ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನಕ್ಕೆ ಅಬ್ದುಲ್ ಕಲಾಂ

By Staff
|
Google Oneindia Kannada News

ಧರ್ಮಸ್ಥಳ, ನ.28 : ಕಾರ್ತೀಕ ಮಾಸದಲ್ಲಿ ನಡೆಯುವ ಧರ್ಮಸ್ಥಳದ ಪ್ರಸಿದ್ಧ ಲಕ್ಷ ದೀಪೋತ್ಸವ ಹಾಗೂ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ವಿಜ್ಞಾನಿ ಅಬ್ದುಲ್ ಕಲಾಂ ಆಗಮಿಸಲಿದ್ದಾರೆ.

ಡಿಸೆಂಬರ್ 5ರಿಂದ 9ರವರೆಗೆ ನಡೆಯುವ ವಿವಿಧ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಧರ್ಮಸ್ಥಳ ಸಾಕ್ಷಿಯಾಗಲಿದೆ. ಈ ಬಾರಿ ನಡೆಯುವ ಸಮ್ಮೇಳನಕ್ಕೆ 75ರ ಹರೆಯ ತುಂಬುತ್ತದೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಪ್ರಸ್ತಾವಿಕ ಭಾಷಣ ಮಾಡಲಿರುವುದು ವಿಶೇಷ. ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿ ಕಾರ್ಯಕ್ರಮಕ್ಕೆ ಶುಭ ಹಾರೈಸಲು ಬರುತ್ತಿದ್ದಾರೆ.

ಗದಗಿನ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದಲಿಂಗ ಸ್ವಾಮಿ ಉದ್ಘಾಟಿಸುವ ಈ ಸಮ್ಮೇಳನದಲ್ಲಿ ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪ , ಪ್ರೊ. ಮಲ್ಲೇಪುರಂ. ಜಿ. ವೆಂಕಟೇಶ್ ಮುಂತಾದ ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ ಎಂದು ಸ್ವಾಗತ ಸಮಿತಿಯ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ತಿಳಿಸಿದ್ದಾರೆ.

ಕಾರ್ಯಕ್ರಮ ವಿವರ:

  • ಡಿ. 6 : ಸಮ್ಯಕ್ ಜ್ಞಾನ ಭವನ ಅನಾವರಣ. ಸಮ್ಮೇಳನ ಉದ್ಘಾಟನೆ. ಲಲಿತಕಲೆ ಬಗ್ಗೆ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು
  • ಡಿ.7 : ವಜ್ರಮಹೋತ್ಸವ ಸಮಾರಂಭ ಉದ್ಘಾಟನೆ ಗುಜರಾತಿನ ಹರಿದಾಸ್ .ಜಿ. ಮಹರಾಜ್ ಅವರಿಂದ. ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮಿ ಹಾಗೂ ದೆಹಲಿಯ ಆರ್ಕ್ ಬಿಷಪ್ ಡಾ. ವಿನ್ಸೆಂಟ್ ಮೈಕಲ್ ಕನ್ಸೆನೊ ಅವರ ಉಪಸ್ಥಿತಿ. 'ಅಮೃತವರ್ಣಿ' ನೆನಪಿನ ಸಂಚಿಕೆ ಅನಾವರಣ. ಶ್ರೀಲಂಕಾದ ವಿಮಲಾರತ್ನ ಮತ್ತು ಲಂಡನ್ ನಡಾ. ಶೇಖ್ ಮುಹಮದ್ ಅಲಿಯವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನೃತ್ಯಗ್ರಾಮದ ಕಲಾವಿದರಿಂದ ಒಡಿಸ್ಸಿ ನೃತ್ಯ ಇರುತ್ತದೆ.
  • ಡಿ. 8 : ಹರಿದ್ವಾರದ ಸ್ವಾಮಿ ಮಹದೇಶ್ವರಾನಂದರವರಿಂದ ಸರ್ವ ಧರ್ಮ ಸಮ್ಮೇಳನ ಉದ್ಘಾಟನೆ. ಮುಂಬಯಿಯ ಮೌಲಾನಾ ಮಹಮದ್ ಶಿರದುಲ್ ಹಸನ್, ಎನ್.ಕೆ.ಸೇರಿ ಮತ್ತು ಧಾರವಾಡದ ವಿದ್ವಾನ್ ಜಯತೀರ್ಥ ಆಚಾರ್ಯ ಮಳಗಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
  • ಡಿ.9 : ಚಂದ್ರನಾಥ ಸ್ವಾಮೀಜಿ ಸಮಾರೋಪ ಪೂಜೆ ನೆರವೇರಿಸಲಿದ್ದಾರೆ. ರಾಜ್ಯ ಮಟ್ಟದ ವಸ್ತು ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಈ ಬಾರಿ ಮೆರಗು.

(ದಟ್ಸ್ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X