ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಹಾನ್ಸ್ ಆವರಣದೊಳಗಿನ ಕಟ್ಟಡ ಕುಸಿತ; ಇಬ್ಬರು ಬಲಿ

By Staff
|
Google Oneindia Kannada News

ಬೆಂಗಳೂರು, ನ.22 : ಇನ್ಫೋಸಿಸ್, ಬಯೋಕಾನ್, ಈಡಬ್ಲ್ಯುಎಸ್ ಕ್ವಾರ್ಡರ್ಸ್ ಸೇರಿದಂತೆ ರಾಜಧಾನಿಯ ವಿವಿಧೆಡೆ ಇತ್ತೀಚೆಗೆ ಕಟ್ಟಡ ಕುಸಿದು, ವ್ಯಕ್ತಿಗಳು ಸಾವನ್ನಪ್ಪಿದ ಘಟನೆಗಳು ನಡೆಯುತ್ತಲೇ ಇವೆ. ಇದೀಗ ನಿಮ್ಹಾನ್ಸ್ ಆಸ್ಪತ್ರೆಯ ವಸತಿ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುರುವಾರ(ನ.22) ವರದಿಯಾಗಿದೆ.

ಶಿಥಿಲ ವಸತಿ ಕಟ್ಟಡವನ್ನು ನೆಲಸಮ ಮಾಡಿ ಅಲ್ಲಿ ವಸತಿ ಸಂಕೀರ್ಣ ನಿರ್ಮಾಣ ಮಾಡಲು ಯೋಜನೆ ರೂಪುಗೊಂಡಿತ್ತು. ಈ ಕಟ್ಟಡದ ಕಿಟಕಿ ಮತ್ತು ಲೋಹದ ಉಪಕರಣಗಳ ತೆರವು ಮಾಡುವಾಗ ಕಟ್ಟಡ ಕುಸಿಯಿತು. ಮೃತರನ್ನು ನಿಮ್ಹಾನ್ಸ್ ಇಂಜಿನಿಯರಿಂಗ್ ವಿಭಾಗಕ್ಕೆ ಸೇರಿದ ಹೊಸಕೋಟೆಯ ಬಾಬು(40) ಮತ್ತು ಭದ್ರಾವತಿಯ ಪ್ರಕಾಶ್(45) ಎಂದು ಗುರ್ತಿಸಲಾಗಿದೆ.

ಬುಧವಾರ ಸಂಜೆ ಈ ದುರಂತ ಸಂಭವಿಸಿದೆ. ಇನ್ನೊಬ್ಬ ವ್ಯಕ್ತಿ ಅವಶೇಷಗಳಡಿ ಸಿಲುಕಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪತ್ತೆ ಕಾರ್ಯ ಮುಂದುವರೆದಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X