ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಬಸ್ ಪಾಸ್ ಜಾಲದ ನಡುವೆಯೂ ಬಿಎಂಟಿಸಿಗೆ ಲಾಭ

By Staff
|
Google Oneindia Kannada News

ಬೆಂಗಳೂರು, ಡಿ.31: ನಕಲಿ ಬಸ್ ಪಾಸ್ ಜಾಲ ಅವ್ಯಾಹತವಾಗಿ ಹಬ್ಬಿದ್ದರೂ, ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಸಂಸ್ಥೆ(ಬಿಎಂಟಿಸಿ) ವಂಚಕರನ್ನು ಹಿಡಿದು ದಂಡ ವಸೂಲಿ ಮಾಡುವ ಮೂಲಕ ಲಾಭಗಳಿಸುತ್ತಿದೆ.

ಬಿಎಂಟಿಸಿ ಜಾಗೃತ ದಳದ ಸಿಬ್ಬಂದಿ ಕಳೆದ ವರ್ಷ ನಡೆಸಿದ ಕಾರ್ಯಾಚರಣೆಯಿಂದ ಸುಮಾರು 1ಕೋಟಿಗೂ ಅಧಿಕ ಹಣ ವಸೂಲಿ ಮಾಡಿದೆ.ದಿನನಿತ್ಯದ ಪಾಸ್ (ಡೈಲಿ ಪಾಸ್) ಮರುಮಾರಾಟ, ಟಿಕೆಟ್ ರಹಿತ ಪ್ರಯಾಣ,ಮೀಸಲು ಸೀಟುಗಳಲ್ಲಿ ಅತಿಕ್ರ್ರಮ ಪ್ರಯಾಣ ಮುಂತಾದ ಶಿಕ್ಷಾರ್ಹ ಅಪರಾಧಗಳಲ್ಲಿ ತೊಡಗಿದ ಜನರಿಂದ ಸಂಸ್ಥೆ ಗೆ ವಾರ್ಷಿಕವಾಗಿ ಸುಮಾರು 75 ಲಕ್ಷ ರು ನಷ್ಟವಾಗುತ್ತಿದೆ. ಟಿಕೆಟ್ ರಹಿತ ಪಯಣ ಮಾಡುವವರಿಗೆ ದರದ 10 ಪಟ್ಟು ಅಥವಾ ಗರಿಷ್ಠ 500 ರು ವರೆಗೂ ದಂಡ ವಿಧಿಸಲಾಗುತ್ತಿದೆ ಎಂದು ಬಿಎಂಟಿಸಿ ಮುಖ್ಯ ಭದ್ರತಾ ಹಾಗೂ ಜಾಗೃತಾಧಿಕಾರಿ ಎಸ್. ಕೆ. ಬೆಳ್ಳಟ್ಟಿ ತಿಳಿಸಿದ್ದಾರೆ.

***
ನೂತನ ವರ್ಷ ರೈಲು ದರ ಇಳಿಕೆ ಸಂಭವ

ಮುಂದಿನ ವರ್ಷದ ಆಯವ್ಯಯದಲ್ಲಿರೈಲು ಪ್ರಯಾಣ ದರವನ್ನು ಶೇ. 4 ರಿಂದ 8 ರಷ್ಟು ಕಡಿತಗೊಳಿಸುವ ಇಂಗಿತವನ್ನು ರೈಲ್ವೇ ಸಚಿವಾಲಯ ವ್ಯಕ್ತಪಡಿಸಿದೆ. ಹವಾನಿಯಂತ್ರಿತ ಭೋಗಿ ಹೊರತಾಗಿ ಎಲ್ಲಾ ಸ್ತರದ ಟಿಕೆಟ್ ಗಳ ದರವನ್ನು ಪರಿಷ್ಕರಿಸಲಾಗುವುದು . ಪ್ರಯಾಣಿಕರ ಸೌಲಭ್ಯವನ್ನು ಹೆಚ್ಚಿಸುವತ್ತ ಗಮನ ಹರಿಸಲಾಗುವುದು ಎಂದು ರೈಲ್ವೇ ಸಚಿವಾಲಯ ಹೇಳಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X