ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಮ್ಯಾಕ್ಸ್ ಸೇವೆಗೆ ಸಜ್ಜಾದ ದೇಶದ ಪ್ರಥಮ ನಗರ ನಮ್ಮದು!

By Staff
|
Google Oneindia Kannada News

ಬೆಂಗಳೂರು, ಅ.26 : ಈ ವರ್ಷಾಂತ್ಯಕ್ಕೆ ಬೆಂಗಳೂರು ನಗರ ವೈಮ್ಯಾಕ್ಸ್(WiMax)ಸೇವೆಗೆ ಬಾಗಿಲು ತೆರೆದುಕೊಳ್ಳಲಿದೆ. ನಿಸ್ತಂತು ಬ್ರಾಡ್‌ಬ್ಯಾಂಡ್ ಸೇವೆ ನಗರದ 743 ಚ.ಕಿ.ಮೀವರೆಗೂ ವಿಸ್ತರಿಸಲಿದೆ. ಅಂದುಕೊಂಡಂತೆ ಯೋಜನೆ ಪೂರ್ಣವಾದರೆ ವೈಮ್ಯಾಕ್ಸ್ ಸೇವೆ ಪಡೆದ ದೇಶದ ಮೊದಲ ನಗರವಾಗಲಿದೆ ಬೆಂಗಳೂರು.

450ಕೋಟಿಯ ಈ ಯೋಜನೆಗೆ ಆರು ಪ್ರಸಿದ್ಧ ವೈಮ್ಯಾಕ್ಸ್ ಕಂಪನಿಗಳು ಮುಂದೆಬಂದಿವೆ. ಕಳೆದ ವರ್ಷವೇ ಈ ಯೋಜನೆ ಪೂರ್ಣವಾಗಬೇಕಿತ್ತು. ನಗರ ಸರಹದ್ದು ವಿಸ್ತರಿಸಿದ್ದರಿಂದ ಯೋಜನೆ ಮುಂದೂಡಲ್ಪಟ್ಟಿತು ಎಂದು ರಾಜ್ಯದ ಐಟಿ ಮತ್ತು ಬಿಟಿ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬೇಡಿಕೆಗೆ ತಕ್ಕಂತೆ ದರ ನಿಗದಿಪಡಿಸಲಾಗುವುದು. ಮುಂಬರುವ ದಿನಗಳಲ್ಲಿ ಮೊಬೈಲ್ ದರಗಳಂತೆ ಇವೂ ಅಗ್ಗವಾಗಲಿವೆ. ವೈಮ್ಯಾಕ್ಸ್ ಪ್ರಾಯೋಗಿಕ ಯೋಜನೆ ಕಸ್ತೂರಬಾ ರಸ್ತೆಯಿಂದ ಟ್ರಿನಿಟಿ ವೃತ್ತದವರೆಗೆ ಕಾರ್ಯನಿರ್ವಹಿಸಲಿದೆ. ಯೋಜನೆ ಯುವಜನತೆಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸಿ ಅವರನ್ನು ಐಟಿ ಜ್ಞಾನಕ್ಕೆ ಅಣಿಮಾಡಲಿದೆ. ಕಂಪ್ಯೂಟರ್ ಕೌಶಲ್ಯ ವೃದ್ಧಿ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್ ಜ್ಞಾನವನ್ನು ಹೆಚ್ಚಿಸಲಾಗುವುದು. ಇದಕ್ಕಾಗಿ ಸರಕಾರ ಖಾಸಗಿ ಸಂಸ್ಥೆಯೊಂದಿಗೆ ಕೈಜೋಡಿಸಲಿದೆ. ಮೊದಲ ಹಂತದಲ್ಲಿ ಮೈಸೂರು, ಮಂಗಳೂರು, ಹುಬ್ಬಳ್ಳಿ, ಗುಲ್ಬರ್ಗ ಮತ್ತು ಬೆಳಗಾಂ ಜಿಲ್ಲೆಗಳ ಗ್ರಾಮೀಣ ಮತ್ತು ಗ್ರಾಮೀಣೇತರ ಅಭ್ಯರ್ಥಿಗಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ನಂತರ ರಾಜ್ಯದೆಲ್ಲೆಡೆ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

ಐಟಿ ಮತ್ತು ಹೊರಗುತ್ತಿಗೆ ಉದ್ಯಮಗಳಿಗೆ ವೈಮ್ಯಾಕ್ಸ್ ವರವಾಗಲಿದೆ ಹಾಗೆಯೇ ಉಳಿದ ನಗರಗಳಿಗೂ ವೈಮ್ಯಾಕ್ಸ್ ಸೇವೆಯನ್ನು ಹಂತಹಂತವಾಗಿ ವಿಸ್ತರಿಸಲಾಗುತ್ತದೆ ಎಂದು ತಿಳಿದು ಬಂದಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X