ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ನೋಂದಣಿ ಕಚೇರಿ ವಿಭಜನೆ, 15ಕ್ಕೆ ಸಂಖ್ಯೆ ಹೆಚ್ಚಳ

By Staff
|
Google Oneindia Kannada News

ಬೆಂಗಳೂರು , ಜ.12: ನಗರ ಜಿಲ್ಲೆಯ ಉಪನೋಂದಣಿ ಕಚೇರಿಗಳನ್ನು ಪುನರ್ ವಿಭಜನೆಮಾಡಲಾಗಿದೆ. ನಗರದ 6 ಪ್ರಮುಖ ಉಪನೋಂದಣಿ ಕಚೇರಿಗಳನ್ನು ವಿಭಜಿಸಿ 15 ಉಪನೋಂದಣಿ ಕಚೇರಿಗಳಾಗಿ ಪರಿವರ್ತಿಸಲಾಗಿದೆ. ಹೊಸ ನೋಂದಣಿ ಕಚೇರಿಗಳು ಮಾರ್ಚ್ 1 ರಿಂದ ಕಾರ್ಯ ನಿರ್ವಹಿಸಲಿವೆ.

ರಾಜಾಜಿನಗರ,ಜಯನಗರ,ಬಸವನಗುಡಿ,ಗಾಂಧಿನಗರ,ಶ್ರೀರಾಂಪುರ ಹಾಗೂ ಶಿವಾಜಿನಗರದ ಉಪನೋಂದಣಿ ಕಚೇರಿಗಳನ್ನು ವಿಭಜಿಸುವ ಮೂಲಕ ಆಡಳಿತ ವಿಕೇಂದ್ರಿಕರಣವಾಗುತ್ತದೆ. ಪ್ರತಿ ನೋಂದಣಿ ಕಚೇರಿಯಲ್ಲಿ ಕೆಲಸದ ಒತ್ತಡ ಕಡಿಮೆಯಾಗಿ, ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಸಮಯ ಸಿಗುತ್ತದೆ. ಅಲ್ಲದೇ, 15 ಸ್ಥಳಗಳಲ್ಲಿ ನೋಂದಣಿ ಕಚೇರಿ ಕೆಲಸ ನಿರ್ವಹಿಸುವುದರಿಂದ ಆಯಾ ಸ್ಥಳಗಳ ಸಾರ್ವಜನಿಕರು ಹೆಚ್ಚು ಸಮಯ ವ್ಯಯಿಸದೆ ತ್ವರಿತವಾಗಿ ಕಾರ್ಯ ಮುಗಿಸಿಕೊಳ್ಳಬಹುದಾಗಿದೆ ಎಂದು ನೋಂದಣಿ ಮತ್ತು ಮಹಾಪರೀವೀಕ್ಷಕರ ಮತ್ತು ಮುದ್ರಾಂಕಗಳ ಆಯುಕ್ತ ಎಚ್. ಶಶಿಧರ್ ಸುದ್ದಿಗಾರರಿಗೆ ತಿಳಿಸಿದರು.

ವಿಭಜನೆ ನಂತರ ಜಾರಿಗೆ ಬರಲಿರುವ ನೋಂದಣಿ ಕೇಂದ್ರಗಳು ಇಂತಿದೆ: ಶಿವಾಜಿನಗರ(ಕೇಂದ್ರ ಕಚೇರಿ ರಿಚ್ ಮಂಡ್ ಟೌನ್), ಇಂದಿರಾನಗರ(ಮುಖ್ಯ ಕಚೇರಿ ದೊಮ್ಮಲೂರು), ಹಲಸೂರು, ಬಸವನಗುಡಿ, ಚಾಮರಾಜಪೇಟೆ, ಶ್ರೀರಾಮಪುರ, ವಿಜಯನಗರ, ರಾಜಾಜಿನಗರ, ಯಶವಂತಪುರ, ಜಯನಗರ, ಶಾಂತಿನಗರ, ಬಿಟಿಎಂಲೇಔಟ್, ಗಾಂಧಿನಾಗರ, ಮಲ್ಲೇಶ್ವರ, ಗಂಗಾನಗರ.

(ದಟ್ಸ್ ಕನ್ನಡ ವಾರ್ತೆ)
ಅಕ್ರಮ ಆಸ್ತಿ ನೋಂದಣಿ ತಡೆಗೆ ಇ-ಸ್ಟ್ಟಾಂಪಿಂಗ್ ಜಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X