ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಯೋಕಾನ್ ಸಂಸ್ಥೆಯ ಕ್ಯಾನ್ಸರ್ ಔಷಧಕ್ಕೆ ಮನ್ನಣೆ

By Staff
|
Google Oneindia Kannada News

ಬೆಂಗಳೂರು, ಡಿ.22:ಕಿರಣ್ ಮುಜುಂದಾರ್ ಷಾ ಮಾಲಿಕತ್ವದ ಜೈವಿಕ ತಂತ್ರಜ್ಞಾನ ಸಂಸ್ಥೆ ಬಯೋಕಾನ್ ತಯಾರಿಸಿದ ಅರ್ಬುದ ರೋಗ(ಕ್ಯಾನ್ಸರ್) ಸಂಬಂಧಿತ ಔಷಧ 'ಬಯೋ ಮಾಬ್ ಇಜಿಎಫ್ ಆರ್' ಗೆ ಬಯೋಸ್ಪೆಕ್ಟ್ರಮ್ ಪತ್ರಿಕೆ ನೀಡುವ 'ವರ್ಷದ ಉತ್ಪನ್ನ' ಪ್ರಶಸ್ತಿ ಲಭಿಸಿದೆ. ಈ ಔಷಧ ತಲೆ ಮತ್ತು ಕತ್ತಿನ ಕ್ಯಾನ್ಸರ್ ನಿಯಂತ್ರಣದಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಪ್ರಶಂಸೆ ಗಳಿಸಿದೆ.

ಶುಕ್ರವಾರ ನಗರದ ಲೀಲಾ ಪ್ಯಾಲೆಸ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 'ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ನೀತಿ' ಕುರಿತು ಚರ್ಚೆ ಹಾಗೂ 'ಬಯೋ ಸ್ಪೆಕ್ಟ್ರಮ್ ಪ್ರಶಸ್ತಿ' ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕಿರಣ್ ಮುಜುಂದಾರ್ ಅವರು, 'ಭಾರತ ಜಗತ್ತಿನ್ ಜೈವಿಕ ತಂತ್ರಜ್ಞಾನ ಕ್ಷೇತ್ರದ ಪ್ರಯೋಗದ ತೊಟ್ಟಿಲಾಗುತ್ತಿದೆ. ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ನಿಯಂತ್ರಣ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದರೆ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗುತ್ತದೆ.ಜೈವಿಕ ತಂತ್ರಜ್ಞಾನ ಉದ್ಯಮ ಸಂಸ್ಥೆಗಳಿಗೆ ಶೀಘ್ರದಲ್ಲಿ ಅನುಮತಿ ನೀಡುವ ಸಲುವಾಗಿ ಏಕಗವಾಕ್ಷಿ ನಿಯಂತ್ರಣ ಪ್ರಾಧಿಕಾರವನು ರಚಿಸುವ ಅಗತ್ಯವಿದೆ ಎಂದು ಹೇಳಿದರು.

ಜೈವಿಕ ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಡಾ. ಎಸ್ .ನಟೇಶ್, ವಿಜ್ಞಾನ ಮತ್ತು ಔದ್ಯಮಿಕ ಸಂಶೋಧನಾ ಕೇಂದ್ರ(ಸಿಎಸ್ಐಆರ್)ನ ಮಹಾ ನಿರ್ದೇಶಕ ಡಾ. ಸಮೀರ್ ಬ್ರಹ್ಮಚಾರಿ ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X