ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆ ಪೊಲೀಸರಿಂದ ಬೆಂಗಳೂರಿನ ತಂತ್ರಜ್ಞನಿಗೆ ಅನ್ಯಾಯ

By Staff
|
Google Oneindia Kannada News

HCL employee Lakshman Kಮುಂಬಯಿ, ನ. 03 : ಆರ್ಕುಟ್ ವೆಬ್ ಪೇಜ್ ನಲ್ಲಿ ಛತ್ರಪತಿ ಶಿವಾಜಿಗೆ ಅವಹೇಳನ ಮಾಡಿದ ಕಾರಣಕ್ಕೆ ಬಂಧನದಲ್ಲಿದ್ದ ಬೆಂಗಳೂರಿನ ಸಾಫ್ಟ್ ವೇರ್ ಇಂಜಿನೀಯರ್ ಲಕ್ಷ್ಮಣ ಅವರನ್ನು ಬಿಡುಗಡೆ ಮಾಡಲಾಗಿದೆ .

ತನ್ನದಲ್ಲದ ತಪ್ಪಿಗೆ 26ವರ್ಷದ ಹೆಚ್ ಸಿಎಲ್ ಕಂಪನಿಯ ಉದ್ಯೋಗಿ ಲಕ್ಷ್ಮಣ್, ಪುಣೆ ಜೈಲಿನಲ್ಲಿ 50ದಿನಗಳನ್ನು ಕಳೆದಿದ್ದಾರೆ. ಆದರೆ ಈ ಬಗ್ಗೆ ಪೊಲೀಸರಿಗೆ ಒಂದಿಷ್ಟು ಅನುಕಂಪವಿಲ್ಲ. ನಮಗೆ ಸಿಕ್ಕ ಐಪಿ ವಿಳಾಸ ತಪ್ಪಾಗಿತ್ತು. ಮಾಹಿತಿ ದೋಷಕ್ಕೆ ನಾವೇನು ಹೊಣೆಯಲ್ಲ ಎಂದು ಹೇಳಿದ್ದಾರೆ.

ಮಾಹಿತಿ ತಂತ್ರಜ್ಞಾನ ಕಾಯಿದೆ (2000) ಅಡಿಯಲ್ಲಿ ಅಗಸ್ಟ್ 31ರಂದು ಲಕ್ಷ್ಮಣ್ ಅವರನ್ನು ಬೆಂಗಳೂರಿನ ನಿವಾಸದಿಂದ ಪುಣೆ ಪೊಲೀಸರು ಕರೆದೊಯ್ದಿದ್ದರು. ಪುಣೆಯಲ್ಲಿ ನಡೆದ ಗಲಭೆಗೆ ಈತ ಕಾರಣ ಎಂದು ಪೊಲೀಸರು ಹೇಳಿದ್ದರು . ಅಸಲಿ ಅಪರಾಧಿಗಳನ್ನು ಹಿಡಿಯುವಲ್ಲಿ 4ವಾರಗಳು ಕಳೆದ ಪುಣೆ ಪೊಲೀಸರು, ಕೊನೆಗೆ ಲಕ್ಷ್ಮಣ್ ಅವರನ್ನು ಬಿಡುಗಡೆ ಮಾಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:

ಬೆಂಗಳೂರಿನ ಮೂವರು ಸಾಫ್ಟವೇರ್ ಇಂಜಿನಿಯರ್ ಬಂಧನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X