ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಐಎಂಬಿ 34ವರ್ಷದಿಂದ ಪಾಲಿಕೆಗೆ ತೆರಿಗೆ ಪಾವತಿಸಿಲ್ಲ!

By Super
|
Google Oneindia Kannada News

ಬೆಂಗಳೂರು, ನ. 27 : ನಗರದ ಐಐಎಂಬಿ(Indian Institute of Management, Bangalore)ಸಂಸ್ಥೆ ಸ್ಥಾಪನೆಯಾದಾಗಲಿಂದ ಈವರೆಗೂ, ತೆರಿಗೆ ಕಟ್ಟುವ ಗೋಜಿಗೆ ಹೋಗಿಲ್ಲ! ಈ ವಿಷಯವಾಗಿ ಬೆಂಗಳೂರು ಮಹಾನಗರ ಪಾಲಿಕೆ ನೋಟಿಸ್ ಜಾರಿಮಾಡಿದೆ.

ಐಐಎಂಬಿ ಸಂಸ್ಥೆಯ ಅಧಿಕಾರಿಗಳು ಈ ಬಗ್ಗೆ ಪತ್ರಿಕ್ರಿಯೆ ನೀಡುತ್ತಾ, ಇದು ಕೇಂದ್ರ ಸರ್ಕಾರದ ಒಡೆತನಕ್ಕೆ ಸೇರಿದ ಶಿಕ್ಷಣ ಸಂಸ್ಥೆಯಾಗಿದ್ದು, ಆಸ್ತಿ ತೆರಿಗೆ ಅನ್ವಯವಾಗುವುದಿಲ್ಲ. ಪಾಲಿಕೆಯಿಂದ ಯಾವುದೇ ಅಧಿಕೃತ ನೋಟಿಸ್ ನಮಗೆ ಬಂದಿಲ್ಲ ಎಂದಿದ್ದಾರೆ.

ಐಐಎಂಬಿ ಸರಕಾರದ ಅಧೀನಕ್ಕೆ ಒಳಪಟ್ಟಿದ್ದರೂ, ಸ್ವಾಯುತ್ತ ಸಂಸ್ಥೆಯಾಗಿದೆ. ಐಐಎಸ್ಸಿ ಆಸ್ತಿ ತೆರಿಗೆ ಪಾವತಿ ಮಾಡುತ್ತಿದೆ. ಅದರಂತೆ ಐಐಎಂಬಿಗೂ ಕೂಡ ತೆರಿಗೆ ಅನ್ವಯವಾಗಲಿದೆ. ಬೋಧಕರ ವಸತಿ ಗೃಹ, ಉಪಹಾರ ಗೃಹಗಳು ಐಐಎಂಬಿ ಆವರಣದಲ್ಲಿದ್ದು, ಎಲ್ಲವೂ ಮೌಲ್ಯಮಾಪನಕ್ಕೆ ಒಳಪಡುತ್ತವೆ. ಒಟ್ಟು ಪಾವತಿ ಮೊತ್ತ 5ಕೋಟಿ ರೂ ದಾಟುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಐಐಎಂಬಿ :
ಬೆಂಗಳೂರಿನ ದಕ್ಷಿಣ ಭಾಗದ ಬನ್ನೇರುಘಟ್ಟ ರಸ್ತೆಯ ಬಳಿ, 1973ರಲ್ಲಿ ಐಐಎಂಬಿ ಸ್ಥಾಪನೆಯಾಯಿತು. ನಂತರ ಸ್ವಾಯುತ್ತ ಸಂಸ್ಥೆ ಸ್ಥಾನಗಳಿಸಿತು. ದೇಶದ ಪ್ರಮುಖ ಬಿಸಿನೆಸ್ ಸ್ಕೂಲ್ ಹಾಗೂ ಅತಿ ಹೆಚ್ಚು ತೆರಿಗೆ ಪಾವತಿದಾರರನ್ನು ಉತ್ಪಾದಿಸುವ ಹೆಗ್ಗಳಿಕೆಯನ್ನು ಸಂಸ್ಥೆ ಹೊಂದಿದೆ.(ದಟ್ಸ್ ಕನ್ನಡ ವಾರ್ತೆ)

English summary
BBMP issued a notice to IIM B for not paying tax way back from 70's. BBMP said it is it is a central govt organsization and no need to pay the tax.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X