• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರೀತಿಪಾತ್ರರಿಗೆ ಶುಭಾಶಯ ತಿಳಿಸಲೊಂದು ಅಂತರ್ಜಾಲ ತಾಣ

By Staff
|

ಬೆಂಗಳೂರು, ಅ.22 : ನಮ್ಮ ಪ್ರಿತಿಪಾತ್ರರಿಗೆ ಶುಭಾಶಯ ತಿಳಿಸಲು ನೂರೆಂಟು ದಾರಿಗಳಿವೆ. ಹುಟ್ಟುಹಬ್ಬದಿಂದ ಹಿಡಿದು ಬಳೆಶಾಸ್ತ್ರದ ತನಕ ಕೊಡೋದಕ್ಕೆ ಉಡುಗೊರೆಗಳೂ ಇವೆ. ಇವೆಲ್ಲವನ್ನೂ ವೆಬ್ ಮುಖಾಂತರ ತಿಳಿಸಲು ಹೊಸ ವೆಬ್ ತಾಣವೊಂದು ಭಾನುವಾರ (ಅ.21) ಪ್ರಾರಂಭವಾಯಿತು. ಅದೇ http://preethiyindha4u.com.

ಈ ವೆಬ್ ತಾಣದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಪ್ರೀತಿಯಿಂದ ಶುಭ ಹಾರೈಸಬಹುದು. ಈ ತಾಣದ ವಿಶೇಷವೆಂದರೆ ಶುಭಾಶಯಗಳನ್ನು ಕನ್ನಡದಲ್ಲಿ ಒಬ್ಬರಿಗೊಬ್ಬರು ರವಾನಿಸಿಕೊಳ್ಳಬಹುದು ಜೊತೆಗೆ ಇಂಗ್ಲೀಷು ಇದೆ ಅನ್ನಿ. ನಿಮ್ಮ ನಡುವಿನ ನೋವು-ನಲಿವು, ಕಷ್ಟ-ಸುಖ, ದುಃಖ-ದುಮ್ಮಾನ, ಪ್ರೀತಿ-ಪ್ರೇಮ, ಸಿಟ್ಟು-ಸಿಡುಕು...ಹೀಗೆ ತಮ್ಮ ಸಮಸ್ತ ಮನೋಭಾವಗಳನ್ನು offline ಮತ್ತು onlineನಲ್ಲಿ ವ್ಯಕ್ತಪಡಿಸಿಕೊಳ್ಳಬಹುದು.

'ಸಮುದ್ರ ತೀರದಲ್ಲಿ ಕುಳಿತು ಯಾರೋ ಒಬ್ಬಾತ ಯಾರನ್ನೋ ಕಲ್ಪಿಸಿಕೊಂಡು ಬರೆದ ಶುಭಾಶಯ ಪತ್ರ ನೀವು ನಿಮ್ಮವರಿಗೆ ಕೊಡ್ತೀರಿ! ಅದು ತುಂಬ ಬೆಲೆ ಬಾಳುವ ವಸ್ತುವೂ ಆಗಬಹುದು. ನೀವು ಪ್ರೀತಿಯಿಂದ ತಂದು ಕೊಡ್ತೀರಿ! ಅದು ಅವತ್ತಿಗೆ ಇಷ್ಟವಾದ್ರು ಮುಂದೊಂದುದಿನ ಅವರ ಶೋಕೇಸ್ ಸೇರುತ್ತೆ. ಧೂಳು ಹಿಡಿಯುತ್ತೆ. ಕೊನೆಗೊಂದು ದಿನ ಅಲ್ಲಿಂದ ಮಾಯವೂ ಆಗುತ್ತೆ! ಹೌದ? ಹಾಗಾಗಬಾರ್ದು ಕಣ್ರಿ!" ಎಂದು ಹೇಳುತ್ತದೆ ವೆಬ್‌ನ ಪರಿಚಯ ವಿಭಾಗ.

ಮುಂದುವರಿದು '...99020 00997ಗೆ ಫೋನ್ ಮಾಡಿ ನಮ್ಮಲ್ಲಿಗೆ ಬನ್ನಿ! ಒಂದು ಕಪ್ ಕಾಫಿ ಹೀರುತ್ತಾ ಮಾತಾಡೋಣ. ಎಷ್ಟು ಪುಟ್ಟ ಕಾಸಿನಲ್ಲಿ ಶುಭಾಶಯ ಪತ್ರ/ ಉಡುಗೊರೆ ಮಾಡಿಕೊಡಬೇಕೆಂದು ಹೇಳಿ ಬಿಡಿ. ಸ್ವಲ್ಪ ಕಾಲಾವಕಾಶ, ಒಂದು ಪುಟ್ಟ ಮುಂಗಡ Enough! ನಿಮ್ಮ ಆತ್ಮೀಯ ಹೃದಯ ತುಂಬಿ ಬರುವಂಥಾ ಗ್ರೀಟಿಂಗ್/ಗಿಫ್ಟ್ ರೆಡಿ ಏನಂತೀರಿ? ನಿಮಗೆ ನಮ್ಮ ಕೆಲಸ ಇಷ್ಟವಾದ್ರೆ ನಿಮ್ಮ ಇನ್ನೆರಡು ಗೆಳೆಯರನ್ನು ಪರಿಚಯಿಸಿ! ಇನ್ನೊಂದೆರಡು ಆರ್ಡರ್ ಕೊಡಿ! ನಮ್ಮ ನಡುವೆ ಥ್ಯಾಂಕ್ಸ್ ಮತ್ತು ಸಾರಿ ಬೇಡಾರಿ ಓಕೆ? ಹೀಗೆ ಪ್ರಶ್ನಿಸುತ್ತದೆ ಪ್ರೀತಿಯಿಂದ...ವೆಬ್ ತಾಣ. ಇದೊಂದು ನಿಜಕ್ಕೂ ಆತ್ಮೀಯ ಬಂಧ ಬೆಸೆಯುವ ತಾಣವೇ ಸರಿ.

ಈ ವೆಬ್ ತಾಣವನ್ನು ರವಿ ಬೆಳಗೆರೆ ಬಸವನಗುಡಿಯ ನ್ಯಾಶನಲ್ ಕಾಲೇಜಿನಲ್ಲಿ ಉದ್ಘಾಟಿಸಿದರು. ತಮ್ಮ ಮಡದಿಗೆ ಪ್ರೇಮ ಪತ್ರ ಬರೆದದ್ದು. ಗೆಳೆಯರಿಗೆ ಪ್ರೇಮ ಪತ್ರಗಳನ್ನು ಬರೆದುಕೊಡುತ್ತಿದ್ದುದು. ಒಮ್ಮೆ 40 ಪುಟಗಳ ಪ್ರೇಮಪತ್ರ ಬರೆದದ್ದನ್ನು ನೆನಸಿಕೊಂಡರು. ಪ್ರೇಮಪತ್ರಗಳ ಬರವಣಿಗೆ ತನ್ನಲ್ಲಿನ ಬರಹಗಾರನನ್ನು ಪೋಷಿಸಿದ್ದನ್ನು ಪ್ರೇಕ್ಷಕರ ಮುಂದೆ ಎಳೆ‌ಎಳೆಯಾಗಿ ಬಿಡಿಸಿಟ್ಟರು.

(ದಟ್ಸ್‌ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more