ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮಂದಿರಿಗೆ ತವರುಮನೆಯಂಥ ಈ ವೆಬ್ ಸೈಟು ಗೊತ್ತಿರಲಿ

By Staff
|
Google Oneindia Kannada News

ಅಮ್ಮಂದಿರಿಗೆ ತವರುಮನೆಯಂಥ ಈ ವೆಬ್ ಸೈಟುನವದೆಹಲಿ, ಡಿ. 10 : ಗರ್ಭಿಣಿಯರು, ಅದರಲ್ಲೂ ಮೊದಲ ಬಾರಿಗೆ ಹೆರಿಗೆ ಮಾಡಿಸಿಕೊಳ್ಳುವವರ ತಾಯ್ತನಕ್ಕೆ ಸಂಬಂಧಿಸಿದ ಅನೇಕಾರು ಪ್ರಶ್ನೆಗಳಿಗೆ, ಸಂದೇಹಗಳಿಗೆ, ಕುತೂಹಲಗಳಿಗೆ ಸಮರ್ಪಕ ಸಮಾಧಾನ ಮತ್ತು ಉತ್ತರಗಳನ್ನು ನೀಡುವ ವೆಬ್ ಸೈಟ್ ಆರಂಭವಾಗಿದೆ.

ದೆಹಲಿ ಮೂಲದ ಇ ಪಾಠಶಾಲೆ ಸಂಸ್ಥೆ ಬಿಲ್ಡಿಂಗ್ ಬ್ಲಾಕ್ಸ್ ಸಂಸ್ಥೆಯು ಐಮಾಂಮ್ ಎಂಬ ವೆಬ್ ತಾಣ ತೆರೆದಿದ್ದು ತಾಯಿ ಮತ್ತು ಮಗುವಿನ ಆರೋಗ್ಯ ಹಾಗೂ ಮಗುವಿನ ಆರೈಕೆ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಕೊಡುತ್ತದೆ.

ಮಗುವಿಗೆ ಯಾವ ಬಗೆಯ ಊಟ ಉಪಚಾರ ನೀಡಬೇಕು, ಮಧ್ಯರಾತ್ರಿ ಜ್ವರ ಬಂದರೆ ಏನು ಮಾಡಬೇಕು , ಹಠಹಿಡಿದು ರಚ್ಚೆ ಮಾಡುವ ಮಗುವನ್ನು ರಮಿಸುವುದು ಹೇಗೆ, ಅದು ದೊಡ್ಡದಾದ ನಂತರ ಯಾವ ಶಾಲೆಗೆ ಸೇರಿಸಬೇಕು, ಮಗುವಿನ ನಡೆನುಡಿಯ ಮೇಲೆ ಯಾವ ರೀತಿ ನಿಗಾ ಇಡಬೇಕು ಮುಂತಾದ ಮಕ್ಕಳ ಬೆಳವಣಿಗೆ ಮತ್ತು ವಿಕಾಸಕ್ಕೆ ತಾಯಂದಿರಿಗೆ ಅನುಕೂಲವಾಗುವ ರೀತಿಯ ಮಾಹಿತಿಗಳನ್ನು ಕೊಡುವ ಈ ತಾಣವನ್ನು ಇಂಟರ್ ನೆಟ್ ತವರು ಮನೆ ಎಂದೂ ಬಣ್ಣಿಸಬಹುದು. ವೆಬ್ ಮೂಲಕ ಇತರ ತಾಯಂದಿರ ಅನುಭವಗಳಿಂದಲೂ ಕಲಿಯಬಹುದು.

ಮುಖ್ಯವಾಗಿ ಹಸುಳೆಗಳಿಗೆ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಕ್ರಮ ಹೇಗೆ, ಎಂತು , ತತ್ ಕ್ಷಣಕ್ಕೆ ನೆರವಿಗೆ ಬರುವಂತಹ ಔಷಧೋಪಚಾರಗಳಾವುವು ಎನ್ನುವುದನ್ನು ತಮ್ಮ ವೆಬ್ ತಾಣ ತಿಳಿಯಹೇಳುತ್ತದೆ. ವಿಶೇಷವಾಗಿ ಉದ್ಯೋಗಸ್ಥ ಮಹಿಳೆಯರಿಗೆ ಈ ಮಾಹಿತಿಗಳು ತೀರ ಅವಶ್ಯವಾಗಿರುತ್ತದೆ.

ತಾಯಿಯಾಗ ಬಯಸುವವರು ಕುಟುಂಬ ಕ್ಷೇಮದ ಅನೇಕಾರು ಮಾಹಿತಿಗಳನ್ನು ಮುಂಚಿತವಾಗಿ ತಿಳಿದಿದ್ದರೆ ತುಂಬಾ ಒಳ್ಳೆಯದು. ಒಬ್ಬ ಮಹಿಳೆಯು ತನ್ನನ್ನು ತಾನು ಜಾಗ್ರತೆಯಿಂದ ನೋಡಿಕೊಳ್ಳುವ, ಆ ಮೂಲಕ ಓರ್ವ ವ್ಯಕ್ತಿಯಾಗಿ ಪರಿಪೂರ್ಣತೆಯನ್ನು, ಸ್ವಾವಲಂಬನೆಯನ್ನು ಸಾಧಿಸಲು ನೆರವಾಗುವ ಉದ್ದೇಶ ತಮ್ಮ ವೆಬ್ ತಾಣದ್ದು ಎಂದು ವೆಬ್ ಸೈಟಿನ ಅಧ್ಯಕ್ಷ ತರುಣ್ ಭಲ್ಲ ಹೇಳಿದ್ದಾರೆ.

(ದಟ್ಸ್ ಕನ್ನಡ ಸುದ್ದಿಮನೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X