• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಸ ಸರ್ಕಾರದ ಬಗ್ಗೆ ನಾಡಿನ ಪತ್ರಿಕೆಗಳು ಏನನ್ನುತ್ತವೆ?

By Staff
|

ಬೆಂಗಳೂರು, ನ.13: ಬಿಜೆಪಿ ಜೆಡಿಎಸ್‌ನ ಹೊಸ ಮೈತ್ರಿ ಸರಕಾರದ ಬಗ್ಗೆ ನಾಡಿನ ಪ್ರಮುಖ ಪತ್ರಿಕೆಗಳು ಏನು ಹೇಳುತ್ತವೆ ಎಂಬುದನ್ನು ಕೊಂಚ ಓದಿ. ಪ್ರಮುಖ ಪತ್ರಿಕೆಗಳಲ್ಲಿನ ಇಂದಿನ (ನ.13) ಸಂಪಾದಕೀಯದ ಆಯ್ದ ಕೆನೆಪದರ ಇಲ್ಲಿದೆ. ಮೈತ್ರಿ ಸರಕಾರವನ್ನು ಪ್ರಜಾವಾಣಿ 'ತಂತಿ ಮೇಲಿನ ಕಸರತ್ತು" ಎಂದರೆ ಕನ್ನಡ ಪ್ರಭ 'ಎಲ್ಲೆಲ್ಲೂ ಕೇಸರಿ, ಅರಳಿದ ಕಮಲ" ಎಂದಿದೆ. ಇನ್ನೂ ವಿಜಯ ಕರ್ನಾಟಕ 'ಯಡಿಯೂರಪ್ಪಗೆ ಮುಳ್ಳಿನ ಹಾದಿ,ಮಿತ್ರ ಪಕ್ಷಗಳಲ್ಲಿ ಸಮನ್ವಯ ಇರುವುದೇ?" ಎಂದು ಕೇಳಿದೆ.

ಕನ್ನಡಪ್ರಭ

ಎಲ್ಲೆಲ್ಲೂ ಕೇಸರಿ, ಅರಳಿದ ಕಮಲ : ಈ ಎಲ್ಲ ಅಬ್ಬರ, ಆವುಟ, ಧಾರ್ಮಿಕ ಶ್ರದ್ಧೆಗಳನ್ನೆಲ್ಲ ಒಂದು ಇತಿ:ಮಿತಿಯಲ್ಲಿ ಇಟ್ಟರೇ ಶೋಭೆ. ಇಲ್ಲದಿದ್ದರೆ, ಅದೆಲ್ಲವೂ ಆಟಾಟೋಪದಂತೆ ಆಗುತ್ತದೆ. ಹಾಗಾಗಬಾರದು. ಯಡಿಯೂರಪ್ಪ ಬಜೆಟ್‌ನಲ್ಲಿ ಪ್ರಕಟಿಸಿದ್ದ ಎಲ್ಲ ಯೋಜನೆಗಳನ್ನೂ ಶೀಘ್ರದಲ್ಲಿ ಕಾರ್ಯಾಚರಣೆಯಲ್ಲಿ ತರುವತ್ತ ಈಗ ಗಮನ ಹರಿಸಲೇ ಬೇಕು. ಗುಡ್ ಲಕ್ ಯಡಿಯೂರಪ್ಪ.

ಪ್ರಜಾವಾಣಿ

ತಂತಿ ಮೇಲಿನ ಕಸರತ್ತು : ರೈತರ ಮತ್ತು ಹಳ್ಳಿಗಳ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಬಿಜೆಪಿಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಪರಿಚಯಿಸುವ ಮೂಲಕ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಿದ ಯಡಿಯೂರಪ್ಪ ಅವರಲ್ಲಿ ವಿರೋಧ ಪಕ್ಷದಲ್ಲಿದ್ದಾಗ ಇದ್ದ ಕೋಪ-ತಾಪಗಳು ಈಗ ಇಲ್ಲ. ತಾಳ್ಮೆ ಸಹನೆ ಅವರಲ್ಲಿ ಈಗ ಎದ್ದು ಕಾಣುತ್ತಿದೆ. ಇಪ್ಪತ್ತು ತಿಂಗಳ ಅಧಿಕಾರಾವಧಿಯಲ್ಲಿ ಅವರಿಗೆ ಸಾಕಷ್ಟು ಆಡಳಿತ ಅನುಭವವೂ ಆಗಿದೆ. ಎರಡು ಬಜೆಟ್‌ಗಳನ್ನು ಮಂಡಿಸಿರುವ ಅವರು, ಇನ್ನು ಮುಂದೆ ಎಲ್ಲ ವರ್ಗದ ಜನರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಪೂರ್ವಗ್ರಹ ಮತ್ತು ಪಕ್ಷ ಭೇದವಿಲ್ಲದೆ ಮಕ್ತಮನಸ್ಸಿನಿಂದ ಕೆಲಸ ಮಾಡಬೇಕಿದೆ. ಈ ಕಾರ್ಯದಲ್ಲಿ ಸಂಘಪರಿವಾರ ಮತ್ತು ಜೆಡಿಎಸ್ ಎಷ್ಟರ ಮಟ್ಟಿಗೆ ಸಹಕಾರ ನೀಡುತ್ತವೆ ಎಂಬುದರ ಮೇಲೆ ಅವರ ಯಶಸ್ಸು ನಿಂತಿದೆ.

ವಿಜಯ ಕರ್ನಾಟಕ

ಯಡಿಯೂರಪ್ಪಗೆ ಮುಳ್ಳಿನ ಹಾದಿ,ಮಿತ್ರ ಪಕ್ಷಗಳಲ್ಲಿ ಸಮನ್ವಯ ಇರುವುದೇ? : ಜೆಡಿಎಸ್ ಪ್ರತ್ಯೇಕ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಿದೆ. ಇದಕ್ಕೆ ಜ್ಯೋತಿಷಿಗಳ ಸಲಹೆ ಸೇರಿದಂತೆ ನಾನಾ ಕಾರಣಗಳನ್ನು ಮುಂದಿಡಲಾಗುತ್ತಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಮುಂದುವರಿದು ಚುನಾವಣೆಗೆ ಹಾದಿ ಮಾಡಲಾಗುತ್ತದೆ ಎಂಬುದು ಹೆಚ್ಚೂ ಕಡಿಮೆ ನಿಶ್ಚಿತವಾಗಿದ್ದಾಗ ದಿಢೀರನೆ ಸರಕಾರ ರಚನೆ ಮತ್ತೆ ತಲೆ ಎತ್ತಿತು. ಇದರಲ್ಲಿ ಜ್ಯೋತಿಷಿಗಳು ಪ್ರಮುಖ ಪಾತ್ರ ವಹಿಸಿದ್ದರೆಂದು ಹೇಳಲಾಗುತ್ತಿದೆ. ರಾಜಕಾರಣಿಗಳಿಗೂ ಜ್ಯೋತಿಷಿಗಳಿಗೂ ಇರುವ ನಂಟು ಹೊಸದೇನಲ್ಲ. ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ಜೆಡಿಎಸ್ ಅಧಿನಾಯಕ ದೇವೇಗೌಡರು ಕೊನೆಗೂ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಒಪ್ಪಿಕೊಂಡರಂತೆ.

ಸಂಯುಕ್ತ ಕರ್ನಾಟಕ

ಯಡಿಯೂರಪ್ಪ ನೇರ ಮಾತಿನ ರಾಜಕಾರಣಿ. ಅವರಲ್ಲಿ ಕಪಟತನವಿಲ್ಲ. ಕಂಡಿದ್ದನ್ನು ಕಂಡಂತೆ ಹೇಳುವ ಸ್ವಭಾವ ಅವರದು ಎಂಬುದನ್ನು ನಾಡಿನ ಜನತೆ ಈಗಾಗಲೇ ಅರಿತಿದ್ದಾರೆ. ಅದೇನೇ ಇರಲಿ, ರಾಜ್ಯದಲ್ಲಿ ಬೀಸಿರುವ ಹೊಸ ರಾಜಕೀಯ ಗಾಳಿ ಸರ್ವರಿಗೂ ಮುದ ನೀಡಲಿ. ಯಡಿಯೂರಪ್ಪನವರ ಸಾರಥ್ಯದ ಆಡಳಿತ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಲಿ.

(ದಟ್ಸ್‌ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more