ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡರ ಮನೆಗೆ ಎಂ.ಪಿ.ಪ್ರಕಾಶ್ : ಫಲಿಸದ ಸಂಧಾನ

By Staff
|
Google Oneindia Kannada News

ಬೆಂಗಳೂರು, ನ.01 : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ಬಂಡಾಯ ಶಿಲ್ಪಿ ಎಂ.ಪಿ.ಪ್ರಕಾಶ್ ಗುರುವಾರ(ನ.01)ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ ಪ್ರಕಾಶ್ ತಮ್ಮ ಪಟ್ಟು ಸಡಿಲಿಸಿಲ್ಲ. ಆದರೂ ಸಿಡಿದಿಲ್ಲ.

ಹಿಂದಿನಂತೆ ಮುಂದೆಯೂ ಪಕ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಜೊತೆಗೆ ಹೊಸ ಸರ್ಕಾರದಲ್ಲಿ ಭಾಗಿಯಾಗಬೇಕು ಎಂದು ದೇವೇಗೌಡರು ಒತ್ತಾಯಿಸಿದರು. ನಾನು ಯಾವುದೇ ಕಾರಣಕ್ಕೂ ಸರ್ಕಾರದಲ್ಲಿ ಪಾಲ್ಗೊಳ್ಳುವುದಿಲ್ಲ.. ಅಗತ್ಯಬಿದ್ದರೇ ಮಾರ್ಗದರ್ಶನ ನೀಡುತ್ತೇನೆ. ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ದೇವೇಗೌಡ ನಮ್ಮ ನಾಯಕ ಎಂದು ಎಂದು ಎಂ.ಪಿ.ಪ್ರಕಾಶ್ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ. ಎಲ್ಲಾ ತಪ್ಪುಗಳನ್ನು ಪ್ರಕಾಶ್ ಮೇಲೆ ಹಾಕುವುದಿಲ್ಲ. ಅವರನ್ನು ಪಕ್ಷ ಎಂದೂ ಕಳೆದುಕೊಳ್ಳುವುದಿಲ್ಲ ಎಂದು ದೇವೇಗೌಡರು ಸುದ್ದಿಗಾರರ ಬಳಿ ಹೇಳಿದ್ದಾರೆ.

ಮುಂದುವರೆದ ಕುತೂಹಲ : ಕೇಂದ್ರ ರಾಜಕೀಯ ವ್ಯವಹಾರಗಳ ಸಮಿತಿ ಸಭೆ ಗುರುವಾರ(ನ.01) ನಡೆಯಿತು. ನಿರೀಕ್ಷೆಯಂತೆ ಕರ್ನಾಟಕದ ರಾಜಕಾರಣ ಅಲ್ಲಿ ಚರ್ಚೆಯಾಗಲಿಲ್ಲ. ಆದರೆ ಬಿ.ಎಸ್.ಯಡ್ಡಿಯೂರಪ್ಪ ನೂತನ ಸರ್ಕಾರ ರಚನೆ ಬಗ್ಗೆ ಇಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ಎರಡು ದಿನದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

***

ಒನ್ ಲೈನ್ ಸುದ್ದಿಗಳು :

  • ರಾಜ್ಯಪಾಲರಿಂದ ಇಂಗ್ಲಿಷ್ ಭಾಷಣ.
  • ನಮ್ಮ ಷರತ್ತುಗಳನ್ನು ಬಿಜೆಪಿ ಪಾಲಿಸದಿದ್ದರೇ, ಸರ್ಕಾರಕ್ಕೆ ಅಪಾಯವಾಗಲಿದೆ : ಹೆಚ್.ಡಿ.ದೇವೇಗೌಡ
  • ರಾಜ್ಯದ ಬಿಜೆಪಿ ಶಾಸಕರು ಮತ್ತು ಸಂಸದರು ಇಂದು 'ಚಕ್ ದೇ ಇಂಡಿಯ' ಚಲನಚಿತ್ರವನ್ನು ವೀಕ್ಷಿಸಿದರು.
  • ರಾಜ್ಯೋತ್ಸವದ ವೇಳೆ ವಿಜಾಪುರದಲ್ಲಿ ತುಂತುರು ಮಳೆ.
  • ಪಾರ್ವತಮ್ಮ ರಾಜ್ ಕುಮಾರ್ ಅವರು ಇಂದು ರಾಜ್ ಸಮಾಧಿಗೆ ಭೇಟಿ ನೀಡಿ, ಅಲ್ಲಿ ಧ್ವಜಾರೋಹಣ ಸೇರಿದಂತೆ ರಾಜ್ಯೋತ್ಸವದ ಸಮಾರಂಭದಲ್ಲಿ ಪಾಲ್ಗೊಂಡರು.

(ದಟ್ಸ್ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X