ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀ ಸರೆಗಮಪ : ಮರಿ ಕೋಗಿಲೆಗಳೇ ಹಾಡಿ ನಲಿದಾಡಿ

By Staff
|
Google Oneindia Kannada News

ಬೆಂಗಳೂರು, ಡಿ.6 : ಜೀ ಕನ್ನಡದ ಪ್ರಸಿದ್ಧ ಸಂಗೀತ ಪ್ರತಿಭಾನ್ವೇಷಣೆ ಕಾರ್ಯಕ್ರಮ ಸರೆಗಮಪ ಈ ಬಾರಿ ಕರ್ನಾಟಕದ ಚಿಣ್ಣರಲ್ಲಿಯ ಪ್ರತಿಭೆಯನ್ನು ಹೊರಗೆಡಹುವ ಪಣ ತೊಟ್ಟಿದೆ. ಕರ್ನಾಟಕದಲ್ಲಿನ 7ರಿಂದ 12ವರ್ಷ ವಯಸ್ಸಿನ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ಜೀ ಗ್ರೂಪ್‌ನಿಂದ ಈ ಮೊದಲು ಹಿಂದಿಯಲ್ಲಿ ಪ್ರಾರಂಭವಾಗಿದ್ದ ಸರೆಗಮಪ ಇಡೀ ದೇಶದ ಸಂಗೀತ ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಿತ್ತು. ಕರ್ನಾಟಕದಲ್ಲಿ ಜೀ ಕನ್ನಡದ ಈ ಕಾರ್ಯಕ್ರಮ ಮೊದಲು ಕರ್ನಾಟಕದಲ್ಲಿಯ ಯುವ ಗಾಯಕರನ್ನು ಪರಿಚಯಿಸಿತು. ಕರ್ನಾಟಕದ ವಿವಾಹಿತ ಮಹಿಳೆಯರಲ್ಲಿಯ ಪ್ರತಿಭೆಯನ್ನು ಒರೆಗೆ ಹಚ್ಚಿದ ಸರಿಗಮಪ ಈಗ ಕರ್ನಾಟಕದಲ್ಲಿಯ ಚಿಣ್ಣರ ಪ್ರತಿಭೆಯನ್ನು ಗುರುತಿಸಲು ಮುಂದಾಗಿದೆ. ಈ ಪ್ರತಿಭಾನ್ವೇಷಣೆಯಲ್ಲಿ ವಿಜೇತರಾದವರಿಗೆ ಭಾರೀಮೊತ್ತದ ಬಹುಮಾನವಿದೆ.

ಈ ಕಾರ್ಯಕ್ರಮಕ್ಕೆ ಆಯ್ಕೆಯನ್ನು ಆರ್.ವಿ.ಡೆಂಟಲ್ ಕಾಲೇಜ್, ಜೆ.ಪಿ.ನಗರ 1ನೇ ಹಂತ, ಬೆಂಗಳೂರು, ಈ ಸ್ಥಳದಲ್ಲಿ ಇದೇ ಡಿಸೆಂಬರ್ 11, 12ಮತ್ತು 13ನೇ ದಿನಾಂಕದಂದು ನಡೆಯಲಿದೆ. ಆಸಕ್ತರು ಸ್ವವಿವರ ಮತ್ತು ಛಾಯಾಚಿತ್ರದೊಂದಿಗೆ 5/14, ಮಿಲ್ಟನ್ ರಸ್ತೆ, ಕುಕ್ ಟೌನ್ ಬೆಂಗಳೂರು ಈ ವಿಳಾಸಕ್ಕೆ ಸಂಪರ್ಕಿಸಬಹುದು.

ಹೆಚ್ಚಿನ ವಿವರಗಳಿಗಾಗಿ 080-3296 6681 ಸಂಖ್ಯೆಗೆ ಕರೆ ಮಾಡಬಹುದು ಅಥವಾ ಆಸಕ್ತರ ಧ್ವನಿಯನ್ನು ರಿಲಯನ್ಸ್ ದೂರವಾಣಿ ಬಳಕೆದಾರರು 5600 6850 ಮತ್ತು ಬಿಎಸ್‌ಎನ್‌ಎಲ್ ಬಳಕೆದಾರರು 1255685 ಸಂಖ್ಯೆಗೆ ಕರೆ ಮಾಡುವ ಮೂಲಕ ತಮ್ಮ ಧ್ವನಿ ದಾಖಲಿಸಬಹುದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X