ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಳ್ಳೆ ಭಾಷೆಯನ್ನು ಎಂದಾದರೂ ಕೇಳಿದ್ದೀರಾ!?

By Staff
|
Google Oneindia Kannada News

ಪ್ರಪಂಚದಲ್ಲಿ ಲೆಕ್ಕವಿರುವ, ಲೆಕ್ಕಕ್ಕಿರದ ಎಷ್ಟೋ ಭಾಷೆಗಳಿವೆ. ಅವುಗಳೊಂದಿಗೆ ಇನ್ನೊಂದು ಭಾಷೆ ಸೇರ್ಪಡೆಯಾಗಿದೆ. ಅದು ಮಾನವನ ಭಾಷೆಯಲ್ಲ. ಡಾಲ್ಫಿನ್‌ಗಳದ್ದು. ಇಲ್ಲಿ ಲಿಪಿಯಿಲ್ಲ. ಬರೀ ಶಿಳ್ಳೆಗಳೇ!

Scientists identify the language of dolphinsಡಾಲ್ಫಿನ್‌ಗಳ ಬಗೆಗೆ ಹೇಳಬೇಕೆಂದರೆ, ಇವು ಎರಡನೇ ಮಹಾಯುದ್ಧದ ಸಮಯದಲ್ಲಿ ಅಮೆರಿಕಾ ಮತ್ತು ರಷ್ಯಾ ನೌಕಾದಳದಲ್ಲಿ ಕೆಲಸ ಮಾಡಿವೆ. ಒಂದು ಕಡೆಯಿಂದ ಮತ್ತೊಂದೆಡೆಗೆ ಸುದ್ದಿ ತಲುಪಿಸುತ್ತಿದ್ದವು. ಶತ್ರುವಿನ ಹಡಗುಗಳಿಗೆ ಬಾಂಬುಗಳನ್ನೂ ಇಡುತ್ತಿದ್ದವು. ಇವು ಮನುಷ್ಯನಿಗೆ ಸಾಕಷ್ಟು ಉಪಕಾರವನ್ನೇ ಮಾಡಿವೆ. ಎಂದೂ ಅಪಚಾರ ಬಗೆದಿಲ್ಲ. ಇವುಗಳ ಆಯಸ್ಸು 30 ವರ್ಷ. ಗಂಟೆಗೆ ಸುಮಾರು 50 ಕಿ.ಮೀ ವೇಗದಲ್ಲಿ ಚಲಿಸುತ್ತವೆ. ಇದಿಷ್ಟು ಡಾಲ್ಫಿನ್‌ಗಳ ಬಗ್ಗೆ ಸಂಕ್ಷಿಪ್ತ ವಿವರ! ಈಗ ಅವುಗಳ ಬಗ್ಗೆ ಸಂಕ್ಲಿಷ್ಟ ವಿವರ ಸಿಕ್ಕಿದೆ. ಅದೇನಪ್ಪಾ ಅಂದ್ರೆ...

ಡಾಲ್ಫಿನ್‌ಗಳು ಶಿಳ್ಳೆ ಹಾಕಿಕೊಳ್ಳುತ್ತವೆ ಎಂದು ಬಹಳಷ್ಟು ಮಂದಿಗೆ ಗೊತ್ತು. ಆದರೆ ಆ ಶಿಳ್ಳೆಗಳಿಗೂ ಅರ್ಥವಿದೆ. ಶಿಳ್ಳೆಯ ಮುಖಾಂತರ ಅವು ಮಾತನಾಡಿಕೊಳ್ಳುತ್ತವೆ ಎಂದು ವಿಜ್ಞಾನಿಗಳು ಹೊಸ ಸಂಶೋಧನೆ ಮಾಡಿದ್ದಾರೆ.

ಪ್ರಾಣಿಗಳು ಚಿತ್ರವಿಚಿತ್ರ ಧ್ವನಿಗಳನ್ನು ಹೊಮ್ಮಿಸುತ್ತವೆ. ಆ ಒಂದು ಧ್ವನಿಗಳ ಮೂಲಕ ತಮ್ಮ ಹಸಿವು, ಭಯದಂತಹ ಭಾವನೆಗಳನ್ನು ಹೊರಗೆಡಹುತ್ತವೆ. ಇವುಗಳ ಧ್ವನಿಗಳು ಇತರ ಪ್ರಾಣಿಗಳಿಗೆ ಎಚ್ಚರಿಕೆಯನ್ನೂ ಕೊಡುತ್ತವೆ. ಅಷ್ಟಕ್ಕೆಲ್ಲಾ ಇದನ್ನು ಭಾಷೆ ಎನ್ನಲಾಗದು. ಹಾಗಿದ್ದರೆ ಡಾಲ್ಫಿನ್‌ಗಳು ಹಾಕುವ ಶಿಳ್ಳೆಗೇನು ಅರ್ಥ? ಇವು ತೀರಾ ಸಂಕ್ಲಿಷ್ಟ ಶಿಳ್ಳೆಗಳು. ಸಂದರ್ಭಾನುಸಾರ ಬದಲಾಗುತ್ತಿರುತ್ತದೆ. ಇವು ವಿವಿಧ ರೀತಿಯ ಶಿಳ್ಳೆಗಳನ್ನು ಹಾಕಿ ಆಯಾ ಸಂದರ್ಭದ ಬಗ್ಗೆ ಮಾತನಾಡಿಕೊಳ್ಳುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಶಿಳ್ಳೆಗೂ ಒಂದು ನಿಘಂಟು!

ಮೂರು ವರ್ಷಗಳ ಕಾಲ ಸಂಶೋಧನೆ ಮಾಡಿದ ಆಸ್ಟ್ರೇಲಿಯಾದ ವಿಜ್ಞಾನಿಗಳು ಡಾಲ್ಫಿನ್‌ಗಳು ಹಾಕುವ 200 ವಿಧದ ಶಿಳ್ಳೆಗಳನ್ನು ಗುರ್ತಿಸಿದ್ದಾರೆ. ಶಿಳ್ಳೆಯನ್ನು ಅನುಸರಿಸಿ ಬದಲಾಗುವ ಅವುಗಳ ಭಾವನೆಗಳನ್ನೂ ಕಂಡುಹಿಡಿದಿದ್ದಾರೆ. ವಿವಿಧ ಪದ್ಧತಿಗಳಲ್ಲಿ 51 ಬಗೆಯ ಡಾಲ್ಪಿನ್‌ಗಳಿಂದ 1647 ಶಿಳ್ಳೆಗಳನ್ನು ದಾಖಲಿಸಿದ್ದಾರೆ. ಆ ಶಿಳ್ಳೆಗಳ ಏರಿಳಿತ, ಸಮಯ, ತರಂಗಗಳನ್ನು ವರ್ಗೀಕರಿಸಿ 200 ಬಗೆಯ ಶಿಳ್ಳೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಅಂದರೆ ಒಂದು ವಿಧದಲ್ಲಿ ಡಾಲ್ಪಿನ್‌ಗಳ ಭಾಷೆಗೂ ನಿಘಂಟು ಸಿದ್ಧಪಡಿಸಿದ್ದಾರೆ.

ಫೋನ್‌ನಲ್ಲಿ ನಮ್ಮ ಪರಿಚಿತರ ಧ್ವನಿಯನ್ನು ಕೇಳಿದ ಕೂಡಲೇ ನಾವು ಗುರುತಿಸುವಂತೆ ಡಾಲ್ಫಿನ್‌ಗಳೂ ಗುರುತಿಸುತ್ತವಂತೆ. ಪ್ರತಿ ಡಾಲ್ಫಿನ್‌ಗೂ ಅದರದೇ ಆದಂತಹ ವಿಶಿಷ್ಟವಾದ ಧ್ವನಿ ಇರುತ್ತದಂತೆ. ಶಿಳ್ಳೆಯ ಮೂಲಕ ಅದನ್ನು ಗುರುತುಹಿಡಿಯುತ್ತವಂತೆ. ಇದನ್ನೇ 'ಸಿಗ್ನೇಚರ್ ವಿಜಿಲ್" ಎನ್ನುತ್ತಾರೆ.

ಇವುಗಳ ಶಿಳ್ಳೆ ಭಾಷೆ ಒಂದೇ ತೆರನಾಗಿಲ್ಲ. ಇವುಗಳ ವಾಸಸ್ಥಳ ಬದಲಾದಂತೆ ಭಾಷೆಯೂ ಬದಲಾಗುತ್ತದೆ. ಆಸ್ಟ್ರೇಲಿಯಾದಲ್ಲಿರುವ ಡಾಲ್ಫಿನ್‌ಗಳನ್ನು ಅಮೆರಿಕಾದಲ್ಲಿ ಬಿಟ್ಟರೆ ಇವುಗಳಿಗೂ ಭಾಷಾ ಸಮಸ್ಯೆ ತಲೆದೋರುತ್ತದಂತೆ!

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X