• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಳ್ಳು ದಾಖಲೆ : ಧಾರಾವಾಹಿ ಕಂಪನಿ ವಿರುದ್ಧ ಜೀ ದೂರು

By Staff
|

ಬೆಂಗಳೂರು, ನ. 27 : ಜೀ ಕನ್ನಡ ಚಾನೆಲ್ಲಿನ ನಕಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಬೆಂಗಳೂರಿನ ಬ್ಯಾಂಕೊಂದರಲ್ಲಿ ಸಾಲಕ್ಕೆ ಪ್ರಯತ್ನ ಪಡುತ್ತಿದ್ದ ಧಾರಾವಾಹಿ ನಿರ್ಮಾಣ ಸಂಸ್ಥೆಯೊಂದರ ವಿರುದ್ಧ ಜೀ ನ್ಯೂಸ್ ಲಿಮಿಟೆಡ್ ಪ್ರಕರಣ ದಾಖಲಿಸಿದೆ.

ಅಕ್ವಿಲಾ ಫಿಲ್ಮ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ (ಕಲ್ಯಾಣನಗರ, ಎಚ್ ಆರ್ ಬಿ ಆರ್ ಮೊದಲನೆ ಹಂತ)ಪಿ.ಡೆಬೋರಾ ಶಿಯಾ ಅವರು ಅವೆನ್ಯೂ ರಸ್ತೆಯಲ್ಲಿರುವ ಮೈಸೂರು ಬ್ಯಾಂಕ್‌ನಲ್ಲಿ ಜೀ ಕನ್ನಡ ಹೆಸರಿನ ಕೆಲವು ಸುಳ್ಳು ದಾಖಲೆ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಿದವರಾಗಿದ್ದಾರೆ.

ನಿರ್ಮಾಪಕಿ ಪಿ.ಡೆಬೋರಾ ಅವರು ಜೀ ಕನ್ನಡಕ್ಕಾಗಿ 210ಕಂತುಗಳ ಧಾರಾವಾಹಿಯನ್ನು ನಿರ್ಮಿಸಲು ಗುತ್ತಿಗೆ ದೊರೆತಿದೆ ಎಂಬ ನಕಲು ಕರಾರು ಪತ್ರವನ್ನು ಸಾಲಕ್ಕಾಗಿ ಮೈಸೂರು ಬ್ಯಾಂಕ್‌ಗೆ ಸಲ್ಲಿಸಿದ್ದರು. ಜೀ ನೆಟ್‌ವರ್ಕ ಮತ್ತು ಅಕ್ವಿಲಾ ಫಿಲ್ಮ್ಸ್‌ನ ನಡುವಿನ ವ್ಯವಹಾರದ ನಕಲಿ MOUಕೂಡಾ ಸಲ್ಲಿಸಿದ್ದಾರೆ.

ಕೊನೆಯ ಕ್ಷಣದ ಪರಿಶಿಲನೆಗಾಗಿ ಜೀ ನೆಟ್‌ವರ್ಕ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ನಕಲಿ ದಾಖಲೆಯ ಪ್ರಕರಣ ಬೆಳಕಿಗೆ ಬಂದಿದೆ.

ಅಕ್ವಿಲಾ ಸಂಸ್ಥೆಯ ನಿರ್ಮಾಪಕರು ಜೀ ನೆಟ್‌ವರ್ಕ್ ಹೆಸರಿನ ಮುಖಪತ್ರ ಹಾಗೂ ಜೀ ಕನ್ನಡ ವ್ಯವಹಾರ ಮುಖ್ಯಸ್ಥ ಅನುಪ್ ಚಂದ್ರಶೇಖರ್ ಅವರ ಸಹಿಯನ್ನು ಕೂಡ ನಕಲು ಮಾಡಲಾಗಿದೆ. ನಗರದ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more