ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂಬಾಗಿಲ ಮೂಲಕ ಭಾರತಕ್ಕೆ ಬರುತ್ತಿದೆ ವಾಲ್‌ಮಾರ್ಟ್!

By Staff
|
Google Oneindia Kannada News

ಬೆಂಗಳೂರು, ಡಿ.12 : ಅಮೆರಿಕದ ರಿಟೇಲ್ ಮಾರುಕಟ್ಟೆಯ ದೈತ್ಯ 'ವಾಲ್‌ಮಾರ್ಟ್" ಹಾಗೂ ಸುನಿಲ್ ಮಿತ್ತಲ್ ನೇತೃತ್ವದ ಭಾರ್ತಿ ಎಂಟರ್‌ಪ್ರೈಸಸ್, ಮುಂದಿನ ವರ್ಷ ಭಾರತದಲ್ಲಿ ಬೃಹತ್ ಮಾರಾಟ ಮಳಿಗೆಗಳನ್ನು ಜಂಟಿಯಾಗಿ ಆರಂಭಿಸಲಿವೆ.

ಈ ಬಗ್ಗೆ ಭಾರ್ತಿ ಎಂಟಪ್ರೈಸಸ್ ಆಡಳಿತ ಮಂಡಳಿ ನಿರ್ದೇಶಕರಾದ ರಾಜನ್ ಭಾರ್ತಿ ಮಿತ್ತಲ್ ಸುದ್ದಿಗಾರರಿಗೆ ವಿವರ ನೀಡಿದ್ದಾರೆ. ವಾಲ್‌ಮಾರ್ಟ್ ಜೊತೆ ಸೇರಿ ಹೈಪರ್ ಮಾರ್ಕೆಟ್, ಸೂಪರ್ ಮಾರ್ಕೆಟ್ ಹಾಗೂ ಸ್ಟೋರ್ ಎಂದು ಮೂರು ವಿಧಗಳಲ್ಲಿ ವ್ಯವಹಾರ ನಡೆಸಲಾಗುವುದು. ಮುಂದಿನ ಮಾರ್ಚ್ ವೇಳೆಗೆ ಉತ್ತರ ಭಾರತದಲ್ಲಿ ರಿಟೇಲ್ ಮಳಿಗೆ ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು.

2015ರ ವೇಳೆಗೆ 10ರಿಂದ 15 ಮಾರಾಟ ಮಳಿಗೆಗಳನ್ನು ಪ್ರಾರಂಭಿಸಲಾಗುವುದು. ಇದು 5ಸಾವಿರ ಮಂದಿಗೆ ಉದ್ಯೋಗ ನೀಡಲಿದೆ. ಗ್ರಾಹಕ ಉತ್ಪನ್ನಗಳು, ಹಣ್ಣು, ತರಕಾರಿ ಹಾಗೂ ದವಸ ಧಾನ್ಯಗಳನ್ನು ಈ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದು. ಈ ಒಂದು ಉದ್ಯಮವು ರೈತರಿಗೆ, ಕುಶಲಕರ್ಮಿಗಳಿಗೆ, ಸಣ್ಣ ಉತ್ಪತ್ತಿದಾರರಿಗೆ, ರಿಟೇಲ್ ಮಾರಾಟಗಾರರಿಗೆ ನೆರವಾಗಲಿದೆ. ಭಾರತದ ಆರ್ಥಿಕತೆಯನ್ನು ಮತ್ತಷ್ಟು ಉನ್ನತ ಸ್ಥಿತಿಗೆ ಕೊಂಡೊಯ್ಯಲು ಇದು ಸಹಕಾರಿಯಾಗಲಿದೆ ಎಂದು ಸುನಿಲ್ ಭಾರತಿ ಮಿಟ್ಟಲ್ ಅಭಿಪ್ರಾಯಪಟ್ಟಿದ್ದಾರೆ.

ಚಿಲ್ಲರೆ ಮಾರುಕಟ್ಟೆ ವಿಷಯ ಬರೀ ಚಿಲ್ಲರೆಯೇನಲ್ಲ..

ಭಾರತದ ಒಟ್ಟು ಚಿಲ್ಲರೆ ಮಾರುಕಟ್ಟೆಯ ವಾರ್ಷಿಕ ವ್ಯಾಪಾರಿ ವಹಿವಾಟು 300ಶತಕೋಟಿ ಡಾಲರ್. ಹೀಗಾಗಿ ವಿದೇಶಿ ಸಂಸ್ಥೆಗಳು ಆಕರ್ಷಿತವಾಗುತ್ತಿವೆ. ಅಂತಾರಾಷ್ಟ್ರೀಯ ಚಿಲ್ಲರೆ ಮಾರಾಟ ಮಳಿಗೆಗಳನ್ನು ಭಾರತದಲ್ಲಿ ಸ್ಥಾಪಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಸಗಟು ಮಾರಾಟಗಾರರಿಗೆ ಈ ಅವಕಾಶವಿಲ್ಲ.

Tesco, Carrefour(ಬಾಂಬೆ ಡೈಯಿಂಗ್‌ನೊಂದಿಗೆ ಕೈಜೋಡಿಸಿ), Metro ಈಗಾಗಲೇ ಭಾರತದ ಚಿಲ್ಲರೆ ಮಾರುಕಟ್ಟೆಗೆ ದಾಂಗುಡಿ ಇಟ್ಟಿವೆ. ವಾಲ್‌ಮಾರ್ಟ್ ನೇರವಾಗಿ ಬರಲು ಸಾಧ್ಯವಿಲ್ಲದ ಕಾರಣ, ಹಿಂಬಾಗಿಲ ಮೂಲಕ ಪ್ರವೇಶಿಸುತ್ತಿದೆ. ಭಾರತಿ ವಾಲ್‌ಮಾರ್ಟ್ ಪ್ರೈ.ಲಿ. 'ಕ್ಯಾಶ್ ಅಂಡ್ ಕ್ಯಾರಿ" ಮಾರಾಟ ಮಳಿಗೆಯ ಮೂಲಕ 2008ರ ಅಂತ್ಯಕ್ಕೆ ಹಿಂಬಾಗಿಲ ಪ್ರವೇಶ ಪಡೆಯುವುದು ಇದರಿಂದ ನಿಚ್ಚಳವಾಗಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X