ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡ : ಭಾವೀ ಯೋಧರ ಮೇಲೆ ಪೊಲೀಸರ ಲಾಠಿ!

By Staff
|
Google Oneindia Kannada News

ಧಾರವಾಡ, ನ.21: ಸೈನಿಕರಾಗುವ ಆಸೆ ಹೊತ್ತು ಬಂದ ಯುವಕರಿಗೆ ಸಿಕ್ಕಿದ್ದು ಪೋಲೀಸರ ಲಾಠಿ ಏಟು. ಸರದಿಯಲ್ಲಿ ನಿಂತಿದ್ದ ಸಾವಿರಾರು ಮಂದಿ ಯುವಕರ ಮೇಲೆ ಪೋಲೀಸರು ಲಾಠಿ ಝಳಪಿಸಿ ಮೂವರು ಯುವಕರನ್ನು ಗಾಯಗೊಳಿಸಿದ್ದಾರೆ.

ಘಟನೆ ನಡೆದದ್ದು ಎಲ್ಲಿ? ಯಾವಾಗ?
ಧಾರವಾಡ ನಗರದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ. ಮಂಗಳವಾರ (ನ.20) ಬೆ.7ಗಂಟೆಗೆ.

ಏನಾಯಿತು?
ಹಸಿವು, ದಾವರ, ಚಳಿಯನ್ನು ಲೆಕ್ಕಿಸದೆ ಬೆಳಗ್ಗೆಯಿಂದಲೇ ನಿರೀಕ್ಷೆಗೂ ಮೀರಿ ಯುವಕರು ಸೈನ್ಯಕ್ಕೆ ಸೇರಲು ಬಂದಿದ್ದರು. ಸೇನಾ ಭರ್ತಿ ಆರಂಭವಾಗುತ್ತಿದ್ದಂತೆ ನೂಕು ನುಗ್ಗಲು ಆರಂಭವಾಯಿತು. ಇದನ್ನು ನಿಯಂತ್ರಿಸಲು ಪೋಲೀಸರು ಲಾಠಿ ಪ್ರಹಾರ ಮಾಡಿದರು.

ಯಾವ್ಯಾವ ಜಿಲ್ಲೆಗಳಿಂದ ಬಂದಿದ್ದರು?
ಬೆಳಗಾವಿ, ಬೀದರ್, ಕೊಪ್ಪಳ, ಗುಲ್ಬರ್ಗ, ಬಾಗಲಕೋಟೆ, ಹಾವೇರಿ, ರಾಯಚೂರು, ಬಳ್ಳಾರಿ, ಬಿಜಾಪುರ, ಗದಗ ಮತ್ತು ಧಾರವಾಡ

ಹೇಗಾಯಿತು?
ಪೋಲೀಸರ ಲಾಠಿ ಪ್ರಹಾರಕ್ಕೆ ಅಸಮಾಧಾನಗೊಂಡ ಯುವಕರು ಕಲ್ಲು ತೂರಿದರು. ಪೋಲೀಸರು ನಿಯಂತ್ರಿಸಿದರು. ಮತ್ತೆ ನೂಕುನುಗ್ಗಲು ಪ್ರಾರಂಭವಾಗಿ ಪೋಲೀಸರ ನಿಯಂತ್ರಣ ತಪ್ಪಿದಾಗ ಬೆ.10ಗಂಟೆಗೆ ಎರಡನೇ ಬಾರಿ ಲಾಠಿ ಪ್ರಹಾರ ನಡೆಯಿತು.

ಗಾಯಗೊಂಡವರು ಯಾರು?
ಪೋಲೀಸ್ ಮೂಲಗಳ ಪ್ರಕಾರ ನರಗುಂದದ ಹುಲ್ಲಪ್ಪ, ಬೀಳಗಿಯ ಸುರೇಶ್ ಬಡಿಗೇರ ಹಾಗೂ ಗುಡಗೇರಿ ಹಳ್ಳಿಯ ದಾದಾಪೀರ್ ಹುನಸಿಕಟ್ಟಿ.

ಯಾರು ಕಾರಣರು?
ಮುಂಜಾಗ್ರತೆ ವ್ಯವಸ್ಥೆ ಕಲ್ಪಿಸದ ಜಿಲ್ಲಾಡಳಿತ ಹಾಗೂ ಪೋಲೀಸ್ ಇಲಾಖೆ. ಹನ್ನೊಂದು ಜಿಲ್ಲೆಗಳಿಂದ ಉದ್ಯೋಗಾಕಾಂಕ್ಷಿಗಳು ರಾತ್ರಿಯಿಂದಲೇ ಬರುತ್ತಿದ್ದರೂ ಕನಿಷ್ಠ ಬ್ಯಾರಿಕೇಡ್ ಹಾಕದೆ ಸೂಕ್ತ ವ್ಯವಸ್ಥೆ ಕಲ್ಪಿಸಿರಲಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಬಸ್ ನಿಲ್ದಾಣ, ದೇವಸ್ಥಾನ, ರಸ್ತೆ ಹೀಗೆ ಎಲ್ಲೆಂದರಲ್ಲಿ ಸೇನಾಕಾಂಕ್ಷಿಗಳು ವಾಸ್ತವ್ಯ ಹೂಡಿದ್ದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X