• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕಾ ನೆರವಿನಿಂದ ಅಪರೂಪದ ಗ್ರಂಥ ಸಂಪತ್ತಿಗೆ ರಕ್ಷಣೆ

By Staff
|

ಚೆನ್ನೈ, ಅ.24 : 'ಅಮೆರಿಕಾ ರಾಯಭಾರಿಗಳ ಸಾಂಸ್ಕೃತಿಕ ಸಂರಕ್ಷಣಾ ನಿಧಿ" ಯೋಜನೆಯಡಿಯಲ್ಲಿ ಬೆಂಗಳೂರಿನ ಯೂನಿಯನ್ ಥಿಯೋಲಾಜಿಕಲ್ ಕಾಲೇಜು ಕೈಗೆತ್ತಿಕೊಂಡಿದ್ದ ಅಪರೂಪದ ಗ್ರಂಥ ಸಂಪತ್ತಿನ ಸಂರಕ್ಷಣಾ ಕಾರ್ಯ ಇದೀಗ ಪೂರ್ಣಗೊಂಡಿದೆ.

ಪ್ರಾಚೀನವಾದ ತಾಳೆಯೋಲೆಗಳು, ಅಪರೂಪದ ಗ್ರಂಥಗಳು ಹಾಗೂ ಹಸ್ತಪ್ರತಿಗಳ ಸಂರಕ್ಷಣೆ ಹಾಗೂ ಗಣಕೀಕರಣಕ್ಕಾಗಿ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿಗೆ 35ಸಾವಿರ ಡಾಲರ್ ನೆರವನ್ನು 2006ರಲ್ಲಿ ನೀಡಲಾಗಿತ್ತು. ಈ ಯೋಜನೆ ಪೂರ್ಣಗೊಂಡಿರುವುದನ್ನು ಪ್ರಸ್ತುತಪಡಿಸಲು ಅಮೆರಿಕನ್ ಕಾನ್ಸುಲೇಟ್ ಜನರಲ್ ಬೆಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕಾರ್ಯಕ್ರಮದ ದಿನಾಂಕ : ಅಕ್ಟೋಬರ್ 29, 2007, ಸಮಯ : ಮಧ್ಯಾಹ್ನ 3.30, ಸ್ಥಳ : ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನ ಗ್ರಂಥಾಲಯ, 63, ಮಿಲ್ಲರ್ಸ್ ರಸ್ತೆ, ಬೆನ್ಸನ್ ಟೌನ್, ಬೆಂಗಳೂರು -560 046.

ಅಮೆರಿಕನ್ ಕಾನ್ಸುಲೇಟ್ ಜನರಲ್ಲಿನ ಸಾರ್ವಜನಿಕ ವ್ಯವಹಾರ ಅಧಿಕಾರಿ ಫ್ರೆಡರಿಕ್ ಜೆ. ಕಾಪ್ಲನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ನವದೆಹಲಿಯಲ್ಲಿರುವ ಅಮೆರಿಕನ್ ರಾಯಭಾರ ಕಚೇರಿಯ ಇನ್ಫರ್ಮೇಶನ್ ರಿಸೋರ್ಸ್ ಆಫೀಸರ್ ಸ್ಟೀವನ್ ಕೆರ್ಚೋಫ್ ಅವರು ಈ ಗ್ರಂಥಗಳ ಕ್ಯಾಟಲಾಗ್ ಗಳನ್ನು ಬಿಡುಗಡೆ ಮಾಡುವರು. ಕಾಲೇಜಿನ ಪ್ರಾಂಶುಪಾಲರಾದ ರೆವರೆಂಡ್ ಡಾ. ಓ.ವಿ.ಜತ್ತಣ್ಣ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.

ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನ ಬಗ್ಗೆ : ಧಾರ್ಮಿಕ ಶಿಕ್ಷಣದಲ್ಲಿ ಅತಿ ದೊಡ್ಡ ಹೆಸರು ಮಾಡಿರುವ 1910ರಲ್ಲಿ ಸ್ಥಾಪನೆಯಾದ ಬೆಂಗಳೂರಿನ ಯುನೈಟೆಡ್ ಥಿಯೋಲಾಜಿಕಲ್ ಕಾಲೇಜಿನಲ್ಲಿ ವಿಶ್ವದ ಎಲ್ಲೆಡೆಯ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಈ ಕಾಲೇಜಿನ ಸಂವಹನ, ಧರ್ಮ ಮತ್ತು ಸಂಸ್ಕೃತಿ, ಮಹಿಳಾ ಅಧ್ಯಯನ ವಿಭಾಗಗಳು ಹೆಸರುವಾಸಿ. ದಕ್ಷಿಣ ಏಷ್ಯಾದಲ್ಲಿಯೇ ಅತ್ಯುತ್ತಮ ಧಾರ್ಮಿಕ ಗ್ರಂಥಾಲಯಗಳನ್ನು ಹೊಂದಿರುವ ಈ ಕಾಲೇಜಿನಲ್ಲಿ ಸುಮಾರು 2,000ಕ್ಕೂ ಹೆಚ್ಚು ತಾಳೆ ಓಲೆ ಗ್ರಂಥಗಳಿವೆ.

ವಿವಿಧ ಭಾರತೀಯ ಭಾಷೆಗಳಲ್ಲಿರುವ ಸುಮಾರು 200 ವರ್ಷಕ್ಕೂ ಹೆಚ್ಚು ಹಿಂದಿನ ಈ ಗ್ರಂಥಗಳನ್ನು ತುರ್ತಾಗಿ ಸಂರಕ್ಷಿಸಬೇಕಾದ ಅಗತ್ಯವಿದೆ. ಇಲ್ಲಿರುವ ಹಸ್ತಪ್ರತಿಗಳು 18 ಹಾಗೂ 19ನೇ ಶತಮಾನದಲ್ಲಿನ ಭಾರತದ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಗೆ ಸಾಕ್ಷಿ. ಈ ಗ್ರಂಥ ಸಂಪದವು ಜಾನಪದ ಸಾಹಿತ್ಯ, ಜಾನಪದ ವೈದ್ಯ, ಶಾಸ್ತ್ರೀಯ ವೈದ್ಯಕೀಯ ಗ್ರಂಥಗಳು, ಪಶುವೈದ್ಯ, ಧಾರ್ಮಿಕ ಬರಹಗಳು, ಜೋತಿಷ್ಯ, ಖಗೋಳ ಶಾಸ್ತ್ರ, ಸಾಂಸ್ಕೃತಿಕ ಆಚರಣೆಗಳು, ಕೃಷಿ ವಿಜ್ಞಾನ ಹಾಗೂ ಅನೇಕ ಕರ ಕೌಶಲಗಳ ಕುರಿತದ್ದಾಗಿದೆ. ಒಟ್ಟಿನಲ್ಲಿ ಈ ಹಸ್ತಪ್ರತಿಗಳಲ್ಲಿ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಾಹಿತಿಯ ಭಂಡಾರವೇ ಅಡಗಿದೆ.

ಈ ತಾಳೆ ಓಲೆಗರಿಗಳ ಜೊತೆಗೆ, ಕಾಲೇಜು ಕೆಲ ಅಪರೂಪದ ಐತಿಹಾಸಿಕ ಲಿಖಿತ ದಾಖಲೆಗಳನ್ನೂ ಹೊಂದಿದೆ. ಆಗಿನ ಕ್ರಿಶ್ಚಿಯನ್ ನಾಯಕರುಗಳಿಗೆ ಮಹಾತ್ಮಾಗಾಂಧಿಜಿ ಅವರು ಬರೆದ ಪತ್ರಗಳು, ಭಾರತದಲ್ಲಿ ಮುದ್ರಿತವಾದ ಪ್ರಥಮ ತಮಿಳು ಬೈಬಲ್, 18ನೇ ಶತಮಾನದ ತಮಿಳು ಕ್ರೈಸ್ತ ಕವಿ, ಗಾಯಕ ತಂಜಾವೂರಿನ ವೇದನಾಯಗಂ ಶಾಸ್ತ್ರೀಯರ್ ಅವರ ಬರಹಗಳೂ ಸೇರಿದಂತೆ, ದಕ್ಷಿಣ ಭಾರತದಲ್ಲಿನ ಕ್ರೈಸ್ತ ಧರ್ಮದ ಇತಿಹಾಸದ ಬೆಳಕು ಚೆಲ್ಲುವ ಅನೇಕ ವಸ್ತುಗಳೂ ಈ ಕಾಲೇಜಿನ ಗ್ರಂಥಾಲಯದಲ್ಲಿವೆ. ಈ ಎಲ್ಲ ಮಹತ್ವದ ಮಾಹಿತಿಯನ್ನು ಸಂರಕ್ಷಿಸಿ, ಸಂಶೋಧಕರಿಗೆ ಒದಗಿಸುವುದೇ ಈ ಯೋಜನೆಯ ಉದ್ದೇಶ.

ರಾಯಭಾರಿಗಳ ಸಾಂಸ್ಕೃತಿಕ ಸಂರಕ್ಷಣಾ ನಿಧಿ : 'ರಾಯಭಾರಿಗಳ ಸಾಂಸ್ಕೃತಿಕ ಸಂರಕ್ಷಣಾ ನಿಧಿ"ಯ ಮೂಲಕ ಅಮೆರಿಕಾ ಸರ್ಕಾರದ ಸ್ಟೇಟ್ ಡಿಪಾರ್ಟ್ಮೆಂಟ್, (ವಿದೇಶಾಂಗ ವ್ಯವಹಾರ ಸಚಿವಾಲಯ) ವಿಶ್ವಾದ್ಯಂತ ಅರ್ಹ ರಾಷ್ಟ್ರಗಳ ಐತಿಹಾಸಿಕ ಸ್ಥಳಗಳ ಮತ್ತು ಹಸ್ತಪ್ರತಿಗಳ, ಮ್ಯೂಸಿಯಂನಲ್ಲಿರುವ ಸಂಗ್ರಹಗಳು, ಸಂಗೀತ, ನೃತ್ಯ, ಭಾಷೆಗಳಂಥ ಸಾಂಪ್ರದಾಯಿಕ ಅಭಿವ್ಯಕ್ತಿ ಮಾಧ್ಯಮಗಳ ರಕ್ಷಣೆಗೆ ನೆರವು ನೀಡುತ್ತದೆ. ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವ್ಯವಹಾರಗಳ ಬ್ಯೂರೋ ಈ ನಿಧಿಯನ್ನು ನಿರ್ವಹಿಸುತ್ತಿದೆ.

ಅಮೆರಿಕನ್ ಕಾಂಗ್ರೆಸ್ 2001ರಲ್ಲಿ ಸ್ಥಾಪಿಸಿದ ಈ ನಿಧಿಯಡಿ ಈವರೆಗೆ 67 ಲಕ್ಷ ಡಾಲರ್ ಮೊತ್ತದ ವಿಶ್ವಾದ್ಯಂತ 292 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more