• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇವೇಗೌಡರ 12ಷರತ್ತುಗಳ ನೋಡಿದ ಮೇಲೆ ಅನಿಸಿದ್ದು..

By Staff
|

ಬೆಂಗಳೂರು, ನ.01 : 'ಅಭದ್ರರು ಸುಭದ್ರ ಸರ್ಕಾರ ನೀಡಲು ಹೇಗೆ ಸಾಧ್ಯ?'ಯು.ಆರ್.ಅನಂತಮೂರ್ತಿ ಅವರ ಈ ಪ್ರಶ್ನೆಗೆ ಮಹತ್ವ ಬಂದಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದರೂ, ಅದರ ಆಯಸ್ಸೆಷ್ಟು ಎಂಬ ಪ್ರಶ್ನೆ ಜನರ ಮನದಲ್ಲಿದೆ. ಈ ಪ್ರಶ್ನೆಗಳ ಬಲಪಡಿಸುವಂತೆ ಬಿಜೆಪಿಗೆ ದೇವೇಗೌಡರು 12ಷರತ್ತು ವಿಧಿಸಿದ್ದಾರೆ.

ತಮ್ಮ ಷರತ್ತುಗಳನ್ನು ನವದೆಹಲಿಯಲ್ಲಿನ ಬಿಜೆಪಿ ಪ್ರಧಾನ ಕಚೇರಿಗೆ ದೇವೇಗೌಡರು ಕಳುಹಿಸಿದ್ದಾರೆ. 'ಅನಿವಾರ್ಯ ಸ್ಥಿತಿಯಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದೇವೆಯೇ ಹೊರತು, ಪ್ರೀತಿಯಿಂದ ನೀಡಿಲ್ಲ..'ಎಂಬರ್ಥದಲ್ಲಿ ದೇವೇಗೌಡರು ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ ಗೌಡರು ನಮಗೆ ಯಾವುದೇ ಷರತ್ತು ವಿಧಿಸಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ದೇವೇಗೌಡರ ಪತ್ರದಲ್ಲಿರುವ ಮುಖ್ಯ ಷರತ್ತುಗಳು ಹೀಗಿವೆ :

*ಒಂದು ವೇಳೆ ಮಧ್ಯಂತರ ಚುನಾವಣೆಗಾಗಿ ಲೋಕಸಭೆ ವಿಸರ್ಜನೆಯಾದರೆ, ಕರ್ನಾಟಕದಲ್ಲಿ ವಿಧಾನಸಭೆ ವಿಸರ್ಜಿಸಬೇಕು. ಇಲ್ಲೂ ಮಧ್ಯಂತರ ಚುನಾವಣೆಗೆ ಆಸ್ಪದ ನೀಡಬೇಕು.

*ನೈಸ್ ಕಂಪನಿಯನ್ನು ಬೆಂಗಳೂರು ಮೈಸೂರು ಕಾರಿಡಾರ್ ಯೋಜನೆಯಿಂದ ದೂರವಿಡಬೇಕು.

*ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಶ್ರೀರಾಮುಲು ಸಲ್ಲಿಸಿರುವ ಪೊಲೀಸ್ ದೂರನ್ನು ವಾಪಸ್ ಪಡೆಯಬೇಕು. ವಿಧಾನ ಪರಿಷತ್ತು ಸದಸ್ಯ ಜನಾರ್ದನ ರೆಡ್ಡಿಗೆ ಕಡಿವಾಣ ಹಾಕಬೇಕು.

*ಜಾತ್ಯತೀತ ನಿಲುವಿಗೆ ಬದ್ಧತೆ ತೋರಿಸಬೇಕು. ಅಲ್ಪಸಂಖ್ಯಾತರಲ್ಲಿ ವಿಶ್ವಾಸ ಮೂಡುವಂತೆ ನಡೆದುಕೊಳ್ಳಬೇಕು.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more