ಪೂರ್ಣಚಂದ್ರ ತೇಜಸ್ವಿ ಅವರ ಸ್ಮರಣಾರ್ಥ ನಗೆಹಬ್ಬ

Subscribe to Oneindia Kannada

ಬೆಂಗಳೂರು, ಡಿ.22: ಲೇಖಕ ಪೂರ್ಣಚಂದ್ರ ತೇಜಸ್ವಿ ಅವರ ಸ್ಮರಣಾರ್ಥ ಡಿ.25 ರಂದು ಕೊರವಂಜಿ ಅಪರಂಜಿ ಟ್ರಸ್ಟ್ ಹಾಸ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತೇಜಸ್ವಿಯವರ ಬದುಕಿನಲ್ಲಿ ಹಾಸುಹೊಕ್ಕಾಗಿದ್ದ ತಿಳಿ ಹಾಸ್ಯದ ಪ್ರಸಂಗಗಳನ್ನು ಹಿರಿಯ ,ಕಿರಿಯ ಕಲಾವಿದರು ಈ ಸಮಾರಂಭದಲ್ಲಿ ಸ್ಮರಣೆ ಮಾಡಲಿದ್ದಾರೆ.

ಜಯನಗರದ ಎಚ್ .ಎನ್ .ಕಲಾಕ್ಷೇತ್ರದಲ್ಲಿ ಡಿ.25 ರಂದು ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ಈ ಹಾಸ್ಯೋತ್ಸವದಲ್ಲಿ ಮಾಸ್ಟರ್ ಹಿರಣ್ಣಯ್ಯ , ರೇಮಗಳೂರು ಕಣ್ಣನ್, ಮಂಡ್ಯ ರಮೇಶ್ ಮತ್ತು ಎಂ .ಆರ್. ಸುಬ್ರಮಣ್ಯ ಮುಂತಾದ ಕಲಾವಿದರು ಈ ನಗೆಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಗೆ ಹಬ್ಬದ ನಿರೂಪಣೆ ಹಾಗೂ ಉಸ್ತುವಾರಿಯನ್ನು ಅ.ರಾ. ಮಿತ್ರ ಹಾಗೂ ಬೇಲೂರು ರಾಮಮೂರ್ತಿ ವಹಿಸಿಕೊಂಡಿದ್ದಾರೆ.

ರಾಶಿ ಅವರ 'ಜಗ್ಗೋಜಿ', ಬೇಲೂರು ರಾಮಮೂರ್ತಿಯವರ 'ಹಾಸ್ಯ ನಿನಾದ' ಮತ್ತು 'ಹಾಸ್ಯ ಸರೋವರ' ಎಂಬ ಮೂರು ಪುಸ್ತಕಗಳನ್ನು ಈ ಸಮಾರಂಭದಲ್ಲಿ ಅನಾವರಣಗೊಳಿಸಲಾಗುತ್ತದೆ. ಹಾಸ್ಯ ಬರಹಗಾರ ಎಚ್ .ಆರ್ .ಶಂಕರ ನಾರಾಯಣ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಸುಮಾರು ಐದು ಸಾವಿರಕ್ಕೂ ಅಧಿಕ ಜನರನ್ನು ನಿರೀಕ್ಷಿಸುತ್ತಿರುವುದಾಗಿ ಆಯೋಜಕರಾದ ಕೊರವಂಜಿ ಅಪರಂಜಿ ಟ್ರಸ್ಟ್ ನವರು ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Please Wait while comments are loading...