ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಪ್ಪಟ್ಟಾಗಿದೆ ಪ್ರಥಮ ಪ್ರಜೆಯ ಪಗಾರ

By Staff
|
Google Oneindia Kannada News

ನವದೆಹಲಿ, ಜ.10: ದೇಶದ ಪ್ರಥಮ ಪ್ರಜೆಯ ಪಗಾರ ಸೇರಿದಂತೆ ಉಪರಾಷ್ಟ್ರಪತಿ, ರಾಜ್ಯಪಾಲರು ಮತ್ತು ಮಾಜಿ ರಾಷ್ಟ್ರಪತಿ/ಉಪರಾಷ್ಟ್ರಪತಿಗಳ ವೇತನಗಳು ದುಪ್ಪಟ್ಟಾಗಿವೆ. ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವ ವಹಿಸಿದ್ದ ಸಚಿವ ಸಂಪುಟ ಸಭೆಯಲ್ಲಿ ಗುರುವಾರ (ಜ.10) ಈ ನಿರ್ಣಯ ಕೈಗೊಳ್ಳಲಾಯಿತೆಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪಿ.ಆರ್.ದಾಸ್‌ಮುನ್ಷಿ ತಿಳಿಸಿದ್ದಾರೆ.

ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ವೇತನ ಹೆಚ್ಚಾಗಿದ್ದು ರಾಷ್ಟ್ರಪತಿಗಳ ವೇತನವು 50,000 ರೂ.ಗಳಿಂದ 1 ಲಕ್ಷ ರೂ.ಗಳಿಗೆ ಏರಿದೆ. ಉಪರಾಷ್ಟ್ರಪತಿಗಳ ವೇತನವು 40,000 ರೂ.ಗಳಿಂದ 85,000 ರೂ.ಗಳಿಗೆ ಏರಿದೆ.ಹಾಗೆಯೇ ರಾಜ್ಯಪಾಲರ ವೇತನ 75,000 ರೂ.ಗಳಾಗಿದೆ. ಈ ಮುಂಚೆ ಅವರು 36,000 ರೂ. ವೇತನ ಪಡೆಯುತ್ತಿದ್ದರು.

ಉಪರಾಷ್ಟ್ರಪತಿಗಳ ವೇತನಕ್ಕಿಂತಲೂ ಕೆಳಮನೆ ಸದಸ್ಯರ ವೇತನ ಹೆಚ್ಚಾಗಿರುವ ಕಾರಣ ಅನಿವಾರ್ಯವಾಗಿ ಅವರ ವೇತನಶ್ರೇಣಿಯನ್ನು ಪರಿಷ್ಕರಿಸಲಾಯಿತು. ಸಂಸದರು ಪ್ರಸ್ತುತ 68,000 ರೂ. ವೇತನ ಪಡೆಯುತ್ತಿದ್ದಾರೆ ಎಂದು ದಾಸ್‌ಮುನ್ಷಿ ತಿಳಿಸಿದರು.

ಅದೇ ರೀತಿಮಾಜಿ ರಾಷ್ಟ್ರಪತಿಗಳ ವಾರ್ಷಿಕ ವೇತನವನ್ನೂ ದುಪ್ಪಟ್ಟು ಮಾಡಲಾಗಿದೆ. ಅವರ ವಾರ್ಷಿಕ ವೇತನ 6 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಹಾಗೆಯೇ ದಿವಂಗತರಾದ ರಾಷ್ಟ್ರಪತಿ, ಉಪರಾಷ್ಟ್ರಪತಿಗಳ ಪತಿ/ಪತ್ನಿಯರಿಗೆ ಹೆಚ್ಚಿನ ಸವಲತ್ತುಗಳನ್ನು ನೀಡಲಾಗುವುದು. ಕಳೆದ ವರ್ಷವೇ ಈ ನಿರ್ಣಯ ಕೈಗೊಳ್ಳಲಾಗಿತ್ತು. ಆ ಸಮಯದಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳು ನಿವೃತ್ತರಾದ ಕಾರಣ ಈ ನಿರ್ಣಯವನ್ನು ಮುಂದೂಡಲಾಯಿತು ಎಂದು ದಾಸ್‌ಮುನ್ಷಿ ತಿಳಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X