ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯಪಾನ ಮಾಡುವ ಮಹಿಳೆಯರಿಗೆ ವಿಜ್ಞಾನಿಗಳ ಎಚ್ಚರಕೆ!

By Staff
|
Google Oneindia Kannada News

ನ್ಯೂಯಾರ್ಕ್, ನ.11: ಗರ್ಭಿಣಿ ಮಹಿಳೆಯರು ಮದ್ಯಪಾನ ಮಾಡುವುದರಿಂದ ಹುಟ್ಟಲಿರುವ ಮಗು ಕೆಟ್ಟ ಗುಣನಡತೆಗಳನ್ನು ಹೊಂದುವ ಸಾಧ್ಯತೆಗಳಿವೆ ಎಂದು ಅಮೆರಿಕ ವಿಜ್ಞಾನಿಗಳು ತಿಳಿಸಿದ್ದಾರೆ.

ಗರ್ಭವತಿಯಾಗಿದ್ದಾಗ ಎಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸುವುದುದು ಸುರಕ್ಷಿತ ಎಂಬುದು ನಮಗೆ ತಿಳಿದಿಲ್ಲ. ಆದರೆ ನಮ್ಮ ಸಂಶೋಧನೆಗಳ ಪ್ರಕಾರ ಮಹಿಳೆಯರು ಮದ್ಯ ಸೇವಿಸದಿರುವುದೇ ಸೂಕ್ತ. ಪೋಷಣೆಯ ರೀತಿ, ವಂಶವಾಹಿ ಅಂಶಗಳಿಗಿಂತ ಮದ್ಯದ ದುಷ್ಪರಿಣಾಮಗಳು ಭ್ರೂಣ ಬೆಳೆದಂತೆಲ್ಲಾ ಕೆಟ್ಟ ನಡತೆಗಳನ್ನು ಪಡೆದುಕೊಳ್ಳುತ್ತದೆ ಎನ್ನುತ್ತಾರೆ ಇಂಡಿಯಾನಾ ವಿವಿಯ ಸಂಶೋಧಕ ಪ್ರೊ. ಬ್ರೈನ್ ಜಿಒನೋಫ್ರಿಯೋ.

ತಾಯಂದಿರ ಬೌದ್ಧಿಕ ಅಥವಾ ಶೈಕ್ಷಣಿಕ ಮಟ್ಟ ಏನೇ ಆಗಿರಲಿ ಅಂಕಿ-ಅಂಶಗಳ ಪ್ರಕಾರ ಗರ್ಭಿಣಿ ಮಹಿಳೆಯರು ಮದ್ಯಪಾನ ಮಾಡುವುದರಿಂದ ಹುಟ್ಟಲಿರುವ ಮಕ್ಕಳು ಒದೆಯುವುದು, ಜಗಳ ಮಾಡುವುದು, ಬೆದರಿಸುವುದು, ಅಗೌರ ತೋರುವ ಮುಂತಾದ ಕೆಟ್ಟ ವರ್ತನೆಗಳನ್ನು ತೊರುತ್ತವೆ ಎಂದು ವರದಿ ತಿಳಿಸಿದೆ.

ಮದ್ಯಪಾನ ಹೆಚ್ಚಾಗಿ ಮಾಡುವ ಮಹಿಳೆಯರಲ್ಲಿ ಹುಟ್ಟುವ ಮಕ್ಕಳು ಹೆಚ್ಚು ಕೆಟ್ಟ ನಡತೆಗಳನ್ನು ಹೊಂದಿರುತ್ತಾರೆ. ಆದರೆ ಮದ್ಯ ಸೇವಿಸದ ಸ್ತ್ರೀಯರ ಮಕ್ಕಳು ಸಾಮಾನ್ಯ ನಡತೆ ತೋರುತ್ತವೆ ಎಂದು ಸಂಶೋಧನೆ ತಿಳಿಸಿದೆ. ಹಲವಾರು ಮದ್ಯಪಾನ ಮಾಡುವ ಗರ್ಭಿಣಿ ಮಹಿಳೆಯರ ಮೇಲೆ ಪ್ರಯೋಗ ಮಾಡಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದುಬಂದಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X