ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದದ ಹುತ್ತ ಮತ್ತು ತಣ್ಣಗೆ ಕ್ರಿಕೆಟ್ ನೋಡಿದ ಸಾನಿಯಾ

By Staff
|
Google Oneindia Kannada News

ವಿವಾದದ ಹುತ್ತ ಸುತ್ತ ಸಾನಿಯಾಹೈದರಾಬಾದ್, ಡಿ.12 : ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತೆ ವಿವಾದದ ಅಂಗಳಕ್ಕೆ ಬಂದಿದ್ದಾರೆ. ಇಲ್ಲಿನ ಮೆಕ್ಕಾ ಮಸೀದಿಯ ಆಸುಪಾಸಿನಲ್ಲಿ ಜಾಹೀರಾತು ಚಿತ್ರೀಕರಣದಲ್ಲಿ ಪಾಲ್ಗೊಂಡಾಗ ಬುರ್ಕಾ ಧರಿಸಿರಲಿಲ್ಲ ಹಾಗೂ ಚಿತ್ರೀಕರಣದ ವೇಳೆ ಚಪ್ಪಲಿ ಧರಿಸಿದ್ದರು ಎಂಬ ಎರಡು ಕಾರಣಗಳಿಗೆ ಮುಲ್ಲಾಗಳು ಕೆರಳಿ ಕೆಂಡವಾಗಿದ್ದಾರೆ.

ಟೆನ್ನಿಸ್ ಅಂಗಳದಲ್ಲಿ ತುಂಡು ಬಟ್ಟೆ ಧರಿಸಿದ್ದಕ್ಕಾಗಿ ಹಿಂದೊಮ್ಮೆ ಕಟ್ಟಾ ಮುಸ್ಲಿಂ ವಾದಿಗಳ ಟೀಕೆಗೆ ಸಾನಿಯಾ ಗುರಿಯಾಗಿದ್ದರು. ಮಸೀದಿ ಎದುರು ಜಾಹೀರಾತು ಚಿತ್ರೀಕರಣದಲ್ಲಿ ಸಾನಿಯಾ ಭಾಗವಹಿಸಿದ್ದೇ ತಪ್ಪು. ಚಿತ್ರೀಕರಣಕ್ಕಾಗಿ ಮಸೀದಿ ಆಡಳಿತ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ಸಾನಿಯಾ ನಿನ್ನ ಜಾಗ ಟೆನ್ನಿಸ್ ಮೈದಾನವೇ ಹೊರತು ಮೆಕ್ಕಾ ಮಸೀದಿಯಲ್ಲ. ಸಾಲದಕ್ಕೆ ಚಿತ್ರೀಕರಣದ ವೇಳೆ ಮಸೀದಿಯ ಆವರಣದಲ್ಲಿ ಚಪ್ಪಲಿ ಧರಿಸಲಾಗಿತ್ತು ಎಂದು ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಎಂಬ ಸಂಘಟನೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ.

313ವರ್ಷಗಳಷ್ಟು ಹಳೆಯದಾದ ಮಸೀದಿ ಪ್ರಸಕ್ತ ವರ್ಷದ ಮೇ ತಿಂಗಳಲ್ಲಿ ಉಗ್ರವಾದಿಗಳ ಬಾಂಬ್ ದಾಳಿಗೆ ತುತ್ತಾಗಿತ್ತು. ಬಾಂಬ್ ದಾಳಿಯನ್ನು ಖಂಡಿಸಿ ಧರಣಿ ಸತ್ಯಾಗ್ರಹ ನಡೆಸಿದ್ದಕ್ಕೆ ಚಾರ್ ಮಿನಾರ್ ಸಮೀಪ ಸಂಚಾರ ಅಸ್ತವ್ಯಸ್ಥವಾಗಿ ಪೋಲೀಸರು ಲಾಠಿ ಜಳಪಿಸಿದ್ದರು ಸಹಾ.

ತಂಪು ಪಾನೀಯ ಜಾಹೀರಾತು ಹಾಗೂ ಇಂಗ್ಲಿಷ್ ದೈನಿಕ ಒಂದರ ಜಾಹೀರಾತಿನಲ್ಲಿ ನಟಿಸುವ ಸಲುವಾಗಿ ಸಾನಿಯಾ ಇಲ್ಲಿಗೆ ಬಂದಿದ್ದರು. ಚಿತ್ರೀಕರಣ ಹಿನ್ನಲೆ ದೃಶ್ಯವಾಗಿ ಚಾರ್ ಮಿನಾರನ್ನು ಸೆರೆಹಿಡಿಯಲು ಪ್ರಯತ್ನಿಸಲಾಗಿತ್ತೆ ಹೊರತು ಮೆಕ್ಕಾ ಮಸೀದಿಯನ್ನಲ್ಲ ಎಂದು ಜಾಹೀರಾತು ಸಂಸ್ಥೆಗಳು ತಿಳಿಸಿವೆ.

ಸಾನಿಯಾ ಸುತ್ತ ವಾದವಿವಾದಗಳು ಕಾವೇರುತ್ತಿದ್ದರೆ ಆಕೆ ಮಾತ್ರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಣ್ಣನೆ ಕುಳಿತು ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X