ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಬೀರ್ ಭಾಟಿಯಾರಿಂದ ಇನ್ನೊಂದು ಉತ್ಪನ್ನ ಅಭಿವೃದ್ಧಿ

By Staff
|
Google Oneindia Kannada News

ಬೆಂಗಳೂರು, ನ.19 : ಹಾಟ್‌ಮೇಲ್ ಸ್ಥಾಪಕ ಸಬೀರ್ ಭಾಟಿಯಾ ಇನ್ನೊಂದು ಆನ್‌ಲೈನ್ ಉತ್ಪನ್ನವನ್ನು ಬುಧವಾರ ಜಾಗತಿಕ ಮಾರುಕಟ್ಟೆಗೆ ಬಿಡುತ್ತಿದ್ದಾರೆ.

ಈ ಹೊಸ ಉತ್ಪನ್ನದ ಕುರಿತು ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಭಾಟಿಯಾ ಅವರು, ಭಾರತ ಸೇರಿದಂತೆ ಜಗತ್ತಿನಾದ್ಯಂತ ಒಂದೇ ದಿನ ಬಿಡುಗಡೆಯಾಗುತ್ತಿದೆ ಎಂದರು.

ಮೊದಲು ಮುಂಬೈನಲ್ಲಿ ಈ ಪ್ರಾಡಕ್ಟನ್ನು ಅನಾವರಣಗೊಳಿಸಲಾಗುತ್ತಿದೆ. ಈ ಉತ್ಪನ್ನ ವಾರ್ಷಿಕ 20 ಬಿಲಿಯನ್ ಅಮೆರಿಕನ್ ಡಾಲರ್ ಗಳಿಸುವ ನಿರೀಕ್ಷೆಯನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಈ ಉತ್ಪನ್ನದ ಅಗ್ಗಳಿಕೆಯೆಂದರೆ ಇದು ಬೆಂಗಳೂರಿನಲ್ಲಿಯೇ ವಿನ್ಯಾಸಗೊಂಡು ಅಭಿವೃದ್ಧಿ ಹೊಂದಿದೆ. ನಗರದ ನೂರಕ್ಕೂ ಹೆಚ್ಚಿನ ನುರಿತ ಸಾಫ್ಟ್‌ವೇರ್ ತಜ್ಞರು ಈ ಉತ್ಪನ್ನದ ಅಭಿವೃದ್ಧಿಗೆ ಶ್ರಮವನ್ನು ಧಾರೆಯೆರೆದಿದ್ದಾರೆ ಎಂದು ಭಾಟಿಯಾ ಹೇಳಿದರು.

ಆದರೆ ಈ ಉತ್ಪನ್ನ ಹೊರತರಲು ಹೂಡಿರುವ ಬಂಡವಾಳದ ಕುರಿತು ಯಾವುದೇ ವಿವರ ಬಹಿರಂಗಪಡಿಸಲು ಅವರು ನಿರಾಕರಿಸಿದರು.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X