನು ಮಹಿಳಾ ಪೊಲೀಸ್ ಎಂದು ಹೇಳಿದ್ದಾಗಿ ತಿಳಿದುಬಂದಿದೆ. ಆಕೆ ಫೋನ್ ನಂಬರನ್ನು ಸಹಾ ಕೊಟ್ಟಿದ್ದಾಗಿ ತಿಳಿಸಿದ್ದಾರೆ. ಬಾಂಬ್ ಬೆದರಿಕೆ ಕರೆ ಮಾಡಿದವರ ಸುಳಿವು ಹಾಗೂ ಕಾರಣ ಇನ್ನೂ ತಿಳಿದುಬಂದಿಲ್ಲ. ಜಯನಗರ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X