ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರು ಕುರಿತ ಅನೇಕ ಮಾಹಿತಿಗೆ ಕಾರ್ಜೂ ಆರ್ಜೂ!

By Staff
|
Google Oneindia Kannada News

ಬೆಂಗಳೂರು, ಡಿ. 6 : ಭಾರತದ ಪ್ರಪ್ರಥಮ ಇಂಟರ್ ಆಕ್ಟಿವ್ ಕಾರ್ ಪೊರ್ಟಲ್, CARAZOO.COM ಔಪಚಾರಿಕವಾಗಿ ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರಾರಂಭವಾಗಿದೆ. Logix Microsystemsನ ಕೂಸದ ಈ ಪೊರ್ಟಲ್ ಯುನೈಟೆಡ್ ಸ್ಟೇಟ್‌ನಲ್ಲಿ ಯಶಸ್ವಿಯಾದ izmocars ಉತ್ಪನ್ನ ಮತ್ತು ಸೇವೆಯಂತೆ ಭಾರತದ ವಿವಿಧ ಕಡೆಗಳಲ್ಲೂ ಯಶಸ್ವಿಯಾಗಿಸುವ ಗುರಿ ಹೊಂದಿದೆ. ವಾರ್ಡ್ಸ್ ಮ್ಯಾಗಜೀನ್ ಪ್ರಕಾರ ಅಟೋಮೊಟಿವ್ ಡೀಲರ್ಸ್‌ಗೆ ವೆಬ್ ಮೂಲಕ ಪರಿಹಾರ ನೀಡುವ ಉತ್ತಮ ಹತ್ತು ಸಂಸ್ಥೆಗಳಲ್ಲಿ ಇದು ದ್ವಿತೀಯ ಸ್ಥಾನವನ್ನು ಪಡೆದಿದೆ.

ಕಾರ್ ಖರೀದಿಗಾರರು/ಮಾರಾಟಗಾರರು, ಕಾರ್ ಉತ್ಪಾದಕರು, ಕಾರ್ ಡೀಲರ್ಸ್, ಕಾರ್ ಫೈನಾಸರ್ಸ್ ಮತ್ತು ಇನ್ಸೂರೆನ್ಸ್ ಒದಗಿಸುವವರು ಹಾಗೂ ಕಾರ್ ಸಾಧನ ಸಾಮಗ್ರಿ ಒದಗಿಸುವವರೊಡನೆ ಈ ಪೊರ್ಟಲ್ ಸಂಪರ್ಕ ಕಲ್ಪಿಸಲಿದೆ.

CARAZOO.COM ತೋರಿಸುವ (300ಕ್ಕೂ ಅಧಿಕ) ವಿಧದ ಕಾರಿನ ಲಕ್ಷಣಗಳನ್ನು ವೀಕ್ಷಕರು ಮುಟ್ಟಿ ಅನುಭವಿಸುವುದಕ್ಕಾಗಿ ಆನಿಮೇಷನ್‌ನ್ನು ಅಳವಡಿಸಲಾಗಿದೆ. ಯಾರು ಬೇಕಾದರೂ ಕಾರನ್ನು ವಾಸ್ತವದಂತೆ ಲಭ್ಯವಿರುವ ಇಷ್ಟದ ಬಣ್ಣ ಹಾಕಿ, 360 ಡಿಗ್ರಿಯಲ್ಲಿ ಕಾರಿನ ಹೊರ ಹಾಗೂ ಒಳ ನೋಟವನ್ನು ಕಾಣಬಹುದಾಗಿದೆ. ಅಲ್ಲದೇ ಈ ಅಂತರ್ ಜಾಲತಾಣ ಎಲ್ಲಾ ರೀತಿಯ ಬಳಸಿದ ಹಾಗೂ ಹೊಸ ಕಾರಿನ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ.

'ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ನಾವು ಈ ಕ್ಷೇತ್ರದಲ್ಲಿ ಪ್ರಥಮ ಸ್ಥಾನ ಪಡೆಯಲು ಮುಂದೆ ನೋಡುತ್ತಿದ್ದೇವೆ. ಭಾರತದ ಆರ್ಥಿಕತೆ ವರದಾನವಾಗಿದ್ದು ಜೊತೆಗೆ ಭಾರತದ ಅಟೋಮೊಬೈಲ್ ಉದ್ದಿಮೆ ಬೆಳೆಯುತ್ತಿದೆ ಮತ್ತು ಅಂತರ್ಜಾಲವು ಮಾಹಿತಿಯನ್ನು ಒದಗಿಸುವ ಪ್ರಮುಖ ಮೂಲ ಹಾಗೂ ಮಾರುಕಟ್ಟೆಯಾಗಿದ್ದು ಇದರ ಬೆಳವಣಿಗೆಗೆ ಸಹಕಾರಿಯಾಗಲಿದೆ. ಇಂತಹ ವಿಶೇಷ ಲಕ್ಷಣಗಳಿಂದ ಕಾರ್ ಖರೀದಿಮಾಡುವವರ, ಮಾರಾಟಮಾಡುವವರ ಹಾಗೂ ಕಾರಿನ ಕುರಿತಾಗಿ ಮಾಹಿತಿ ಬಯಸುವ ಪ್ರತಿಯೊಬ್ಬ ಭಾರತೀಯನ ದಾಹವನ್ನು ತಣಿಸುತ್ತದೆ. ನಮ್ಮ ಪೋರ್ಟಲ್‌ಗೆ CARAZOO.COM ಹೆಸರಿಡಲು ಮೂಲ "ಕಾರ್ ಕಿ ಆರ್ಜೂ - ಕಾರನ್ನು ಬಯಸು" ಎಂದು ಸಂಸ್ಥೆಯ ಉಪಾಧ್ಯಕ್ಷ ಪಂಕಜ್ ಪಟೇಲ್ ಸುದ್ದಿಗಾರರಿಗೆ ಹೇಳಿದರು.

ಕಾರ್ ಖರೀದಿಸುವವರು ವೈಯುಕ್ತಿಕವಾಗಿ ಕಾರಿನ ಬೆಲೆಯನ್ನು, ಅದರ ತಾಂತ್ರಿಕ ವಿಧಾನವನ್ನು ಮತ್ತು ಲಕ್ಷಣಗಳನ್ನು, ಆಯ್ಕೆಯಲ್ಲಿರುವ ಇತರೆ ಕಾರ್‌ಗಳಿಗೆ ಹೋಲಿಸಿ ನೋಡಬಹುದು. ಇ-ಪತ್ರಿಕೆಗಳು, ಕಾರ್‌ಗಳ ವಿಮರ್ಶೆ, ಇನ್ಸುರೆನ್ಸ್ ಮತ್ತು ಹಣಕಾಸು ವಿಚಾರಗಳನ್ನು ಇದು ಒದಗಿಸುತ್ತದೆ. ಅಲ್ಲದೇ ಒಂದು ಚಿಕ್ಕ ಅರ್ಜಿ ತುಂಬಿಸಿದರೆ ಅವರಿಗೆ ಇಷ್ಟವಾದ ಕಾರಿನ ಔಟ್ ಲೆಟ್ ಜೊತೆಗೆ ಕಾರಿನ ಸಮಗ್ರ ಮಾಹಿತಿಯನ್ನು ಪಡೆಯಬಹುದಾಗಿದೆ. ಅಥವಾ ಉಚಿತವಾಗಿ ಕಾರನ್ನು ಪ್ರಯೋಗಿಕವಾಗಿ ಚಲಾಯಿಸಲು ಅವಕಾಶ ಪಡೆಯಬಹುದಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X