ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೂನಿಫಾರಂ ಕಳಚಿದ ಮುಷ್ರಫ್ ಮನದಾಳದ ಮಾತುಗಳು!

By Staff
|
Google Oneindia Kannada News

ರಾಮಲ್ಪಿಂಡಿ, ನ.28 : ಸುದೀರ್ಘ 46ವರ್ಷಗಳ ನಂತರ ತಮ್ಮ ಸೈನ್ಯಾಧ್ಯಕ್ಷ ಪದವಿಗೆ ಬುಧವಾರ (ನ.28) ರಾಜೀನಾಮೆ ನೀಡುವ ಮೂಲಕ ಸಮವಸ್ತ್ರ ಕಳಚಿಟ್ಟಿದ್ದಾರೆ ಮುಷಾರಫ್ ಸಾಹೇಬರು. ಆ ಸ್ಥಾನವನ್ನು ಅಸ್ಪಾಕ್ ಪರ್ವೇಜ್ ಕಿಯಾನಿ ಅಲಂಕರಿಸಿದ್ದಾರೆ.

ಪಾಕಿಸ್ತಾನದ ಭೂಸೈನ್ಯವು ವಿಶ್ವದಲ್ಲಿಯೇ ಅತ್ಯುತ್ತಮವಾಗಿದೆ. ಪಾಕಿಸ್ತಾನವನ್ನು ರಕ್ಷಿಸಲು ಭೂಸೈನಿಕರಿಂದ ಮಾತ್ರ ಸಾಧ್ಯ. ಕಿಯಾನಿ ಮೇಲೆ ನನಗೆ ಪೂರ್ತಿ ನಂಬಿಕೆ ಇದೆ. ಆತ ಒಬ್ಬ ಉತ್ತಮ ಸೈನಿಕ ಎಂದು ಈ ಸಂದರ್ಭದಲ್ಲಿ ಮುಷರಫ್ ತಿಳಿಸಿದ್ದಾರೆ.

ನನ್ನ 18ವರ್ಷಕ್ಕೆ ನಾನು ಸೈನ್ಯಕ್ಕೆ ಸೇರಿದೆ. ಎರಡು ಯುದ್ಧದಲ್ಲಿ ಪಾಲ್ಗೊಂಡಿದ್ದಕ್ಕೆ ನನಗೆ ಹೆಮ್ಮೆ ಅನ್ನಿಸುತ್ತದೆ. ಸೈನ್ಯಾಧ್ಯಕ್ಷ ಪದವಿಯನ್ನು ಬಿಡುತ್ತಿರುವುದರಿಂದ ಮನಸ್ಸಿಗೆ ನೋವಾಗುತ್ತಿದೆ. ನಾಳೆಯಿಂದ ನಾನು ಸೇನೆಯ ಸಮವಸ್ತ್ರ ಧರಿಸುವುದಿಲ್ಲ ಎಂದು ಅವರು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ಮುಷಾರಫ್ ಅವರು ಗುರುವಾರ (ನ.29) ಎರಡನೇ ಬಾರಿಗೆ ಪಾಕಿಸ್ತಾನ ಅಧ್ಯಕ್ಷ ಪದವಿಯನ್ನು ಸ್ವೀಕರಿಸಲಿದ್ದಾರೆ.

(ಏಜನ್ಸೀಸ್)

ಆರು ವರ್ಷಗಳ ಹಿಂದೆ ದಟ್ಸ್‌ಕನ್ನಡದಲ್ಲಿ ಪ್ರಕಟವಾದ ಸುದ್ದಿ :

ನಾನು ಮುಕ್ತ ಮನಸ್ಸಿನಿಂದ ಭಾರತಕ್ಕೆ ಬಂದಿದ್ದೇನೆ
ಆಗ್ರಾ ಶೃಂಗಸಭೆ: ಜುಲೈ 14-16

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X