ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ಅಧಿಕಾರಿಗಳಿಗೆ ರಾಜ್ಯೋತ್ಸವ ಶುಭಾಶಯ

By Staff
|
Google Oneindia Kannada News

News appeared on The Hindu on 31 Aug, 2006 :

Lok Ayukta N. Santosh Hegde has invited public opinion in fighting corruption in the State and called for an awakening among the people to voice their views against corrupt officials. He was speaking after inaugurating the five-year LLB course in Sri Jagadguru Renukacharya College of Law Bangalore.

Mr. Hegde said, "Corruption can be eradicated either by taking preventive or corrective measures. While the preventive measures involve the pressure of public opinion and transparent dealings of officials, the latter can be achieved only after finding solid evidence against a person."

ಬೆಂಗಳೂರು, ನ, 4 : ಕೆಲವು ತಿಂಗಳಿನಿಂದ ಲೋಕಯುಕ್ತ ದಾಳಿ ಸಪ್ಪಗಾಗಿತ್ತು, ತಣ್ಣಗಾಗಿತ್ತು. ನವೆಂಬರ್ ತಿಂಗಳ ಮೊದಲ ವಾರದಲ್ಲಿ ಏಕಾಏಕಿ ದಾಳಿ ಮಾಡಲು ಲೋಕಾಯುಕ್ತ ಅಧಿಕಾರಿಗಳು ಮುಂದಾಗಿದ್ದಾರೆ. ತಾಯಿ ಭುವನೇಶ್ವರಿಯ ಪ್ರೇರಣೆ ಇರಬೇಕು. ಈ ಅಧಿಕಾರಿಗಳು ರಜಾ ತೆಗೆದುಕೊಳ್ಳದೆ ತಮ್ಮ ಕೆಲಸ ಕಾರ್ಯಗಳನ್ನು ಹೀಗೆಯೇ ಮುಂದುವರೆಸಲಿ ಎಂದು ದಟ್ಸ್ ಕನ್ನಡ ಹಾರೈಸುತ್ತದೆ. ಅಂದಹಾಗೆ, ರಾಜ್ಯಪಾಲರ ಆಡಳಿತ ಅವಧಿಯಲ್ಲಿ ದಾಳಿಗಳಿಗೆ ಏಕಕಾಲಕ್ಕೆ ಚಾಲನೆ ದೊರೆತಿರುವುದು ಕುತೂಹಲಕರ. ಕಣ್ಣೀರು ಹಾಕಿಕೊಂಡು ಲಂಚ ಕೊಟ್ಟ ಕರ್ನಾಟಕ ಪ್ರಜೆಗಳಿಗೆ ದಾಳಿ ಸುದ್ದಿ ಏನೋ ಒಂಥರಾ ನೆಮ್ಮದಿ ಕೊಟ್ಟಿದೆ.

ಈ ಬಾರಿ ದಾಳಿ ನಡೆದಿರುವ ಸ್ಥಳಗಳ ಪಟ್ಟಿ ಇಂತಿದೆ:

ಯಥಾಪ್ರಕಾರ ಬೆಂಗಳೂರು, ಬಳ್ಳಾರಿ, ಬೀದರ್, ತುಮಕೂರು,ಚಿತ್ರದುರ್ಗ ಮತ್ತು ಮೈಸೂರು. ಅಪಾರ ಪ್ರಮಾಣದಲ್ಲಿ ಆಸ್ತಿ,ಪಾಸ್ತಿ, ಒಡವೆ, ವಸ್ತ್ರ, ಭೂಮಿ, ಬಂಗ್ಲೆ, ದಾಖಲೆ ಪತ್ರಗಳು ಸಿಕ್ಕಿಬಿದ್ದಿವೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ. ಅಧಿಕಾರ, ದರ್ಪ, ಧನದಾಹದಿಂದ ಕರ್ನಾಟಕದ ಸರಕಾರಿ ನೌಕರರು, ಮುಖ್ಯವಾಗಿ ಪೊಲೀಸರು ಗಳಿಸಿದ ಅಳತೆಗೆ ಮೀರಿದ ಅಸಹ್ಯ ಹುಟ್ಟಿಸುವಷ್ಟು ಆಸ್ತಿ ವಿವರಗಳನ್ನು ನಾವು ಇಲ್ಲಿ ಪ್ರಕಟಿಸುತ್ತಿಲ್ಲ.ದಾಳಿಗೆ ತುತ್ತಾದವರ ಹೆಸರುಗಳನ್ನು ಮಾತ್ರ ಪ್ರಕಟಿಸಲಾಗಿದೆ. ಬೈದವೆ, ಲೋಕಾಯುಕ್ತ ಸಂತೋಷ್ ಹೆಗಡೆ ಮತ್ತು ಉಪ ಲೋಕಾಯುಕ್ತ ಪತ್ರಿ ಬಸವನಗೌಡ ಹಾಗೂ ಅವರ ಸಿಬ್ಬಂದಿ ವರ್ಗಕ್ಕೆ ಕನ್ನಡ, ಕರ್ನಾಟಕ ರಾಜ್ಯೋತ್ಸವ ಶುಭಾಶಯಗಳು.

ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿಗಳ ಹೆಸರುಗಳು:

ಶ್ರೀನಿವಾಸ ಅಯ್ಯರ್ ( ಎಸ್ಪಿ- ಪೊಲೀಸ್ ತರಬೇತಿ ಶಾಲೆ ಯಲಹಂಕ), ಜಿ.ಟಿ. ಅಜ್ಜಪ್ಪ ( ಎಸಿಪಿ, ಕಬ್ಬನ್ ಪಾರ್ಕ್ ಉಪವಿಭಾಗ), ವಿಶ್ವನಾಥ್ ಸಿಂಗ್ ( ಎಸಿಪಿ, ವಿಧಾನಸೌಧ ಭದ್ರತಾ ವಿಭಾಗ), ಪುರುಷೋತ್ತಮ್ ( ಡಿವೈಎಸ್ಪಿ, ಸಿಒಡಿ), ಎಚ್. ಸಿದ್ದಪ್ಪ ( ಇನ್ಸ್ಪೆಕ್ಟರ್, ರಾಮಮೂರ್ತಿನಗರ), ಎಸ್.ಬಿ. ಮಲ್ಲಿಕಾರ್ಜುನ್ ( ಸಂಚಾರಿ ಇನ್ಸ್ಪೆಕ್ಟರ್, ಉಪ್ಪಾರಪೇಟೆ),ಮರಿಸ್ವಾಮಿಗೌಡ ( ಇನ್ಸ್ಪೆಕ್ಟರ್, ಬೆಂಗಳೂರು ಸಿಟಿ ಸ್ಪೆಷಲ್ ಬ್ರಾಂಚ್).

ಸಿಕ್ಕಿಬಿದ್ದ ಆರ್ಟಿಒ ಸಿಬ್ಬಂದಿ :

ಬಾಲಚಂದ್ರ ( ಮೋಟಾರು ವಾಹನ ಪರಿವೀಕ್ಷಕರು, ಯಶವಂತಪುರ) ಈಶ್ವರ್ ನಾಯಕ್ (ಮೋಟಾರು ವಾಹನ ಪರಿವೀಕ್ಷಕರು ರಾಜಾಜಿನಗರ ), ಎಂ. ಲಕ್ಷ್ಮಣ್ (ಮೋಟಾರು ವಾಹನ ಪರಿವೀಕ್ಷಕರು, ದೇವನಹಳ್ಳಿ), ಸಿದ್ದೇಶ್ವರ (ಮೋಟಾರು ವಾಹನ ಪರಿವೀಕ್ಷಕರು, ಬಳ್ಳಾರಿ), ಶಂಕರಪ್ಪ ( ಮೋಟಾರು ವಾಹನ ಪರಿವೀಕ್ಷಕರು, ಬಳ್ಳಾರಿ), ಲಕ್ಷಣ್ ರಾವ್, ( ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್,ಬೀದರ್, ಕಾರಂಜಾ ಪ್ರಾಜಕ್ಟ್)

For more, contact :

Lokayukta
124, I Floor MS Building
Bangalore - 560 001
Phone: +91-80-2264334
Fax: +91-80-2252052
Email: [email protected]

( ದಟ್ಸ್ ಕನ್ನಡ ಸುದ್ದಿಮನೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X