ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.23ರಂದು ನರೇಂದ್ರ ಮೋದಿ ಹಣೆಬರಹ ನಿರ್ಧಾರ

By Staff
|
Google Oneindia Kannada News

ಅಹಮದಾಬಾದ್ , ಡಿ.16 : ನರೇಂದ್ರ ಮೋದಿ ಪಾಲಿಗೆ ಸತ್ವ ಪರೀಕ್ಷೆ ಎಂದೇ ಗುರ್ತಿಸಲ್ಪಟ್ಟಿರುವ ಗುಜರಾತ್ ಚುನಾವಣೆಯ ಎರಡನೇ ಹಂತದ ಮತದಾನ, ಭಾನುವಾರ ಬೆಳಗ್ಗೆ 8ಗಂಟೆಯಿಂದ ಪ್ರಾರಂಭವಾಗಿದ್ದು, ಸಂಜೆವರೆಗೆ ಮತದಾನ ಮುಂದುವರೆಯಲಿದೆ. ಮಧ್ಯಾಹ್ನ 2ಗಂಟೆವರೆಗೆ ಬಂದ ವರದಿಗಳ ಪ್ರಕಾರ ಮತದಾನ ಶಾಂತಿಯಿಂದ ಕೂಡಿದೆ. ಈ ಮಧ್ಯೆ ತಾವು ಐತಿಹಾಸಿಕ ಗೆಲುವು ಪಡೆಯುವುದಾಗಿ ನರೇಂದ್ರ ಮೋದಿ ಮತ್ತೆ ಭಾನುವಾರ(ಡಿ.16)ಪುನರುಚ್ಚರಿಸಿದ್ದಾರೆ.

ನರೇಂದ್ರ ಮೋದಿ ಇಂದು ಬೆಳಗ್ಗೆ ಮತ ಚಲಾವಣೆ ಮಾಡಿದರು. ನರಮೇಧದಿಂದ ಸದ್ದು ಮಾಡಿದ್ದ ಗೋಧ್ರಾ ಸೇರಿದಂತೆ 95ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದ್ದು, 1.87ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 599ಅಭ್ಯರ್ಥಿಗಳ ಹಣೆಬರಹ ಇಂದು ತೀರ್ಮಾನವಾಗಲಿದೆ. ನರೇಂದ್ರ ಮೋಧಿ ಮಣಿನಗರದಿಂದ ಸ್ಪರ್ಧಿಸಿದ್ದು, ಅವರ ವಿರುದ್ಧ ಕಾಂಗ್ರೆಸ್ ನ ದಿನ್ಷಾ ಪಟೇಲ್(ಪೆಟ್ರೋಲಿಯಂ, ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ) ಕಣದಲ್ಲಿದ್ದಾರೆ.

ಮಂಗಳವಾರ(ಡಿ.11) ಮೊದಲ ಹಂತದಲ್ಲಿ 87ಸ್ಥಾನಕ್ಕೆ ಮತದಾನ ನಡೆದಿತ್ತು. ಡಿ.23ರಂದು ಮತಎಣಿಕೆ ನಡೆಯಲಿದ್ದು, ಗುಜರಾತ್ ನಲ್ಲಿ ಯಾವ ಪಕ್ಷ ಅಧಿಕಾರ ಹಿಡಿಯಲಿದೆ ಎಂಬ ಚಿತ್ರಣ ಸುಸ್ಪಷ್ಟವಾಗಲಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X