ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸೆಂಬ್ಲಿ ವಿಸರ್ಜನೆಗೆ ಮುನ್ನ ನಡೆದ ದೊಂಬರಾಟ ಹೀಗಿದೆ

By Staff
|
Google Oneindia Kannada News

ಅಸೆಂಬ್ಲಿ ವಿಸರ್ಜನೆಗೆ ಮುನ್ನ ನಡೆದ ದೊಂಬರಾಟ ಬೆಂಗಳೂರು, ನ.25:ಅಸೆಂಬ್ಲಿ ವಿಸರ್ಜನೆಗೆ ಮುನ್ನ ರಾಜ್ಯ ರಾಜಕೀಯದಲ್ಲಿ ನಡೆದ ಸಭೆಗಳು, ಹೊಂದಾಣಿಕೆ ಕಸರತ್ತುಗಳು ಹೀಗಿದೆ:

ಜೆಡಿಎಸ್ ನಲ್ಲಿ ಹೊಂದಾಣಿಕೆ ಇಲ್ಲ:
ಜೆಡಿಎಸ್ ನಲ್ಲಿ ಬಂಡಾಯಕ್ಕೆ ನಾಂದಿ ಹಾಡಿದ್ದ ಎಂ.ಪಿ.ಪ್ರಕಾಶ್ . ಜೆಡಿಎಸ್ ಕಾರ್ಯಕಾರಣಿ ಸಭೆಗೆ ಮುನ್ನ ಸಮಾನಮನಸ್ಕರ ಜೊತೆ ಎಂ.ಪಿ.ಪ್ರಕಾಶ್ ಮಾತುಕತೆ. ಕಾರ್ಯಕಾರಣಿ ಸಭೆಗೆ ಪ್ರಕಾಶ್ ಹೋಗುವುದು ಅನುಮಾನ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಕಾಂಗ್ರೆಸ್ ಜತೆ ಎಂ.ಪಿ. ಪ್ರಕಾಶ್ ದೋಸ್ತಿ ಸುದ್ದಿ ಬರೀ ಊಹಾಪೋಹ ಎಂದು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯಯ್ಯ ಹೇಳಿದ್ದಾರೆ .ಮಾಜಿ ಸಚಿವ ಡಾ.ಶಂಕರ್ ನಾಯಕ್ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದಾರೆ.

ಈ ಮಧ್ಯೆ ಸಮ್ಮಿಶ್ರ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ಚೆಲುವ ರಾಯಸ್ವಾಮಿಯವರನ್ನು ಪಕ್ಷವಿರೋಧಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆಂದು ಆರೋಪಿಸಿ,ಅಮಾನತುಗೊಳಿಸಲು ಜೆಡಿಎಸ್ ನ ವರಿಷ್ಠರು ನಿರ್ಧರಿದ್ದಾರೆ.ಇತ್ತೀಚಿನ ರಾಜಕೀಯ ತಮಗೆ ಬೇಸರ ತಂದಿದೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಅಥವಾ ಜೆಡಿಎಸ್ ತೊರೆಯುತ್ತೇನೆ ಎಂದು ಚೆಲುವರಾಯ ಸ್ವಾಮಿ ಹೇಳಿದ್ದಾರೆ.

ಬಿಎಸ್ ಪಿ ಬಲವರ್ಧನೆ:
ಬಿಎಸ್ ಪಿ ಹಾಗೂ ಜೆಡಿಎಸ್ ನಕಾರ್ಯಕರ್ತರ ಸಭೆ ನಡೆಸಲಾಗಿದೆ. ಜೆಡಿಎಸ್ ನ ಹಿರಿಯ ನಾಯಕ ಎಂ.ವಿ. ರಾಜಶೇಖರ ಮೂರ್ತಿಯವರನ್ನು ಬಿಎಸ್ ಪಿ ಸೇರುವಂತೆ ಆಹ್ವಾನ ನೀಡಲಾಗಿದೆ ಎಂದು ಬಹುಜನ ಸಮಾಜ ಪಾರ್ಟಿ ಮುಖಂಡ ಪಿಜಿಆರ್ ಸಿಂಧ್ಯಾ ಹೇಳಿದ್ದಾರೆ. ಈ ಬಾರಿ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಎಸ್. ಬಂಗಾರಪ್ಪ ಘೋಷಿಸಿದ್ದಾರೆ.

ರೇವಣ್ಣ ಹಾಯಾಗಿರಲಿ: ಯಡ್ಡಿ
ಸೈಕಲ್ ಸ್ಕೀಂ ಬಗ್ಗೆ ರೇವಣ್ಣ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಅವರ ಆರೋಪ ನಿಜವಾದರೆ ನನ್ನ ಮಕ್ಕಳಿಗೆ ಕೆಡುಕಾಗಲಿ, ರೇವಣ್ಣ ಸಂತೋಷವಾಗಿರಲಿ. ದೇವರು ಒಳ್ಳೆದು ಮಾಡಲಿ. ಕುಮಾರಸ್ವಾಮಿಯವರು ಕೊನೆಯ ಸಮಯದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಅನರ್ಹಗೊಳಿಸಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X