• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶನಿವಾರ ಗಣಪತಿಭಟ್ ಹಾಸಣಗಿ ಅವರ ಸಂಗೀತ ಚಿಕಿತ್ಸೆ

By Staff
|

ಸಂಗೀತ ಗಾರುಡಿಗ ಗಣಪತಿ ಭಟ್ ಹಾಸಣಗಿಬೆಂಗಳೂರು, ಅ. 26: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ಗಾರುಡಿಗ ಪಂಡಿತ್ ಗಣಪತಿ ಭಟ್ ಹಾಸಣಗಿ ಬೆಂಗಳೂರಿಗೆ ಬಂದಿದ್ದಾರೆ. ಶನಿವಾರ(ಅ.27) ಸಂಜೆ ಅವರ ಸಂಗೀತ ಕಚೇರಿ ಇದೆ. ಪ್ರವೇಶ ಉಚಿತ.

ಜೆ.ಪಿ.ನಗರ ಏಳನೇ ಹಂತದ ಬ್ರಿಗೇಡ್ ಮಿಲೇನಿಯಮ್ ವಸತಿ ಸಂಕೀರ್ಣದಲ್ಲಿರುವ ಎಂ.ಎಲ್.ಆರ್. ಕನ್ವೆನ್ಷನ್ ಸೆಂಟರ್ ನಲ್ಲಿ ಸಂಗೀತ ಕಚೇರಿ, ಸಂಜೆ 7 ಗಂಟೆಗೆ ಆರಂಭವಾಗಲಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ : +91 - 93416 99099.

ಸಂಗೀತ ಕಾರ್ಯಕ್ರಮಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಶಂಕರ ಬಿದರಿ ಮಖ್ಯ ಅತಿಥಿಯಾಗಿ ಆಗಮಿಸುತ್ತಿದ್ದು, ಗಣಪತಿ ಭಟ್ ಅವರನ್ನು ಸನ್ಮಾನಿಸುತ್ತಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಹರಿಕಾರರು ನಮ್ಮ ರಾಜ್ಯದಲ್ಲಿ ಅನೇಕರಿದ್ದಾರೆ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ಲ, ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು ಮುಂತಾದವರು ಮೇರು ಸದೃಶ ಗಾಯಕರು. ಇತ್ತೀಚಿನ ಪೀಳಿಗೆಯ ಪ್ರಸಿದ್ಧಿಪಡೆದ ಗಾಯಕರ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆ ಹಾಸಣಗಿ ಗ್ರಾಮದ ಗಣಪತಿ ಭಟ್ ಎದ್ದು ಕಾಣುತ್ತಾರೆ.

ಗಣಪತಿ ಅವರು ಪಂಡಿತ್ ಬಸವರಾಜ ರಾಜಗುರು ಮತ್ತು ಪಂಡಿತ್ ಸಿ. ಆರ್. ವ್ಯಾಸ್ ಅವರ ಶಿಷ್ಯರು.ಗಣಪತಿ ಭಟ್ ತುಂಬಾ ಚೆನ್ನಾಗಿ ಹಾಡುತ್ತಾರೆ. ಕರ್ಣಾನಂದಕರ ಸಂಗೀತ ಕಾಣದ ನೋವುಗಳಿಗೆ ಮಧುರವಾದ ಚಿಕಿತ್ಸೆ. ಕೇಳುವ ಭಾಗ್ಯ ನಿಮ್ಮದು.

(ದಟ್ಸ್ ಕನ್ನಡ ಸಭೆ-ಸಮಾರಂಭ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more