ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೀಗೊಂದು ಲೆಕ್ಕಾಚಾರ: ಯಾವ ಖಾತೆ ಯಾರ ಮಡಿಲಿಗೆ?!

By Staff
|
Google Oneindia Kannada News

ಬೆಂಗಳೂರು, ನ.11: ಮಹತ್ವದ ಖಾತೆಗಳ ಹಂಚಿಕೆಗಾಗಿ ಉಭಯ ಪಕ್ಷಗಳ ನಡುವೆ ತಿಕ್ಕಾಟ ನಡೆಯುತ್ತಿದೆ. ಯಾವ ಖಾತೆ ಯಾರಿಗೆ ಅನುಕೂಲವಾಗಬಹುದು. ಯಾವುದನ್ನು ಇಟ್ಟುಕೊಳ್ಳಬೇಕು ಯಾವುದನ್ನು ಬಿಟ್ಟುಕೊಡಬೇಕು? ಎರಡೂ ಪಕ್ಷಗಳು ಈಗ ಲಾಭ ನಷ್ಟದ ಲೆಕ್ಕಾಚಾರದಲ್ಲಿ ತೊಡಗಿವೆ.

ಲೋಕೋಪಯೋಗಿ ಮತ್ತು ಇಂಧನ ಖಾತೆ ರೇವಣ್ಣನಿಗೇ ಸಿಗಬಹುದು. ಏಕೆಂದರೆ ಬಿಜೆಪಿ ನಾಯಕರೂ ಸೇರಿದಂತೆ ಯಾರೂ ಈ ಖಾತೆಗಳ ಕ್ಯಾತೆಗೆ ಹೋಗುವುದಿಲ್ಲ. ಹಣಕಾಸು, ಅಬಕಾರಿ ಖಾತೆಗಳನ್ನು ಬಿಟ್ಟುಕೊಡುವಂತೆ ಜೆಡಿಎಸ್ ಮನವಿ ಮಾಡಲಿದೆ. ಹಾಗೆಯೇ ಬಳ್ಳಾರಿಯ 'ರೆಡ್ಡಿ ಬ್ರದರ್ಸ್" ಅನ್ನು ಅಂಕೆಯಲ್ಲಿ ಇಡಬೇಕಾದರೆ ಗಣಿ ಮತ್ತು ಅರಣ್ಯ ಖಾತೆಗಳು ತಮ್ಮ ಹಿಡಿತದಲ್ಲಿ ಇರಬೇಕು ಎಂಬುದು ಕುಮಾರಸ್ವಾಮಿ ಹುನ್ನಾರ. ಬಿಜೆಪಿಗೆ ಜಲಸಂಪನ್ಮೂಲ ಖಾತೆ ಬಿಟ್ಟುಕೊಡಲು ಜೆಡಿಎಸ್ ತಯಾರಿದೆ. ನಗರಾಭಿವೃದ್ಧಿ ಅಶೋಕ್‌ಗೆ ಕೊಡಲು ಅಡ್ಡಿ ಇಲ್ಲ ದೇವೇಗೌಡರೇ ಹೇಳಿದ್ದಾರೆ.

ಇನ್ನು ಸಚಿವ ಸ್ಥಾನ ಸಿಗದ ಅತೃಪ್ತ ಶಾಸಕರಿಗೆ ಪ್ರಮುಖ ನಿಗಮ ಮಂಡಳಿಗಳಗೆ ನೇಮಿಸಿ ಅವರ ಬಾಯಿ ಮುಚ್ಚಿಸುವ ಕಸರತ್ತೂ ಉಭಯ ಪಕ್ಷಗಳ ಪಾಳಯದಲ್ಲಿ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಹಿಂದಿನ ಸರಕಾರದ ಖಾತೆಗಳ ಹಂಚಿಕೆ ಹೀಗಿತ್ತು:

ಬಿಜೆಪಿ: ಹಣಕಾಸು, ಅಬಕಾರಿ, ಜಲಸಂಪನ್ಮೂಲ, ಕಂದಾಯ, ಉನ್ನತ ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಆಹಾರ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಪ್ರವಾಸೋದ್ಯಮ, ಮೀನುಗಾರಿಕೆ, ಮುಜರಾಯಿ, ಪಶುಸಂಗೋಪನೆ, ತೋಟಗಾರಿಕೆ, ರೇಷ್ಮೆ

ಜೆಡಿಎಸ್: ನಗರಾಭಿವೃದ್ಧಿ, ಗಣಿ ಮತ್ತು ಭೂ ವಿಜ್ಞಾನ, ವಾರ್ತೆ, ಸಾರ್ವಜನಿಕ ಉದ್ದಿಮೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗೃಹ, ಕಾನೂನು ಹಾಗೂ ಸಂಸದೀಯ ವ್ಯವಹಾರ, ಲೋಕೋಪಯೋಗಿ, ಇಂಧನ, ಅರಣ್ಯ, ಸಾರಿಗೆ, ವಸತಿ, ಕ್ರೀಡೆ, ಪ್ರಾಥಮಿಕ ಶಿಕ್ಷಣ, ಕಾರ್ಮಿಕ, ಕೃಷಿ ಮಾರುಕಟ್ಟೆ, ಯುವಜನಸೇವೆ, ಕೃಷಿ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ಪೌರಾಡಳಿತ, ಸಹಕಾರ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X