ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚುತ್ತಿರುವ ಜಾಗತಿಕ ತಾಪಮಾನಕ್ಕೆ ಮುಳುಗಲಿವೆ ನಗರಗಳು

By Staff
|
Google Oneindia Kannada News

ಸಿಡ್ನಿ, ಅ.22 : ವರ್ಲ್ಡ್ ವಾಚ್ ಸಂಸ್ಥೆಯ ಪ್ರಕಾರ ಮುಂಬೈ, ಕರಾಚಿ ಸೇರಿದಂತೆ ವಿಶ್ವದ 21 ನಗರಗಳು ಮುಳುಗಡೆಯಾಗಲಿವೆ. ಇದಕ್ಕೆಲ್ಲಾ ಏರುತ್ತಿರುವ ಜಾಗತಿಕ ತಾಪಮಾನವೇ ಕಾರಣ ಎಂದು ಸಂಸ್ಥೆ ತಿಳಿಸಿದೆ.

9 ರಿಂದ 20 ಸೆಂ.ಮೀ ಏರುತ್ತಿರುವ ಸಮುದ್ರದ ಮಟ್ಟ 2100ಕ್ಕೆ ಏಕಾಏಕಿ 88 ಸೆಂ.ಮೀಗಳಿಗೆ ಏರಲಿದೆ. ನ್ಯೂಯಾರ್ಕ್, ಲಾಸ್ ಏಂಜಲೀಸ್, ಟೊಕ್ಯೊ, ಬ್ಯಾಂಕಾಕ್, ಜಕಾರ್ತ, ಬ್ಯೂನೆಸ್ ಏರಿಸ್, ರಿಯೊಡಿ ಜನೈರೊ, ಶಾಂಘೈ ಮತ್ತು ಕೈರೊ ಮುಳುಗಡೆಯಾಗಲಿರುವ ಇತರ ನಗರಗಳೆಂದು ಸಂಸ್ಥೆಯ ಜಿಯೋ ಛಾಫ್ ತಿಳಿಸಿದ್ದಾರೆ.

ಯಾವಾಗಲೋ ಒಮ್ಮೆಮ್ಮೆ ಸಂಭವಿಸುತ್ತಿದ್ದ ನೈಸರ್ಗಿಕ ಅವಘಡಗಳು ಈಗ ಸಾಮಾನ್ಯವಾಗಿವೆ. ಊಹಿಸಲಾಗದ ಸಾವು, ನೋವಿಗೆ, ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತಿವೆ. ಮುಂಬರುವ ದುರಂತದ ಬಗ್ಗೆ ಈಗಾಗಲೇ ಪ್ರಕೃತಿ ಸುಳಿವು ನೀಡುತ್ತಿದೆ ಎಂದು ಆಕೆ ಎಚ್ಚರಿಸಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X