ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಣಿ ಕೊಲೆ ಪಾತಕಿ ಮಲ್ಲಿಕಾ ಪೊಲೀಸರ ವಶಕ್ಕೆ

By Staff
|
Google Oneindia Kannada News

ಬೆಂಗಳೂರು , ಡಿ.31: ಕಳೆದ 8 ವರ್ಷಗಳಲ್ಲಿ ಸುಮಾರು ಆರು ಜನರ ಹತ್ಯೆಗೈದು, ಅನೇಕರ ಹಣ ದೋಚಿ ಪರಾರಿಯಾಗಿದ್ದ ಆರೋಪಿ ಮಹಿಳೆಯನ್ನು ನಗರದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಷಯವನ್ನು ಸುದ್ದಿಗಾರರೊಡನೆ ಹಂಚಿಕೊಂಡ ನಗರಪೊಲೀಸ್ ಆಯುಕ್ತ ಎ ನ್. ಅಚ್ಯುತ್ ರಾವ್, 6 ಜನ ಮಹಿಳೆಯರನ್ನು ಹತ್ಯೆ ಮಾಡಿದ ಆರೋಪಿಯನ್ನು ಮಲ್ಲಿಕಾ ಎಂದು ಗುರುತಿಸಲಾಗಿದೆ. 45 ವರ್ಷ ಈ ಹೆಂಗಸು, ಮಹಿಳೆಯರಿಗೆ ದೇವರ ಹೆಸರಿನಲ್ಲಿ ಮಂಕು ಬೂದಿ ಎರಚಿ, ತನ್ನ ಕಾರ್ಯ ಸಾಧಿಸಿಕೊಳ್ಳುತ್ತಿದ್ದಳು ಎಂದಿದ್ದಾರೆ.

ಸೈನೈಡ್ ಬಳಸಿ ಕೊಲೆ:

1998 ರಲ್ಲಿ ಪತಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನೊಡನೆ ಸಂಸಾರ ನಡೆಸಿದ್ದ ಮಲ್ಲಿಕಾ, ಚಿಟ್ ಫಂಡ್ ವ್ಯವಹಾರಕ್ಕೆ ಇಳಿಯುತ್ತಾಳೆ. ಕುಟುಂಬ ಕಲಹ ಹಾಗೂ ಕೈ ಕೊಟ್ಟ ಚಿಟ್ ಫಂಡ್ ವ್ಯವಹಾರದಿಂದ ಬೇಸತ್ತು ತನ್ನ ಸಂಸಾರದಿಂದ ದೂರ ಉಳಿಯಲು ನಿರ್ಧರಿಸುತ್ತಾಳೆ. 1999 ರಲ್ಲಿ ಹೊಸಕೋಟೆಯ ದೇವಸ್ಥಾನದಲ್ಲಿ ಮಮತಾ ಎಂಬ ಗೃಹಿಣಿಯ ಪರಿಚಯವಾಗುತ್ತದೆ.ಮಮತಾಳಿಗೆ ಮಂಡಲ ಪೂಜೆ ಹಾಗೂ ಹೋಮ ಹವನದ ನೆಪದಲ್ಲಿ ಸೈನೈಡ್ ತಿನ್ನಿಸಿ, ಆಕೆಯ ಬಳಿಯಿದ್ದ ಹಣ, ಒಡವೆಯನ್ನು ಮಲ್ಲಿಕಾ ದೋಚುತ್ತಾಳೆ.

ಒಮ್ಮೆ ಕಲಾಸಿಪಾಳ್ಯ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಮಮತಾ ಮತ್ತೆ, ಸರಿದಾರಿ ಹಿಡಿಯದೆ ಮತ್ತಷ್ಟು ದುಷ್ಕೃತ್ಯದ ಹಾದಿ ತುಳಿಯುತ್ತಾಳೆ. ಸುಮಾರು 50 ರ ಹರೆಯದ ಹೆಂಗಸರನ್ನು ಬೇರೊಬ್ಬರ ನೆರವಿಲ್ಲದೆ ತಾನೇ, ಸೈನೈಡ್ ಕೊಟ್ಟು, ಕುತ್ತಿಗೆ ಹಿಚುಕಿ ಕೊಂದಿದ್ದಾಗಿ ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾಳೆ. ಡಿ. 18 ರಂದು ಹತ್ಯೆಯಾದ 30 ರ ಹರೆಯದ ಶ್ರೀಮತಿ ನಾಗವೇಣಿ ಈಕೆಯ ಇತ್ತೀಚಿನ ಬಲಿ. ಸಾತನೂರು, ಕೊರಟಗೆರೆ ಹಾಗೂ ಮದ್ದೂರುಗಳಲ್ಲಿ ಕೂಡ ತನ್ನ ಕೈಚಳಕ ತೋರಿರುವ ಮಲ್ಲಿಕಾ, ಹೆಂಗಸರನ್ನು ದೇವರ ಹೆಸರಿನಲ್ಲಿ ನಂಬಿಸಿ, ಮೋಸಮಾಡುವುದನ್ನು ಕರಗತಮಾಡಿಕೊಂಡಿದ್ದಳು ಎಂದು ಪೊಲೀಸ್ ಆಯುಕ್ತ ಅಚ್ಯುತರಾವ್ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X