ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರಾಧಿಗಳ ಪತ್ತೆಗೆ ಟೊಂಕಕಟ್ಟಿ ನಿಂತ ಡಿಎನ್‌ಎ ಕೇಂದ್ರ

By Staff
|
Google Oneindia Kannada News

ಬೆಂಗಳೂರು, ನ.04: ಅಪರಾಧ ಪ್ರಕರಣಗಳೂ ಸೇರಿದಂತೆ ಮಗುವಿನ ಪಿತೃತ್ವವನ್ನು ಭೇದಿಸುವ ಡಿಎನ್‌ಎ ಕೇಂದ್ರ ಬೆಂಗಳೂರಿನಲ್ಲಿ ಆರಂಭವಾಗಿದೆ. ಕಟ್ಟಡ ನಿರ್ಮಾಣ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸುಮಾರು ನಾಲ್ಕು ಕೋಟಿ ರೂ ವೆಚ್ಚ ಮಾಡಲಾಗಿದೆ.

ನಂಬಿದರೆ ನಂಬಿ ಬಿಟ್ರೆ ಬಿಡಿ! ಶೇ.80ರಷ್ಟು ಖಾಸಗಿ ಪ್ರಕರಣಗಳು ಹೈದರಾಬಾದ್‌ನ ಡಿಎನ್‌ಎ ಪ್ರಯೋಗಾಲಯಕ್ಕೆ ಹೋಗುತ್ತವೆ. ಇಲ್ಲಿ ಬರುವ ಬಹಳಷ್ಟು ಪ್ರಕರಣಗಳು ಮಗುವಿನ ತಂದೆ ಯಾರು ಎಂದು ಪತ್ತೆಹಚ್ಚವಂತಹವೇ ಆಗಿರುತ್ತವೆ. ಜನಕನ ಕಂಡುಹಿಡಿಯಲು ಹೋಗಿ ಮತ್ತಿನ್ಯಾರನ್ನೋ ತಂದೆ ಎಂದು ತಪ್ಪಾಗಿ ನಿರ್ಧರಿಸಿದ ಪ್ರಕರಣಗಳೂ ಉಂಟು.

ಇದುವರೆಗೂ ಬೆಂಗಳೂರಿನಲ್ಲಿ ಡಿಎನ್‌ಎ ಪ್ರಯೋಗಾಲಯ ಇರಲಿಲ್ಲ. ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಆವರಣದಲ್ಲೇ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ನಾಲ್ವರು ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರದಲ್ಲಿ ವರ್ಷಕ್ಕೆ 300 ಪ್ರಕರಣಗಳನ್ನು ಪತ್ತೆಹಚ್ಚುವ ಸಾಮರ್ಥ್ಯವಿದೆ.

ದೇಶದ 15 ರಾಜ್ಯಗಳಲ್ಲಿ ಡಿಎನ್‌‍ಎ ಪರೀಕ್ಷಾ ಕೇಂದ್ರಗಳಿವೆ. ಡಿ-ಪ್ಯಾಕ್ ವರದಿಯ ಪ್ರಕಾರ ಎಲ್ಲಾ ರಾಜ್ಯಗಳಲ್ಲಿ ಡಿಎನ್‌ಎ ಕೇಂದ್ರ ತೆರೆಯಲು ಸುಮಾರು 390 ಕೋಟಿ ರೂಗಳ ಅಗತ್ಯವಿದೆ. 46 ಕೋಟಿ ರೂ ವೇತನಕ್ಕಾಗಿಯೇ ಬೇಕಾಗುತ್ತದೆ ಎಂದು ವರದಿ ತಿಳಿಸುತ್ತದೆ. ದೆಹಲಿ ಹಾಗೂ ಮುಂಬೈನಂತಹ ಮಹಾನಗರಗಳಲ್ಲಿ ಪಿತೃತ್ವಕ್ಕೆ ಸಂಬಂಧಿಸಿದ ಪ್ರಕರಣಗಳು ಅಧಿಕವಾಗುತ್ತಿವೆ ಎಂದು ಮತ್ತೊಂದು ವರದಿ ತಿಳಿಸುತ್ತದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X