ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಸಾನದ ಹಾದಿಯಲ್ಲಿ ನೆಟ್ ಸ್ಕೇಪ್ ನ್ಯಾವಿಗೇಟರ್ ಬ್ರೌಸರ್

By Staff
|
Google Oneindia Kannada News

ವಾಷಿಂಗ್ಟನ್, ಡಿ. 31: ನೆಟ್ ಸ್ಕೇಪ್ ಬ್ರೌಸರ್ ನೊಂದಿಗಿನ ತನ್ನ ಸಂಬಂಧವನ್ನು ಅಮೆರಿಕನ್ ಆನ್ ಲೈನ್ (AOL)ಕಳಚಿಕೊಳ್ಳುವ ಮೂಲಕ, ನೆಟ್ ಸ್ಕೇಪ್ ನ ಅವಸಾನಕ್ಕೆ ನಾಂದಿ ಹಾಡಿದೆ.

1999ರಲ್ಲಿ ಸುಮಾರು 10 ಬಿಲಿಯನ್ ಡಾಲರ್ ಕೊಟ್ಟು ನೆಟ್ ಸ್ಕೇಪ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದ್ದ ಏಓಎಲ್ ಸಂಸ್ಥೆ, ನೆಟ್ ಸ್ಕೇಪ್ ‍6,ನೆಟ್ ಸ್ಕೇಪ್ 9 ಹಾಗೂ ಮೊಜಿಲಾ ಆಧಾರಿತ ಬ್ರೌಸರ್ ಗಳನ್ನು ಅಭಿವೃದ್ಧಿ ಪಡಿಸಿತ್ತು.ಮೊಜಿಯಾ ಫೌಂಡೇಶನ್ ನ ಯಶಸ್ಸು ಹಾಗೂ ಜಾಹೀರಾತು ಆಧಾರಿತ ಬ್ರೌಸರ್ ನ ಬೇಡಿಕೆಯ ಅನುಗುಣವಾಗಿ ಕಾರ್ಯನಿರ್ವಹಿಸಲು ನೆಟ್ ಸ್ಕೇಪ್ ಅನ್ನು ಬಳಸಲು ಸಾಧ್ಯವಾಗದ ಕಾರಣ, ಅದರ ಅಭಿವೃದ್ಧಿಯನ್ನು ನಿಲ್ಲಿಸಲಾಗುವುದು ಎಂದು ಏಓಎಲ್ ಸಂಸ್ಥೆ ಪ್ರಕಟಿಸಿದೆ.

ನೆಟ್ ಸ್ಕೇಪ್ ಬಳಕೆದಾರರು ಇನ್ನು ಮುಂದೆ ಮೊಜಿಲಾ ಫೈರ್ ಫಾಕ್ಸ್ ಬ್ರೌಸರ್ ಬಳಸುವಂತೆ ಪ್ರಚಾರ ಕೈಗೊಳ್ಳುವುದಾಗಿ ಏಓಎಲ್ ಹೇಳಿದೆ.ಹಳೆಯ ನೆಟ್ ಸ್ಕೇಪ್ ಆವೃತ್ತಿಗಳು ಲಭ್ಯವಿದ್ದು ಅದನ್ನು ಬಳಸಬಹುದಾಗಿದೆ. ಆದರೆ ಹೆಚ್ಚಿನ ಸೌಲಭ್ಯಗಳು(add-on support) ಕೊರತೆ ಕಂಡು ಬರಲಿದೆ.

ನೆಟ್ ಮಾರುಕಟ್ಟೆಯಲ್ಲಿ ವಿಂಡೋಸ್ ಇಂಟರ್ ನೆಟ್ ಎಕ್ಸ್ ಪ್ಲೋರರ್ ಶೇ. 77 ರಷ್ಟು ಸಿಂಹಪಾಲು ಹೊಂದಿದೆ. ಫೈರಫಾಕ್ಸ್ ಜನಪ್ರೀಯತೆ ಹೆಚ್ಚುತ್ತಿದ್ದು ಶೇ. 16 ರ ಆಸುಪಾಸಿನಲ್ಲಿದೆ. ನೆಟ್ ಸ್ಕೇಪ್ ಬಳಕೆ ಶೇ 0.6 ಕ್ಕೆ ಕುಸಿದಿದೆ.

(ದಟ್ಸ್ ಕನ್ನಡ ವಾರ್ತೆ)

ಎಲ್ಲೋ ಇರುವ ಕಾಣದ ಕೈಗೆ ಇಲ್ಲಿಂದಲೇ ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X