ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ. 18ರಂದು ಪೂರ್ಣ ಸಚಿವ ಸಂಪುಟ ವಿಸ್ತರಣೆ?

By Staff
|
Google Oneindia Kannada News

ಬೆಂಗಳೂರು, ನ.11: ಭಾವೀ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ (ನ.15) ಅಥವಾ ಶುಕ್ರವಾರ (ನ.16) ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಲಿದ್ದಾರೆ.

ಸೋಮವಾರ ಪ್ರಮಾಣ ಸ್ವೀಕರಿಸಿದ ನಂತರ ಔಪಚಾರಿಕವಾಗಿ ಸಂಪುಟ ಸಭೆ ನಡೆಸಿ ವಿಶ್ವಾಸಮತ ಕೋರುವ ದಿನಾಂಕವನ್ನು ಅವರು ರಾಜ್ಯಪಾಲರಿಗೆ ತಿಳಿಸಲಿದ್ದಾರೆ. ಈ ಸಂಬಂಧ ರಾಜ್ಯಪಾಲರು ವಿಧಾನಸಭಾಧ್ಯಕ್ಷರಿಗೆ ಅಧಿಸೂಚನೆಯನ್ನು ಕಳುಹಿಸಲಿದ್ದಾರೆ. ಹಾಗಾಗಿ ಗುರುವಾರ ಅಥವಾ ಶುಕ್ರವಾರ ವಿಶ್ವಾಸಮತ ಕೊರುವ ಅಧಿವೇಶನ ನಡೆಯುವುದು ಖಚಿತವಾಗಿದೆ.

ಸಂಪುಟ ಸಭೆ ವಿಸ್ತರಣೆಯು ನ.18ರಂದು ಆಗಬಹುದೆಂದು ಮೂಲಗಳು ತಿಳಿಸಿವೆ. ಜೆಡಿಎಸ್, ಬಿಜೆಪಿ ತಮ್ಮ ಪಾಲಿನ 32 ಸಚಿವ ಸ್ಥಾನಗಳನ್ನು ಕ್ರಮವಾಗಿ 17, 15 ಸಚಿವ ಸ್ಥಾನಗಳನ್ನು ಹಂಚಿಕೊಳ್ಳಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಉಭಯ ಪಕ್ಷಗಳೂ ನ.18 ರಂದು ಎಲ್ಲಾ ಸ್ಥಾನಗಳನ್ನು ತುಂಬುವ ನಿರ್ಧಾರಕ್ಕೆ ಬಂದರೆ ಅಂದೇ ಪೂರ್ಣ ಪ್ರಮಾಣದ ಸಂಪುಟ ಅಸ್ತಿತ್ವಕ್ಕೆ ಬರಲಿದೆ. ಆದರೆ ಎಲ್ಲಾ ಸ್ಥಾನಗಳನ್ನು ಹಂಚಲು ಜೆಡಿಎಸ್ ಉತ್ಸುಕವಾಗಿದ್ದರೆ ಬಿಜೆಪಿ ಸ್ವಲ್ಪ ಹಿಂದು ಮುಂದು ನೋಡಿ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X