ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಟೆಲ್,ವೊಡೋಫೋನ್ ಮತ್ತು ಹೊಸ ಐಡಿಯಾ

By Staff
|
Google Oneindia Kannada News

ಏರ್ ಟೆಲ್,ವೊಡೋಫೋನ್ ಮತ್ತು ಹೊಸ ಐಡಿಯಾನವದೆಹಲಿ, ಡಿ. 10 : ಸಂಪರ್ಕ ಮೂಲಸೌಕರ್ಯ ಸಾಧನಗಳನ್ನು ಪರಸ್ಪರ ಹಂಚಿಕೊಳ್ಳುವ ಹಾಗೂ ತನ್ಮೂಲಕ ವೆಚ್ಚಗಳನ್ನು ಕಡಿತಗೊಳಿಸುವ ಉದ್ದೇಶದಿಂದ ಭಾರತದಲ್ಲಿನ ಮೂರು ಖಾಸಗಿ ದೂರಸಂಪರ್ಕ ಸಂಸ್ಥೆಗಳು ಒಟ್ಟಾಗಿ ಹೊಸ ಕಂಪನಿಯೊಂದನ್ನು ತೇಲಿಬಿಡಲು ಮುಂದಾಗಿವೆ. ಅಗಾಧವಾಗಿ ಬೆಳೆಯುತ್ತಿರುವ ಭಾರತೀಯ ದೂರಸಂಪರ್ಕ ಕ್ಷೇತ್ರದ ಒತ್ತಡ ಮತ್ತು ಮಾರುಕಟ್ಟೆ ನಿರ್ವಹಣೆಯ ಸವಾಲುಗಳನ್ನು ಒಗ್ಗಟ್ಟಾಗಿ ನಿಭಾಯಿಸುವುದಲ್ಲದೆ ವಹಿವಾಟುಗಳನ್ನು ಉನ್ನತ ಸ್ತರಗಳಿಗೆ, ಭಾರತದ ಗ್ರಾಮಾಂತರ ಪ್ರದೇಶಗಳಿಗೆ ಕೊಂಡೊಯ್ಯುವ ವ್ಯಾವಹಾರಿಕ ಜಾಣ್ಮೆಯನ್ನು ಅವು ಈ ಮೂಲಕ ಪ್ರದರ್ಶಿಸಿವೆ.

ದೂರಸಂಪರ್ಕ ಗೋಪುರಗಳನ್ನು ಹೊಸ ಕಂಪನಿಯ( Indus Towers) ಮೂಲಕ ಸ್ಥಾಪಿಸಲು ಮುಂದಾಗಿರುವ ಖಾಸಗಿ ಕಂಪನಿಗಳೆಂದರೆ ಭಾರತಿ ಏರ್ ಟೆಲ್, ವೊಡೊಫೋನ್ ಮತ್ತು ಐಡಿಯಾ ಸೆಲ್ಲುಲರ್. ಭಾರತದಲ್ಲಿ ಒಟ್ಟು 217 ದಶಲಕ್ಷ ಸೆಲ್ ಫೋನ್ ಗ್ರಾಹಕರಿದ್ದು ಈ ಸಂಖ್ಯೆ ಪ್ರತಿ ತಿಂಗಳಿಗೆ 8 ದಶಲಕ್ಷದಂತೆ ವೃದ್ಧಿಸುತ್ತಿದೆ. ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸೆಲ್ ಮಾರುಕಟ್ಟೆ ಭಾರತ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಈ ಬಗೆಯ ಸಂಪರ್ಕ ಸಂಗಮ ಭಾರತದಲ್ಲಿ ಮೊಟ್ಟಮೊದಲಬಾರಿಗೆ ತನ್ನ ಅಸ್ತಿತ್ವ ಕಂಡುಕೊಳ್ಳುತ್ತಿದೆ. ಸರಕಾರ ಮತ್ತು ಇತರ ಖಾಸಗಿ ಸೆಲ್ ಫೋನ್ ಕಂಪನಿಗಳು ಇಂಡಸ್ ಟವರ್ಸ್ ಕಂಪನಿಯಲ್ಲಿ ಬೆರೆಯುವಂತೆ ಆಹ್ವಾನಿಸಲಾಗಿದೆ ಎಂದು ಭಾರತಿ ಎಂಟರ್ ಪ್ರೈಸಸ್ ನ ಆಡಳಿತ ನಿರ್ದೇಶಕ ಅಖಿಲ್ ಗುಪ್ತ ಹೇಳಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X