ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಮಾಮಾ ಠಾಣೆಯಲ್ಲೇ ಅತ್ಯಾಚಾರ ಮಾಡಿದನೇ?

By Staff
|
Google Oneindia Kannada News

ಬೆಂಗಳೂರು, ಅ.16 : ನಗರದ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ನಡೆದಿದೆ ಎನ್ನಲಾದ ವಿಚಾರ ತೀವ್ರ ತಳಮಳಕ್ಕೆ ಕಾರಣವಾಗಿದೆ. ಬೇಲಿಯೇ ಎದ್ದು ಹೊಲ ಮೇಯುವುದು ಅಂದರೆ ಇದೇ ಇರಬಹುದಾ?

ಪೊಲೀಸ್ ಠಾಣೆಯಲ್ಲಿ ತಮ್ಮ ಮೇಲೆ ಪೇದೆಯೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯೊಬ್ಬರು, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ ಎಂದು ಆಯೋಗದ ಅಧ್ಯಕ್ಷ ನ್ಯಾ.ಎಸ್.ಆರ್.ನಾಯಕ್ ಹೇಳಿದ್ದಾರೆ.

ಕಳ್ಳತನ ಪ್ರಕರಣವೊಂದರಲ್ಲಿ ಇಬ್ಬರು ಗಂಡಹೆಂಡಿರನ್ನು ಪೊಲೀಸರು ಬಂಧಿಸಿದ್ದರು. ಅಕ್ರಮವಾಗಿ ಠಾಣೆಯಲ್ಲಿ ಬಂಧನದಲ್ಲಿಟ್ಟಿದ್ದರು. ಆಗ ವಿಚಾರಣೆ ನಡೆಸುವ ವೇಳೆ ಪೇದೆಯೊಬ್ಬ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ದೂರಿದ್ದಾಳೆ. ಸದ್ಯಕ್ಕೆ ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರದಲ್ಲಿರುವ ಈ ಮಹಿಳೆ, ಕಾರಾಗೃಹದಿಂದಲೇ ಆಯೋಗಕ್ಕೆ ಲಿಖಿತ ದೂರು ನೀಡಿದ್ದಾರೆ.

ಅತ್ಯಾಚಾರ ಮಾಡಿದ ಪೇದೆ, ಠಾಣೆಯಲ್ಲಿ ನನ್ನ ಮನವೊಲಿಸಲು ಹೊರಗಿನಿಂದ ತಿಂಡಿ ಮತ್ತು ಊಟ ತಂದುಕೊಡುತ್ತಿದ್ದ. ನಾನು ದೇಹ ಒಪ್ಪಿಸಲು ನಿರಾಕರಿಸಿದಾಗ, ಅತ್ಯಾಚಾರವೆಸಗಿದ ಎಂದು ಮಹಿಳೆ ದೂರಿದ್ದಾರೆ.

***

2ನೇ ತ್ರೈಮಾಸಿಕದಲ್ಲಿ ಟಾಟಾ ಕನ್ಸಲ್ಟೆನ್ಸಿಗೆ ಶೇ. 25ರಷ್ಟು ಲಾಭ

ಮುಂಬಯಿ, ಅ. 16 : ಭಾರತದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ(ಟಿಸಿಎಸ್), ಆರ್ಥಿಕ ವರ್ಷದ ಪ್ರಸ್ತುತ ಅವಧಿಯಲ್ಲಿ ಶೇ.25ರ ಲಾಭ ಗಳಿಸಿದೆ.

ಕಂಪೆನಿಯ ವಹಿವಾಟಿನಲ್ಲಿ ಒಟ್ಟಾರೆ ಶೇ.25.7ರ ಗತಿಯಂತೆ ಏರಿಕೆ ಕಂಡಿದ್ದು, ಸುಮಾರು 318 ಮಿಲಿಯನ್ ಡಾಲರ್ ಲಾಭಗಳಿಸಿದೆ. ಪ್ರಸ್ತುತ ಅವಧಿಯಲ್ಲಿ ಟಿಸಿಎಸ್ ಸಂಸ್ಥೆ ಸುಮಾರು 51 ಹೊಸ ಗ್ರಾಹಕ ಕಂಪೆನಿಗಳೊಡನೆ ವ್ಯವಹಾರ ಕುದುರಿಸಿದೆ. ಲಕ್ಷಕ್ಕೂ ಅಧಿಕ ವೃತ್ತಿಪರರನ್ನು ಹೊಂದಿರುವ ಮೊದಲ ಟೆಕ್ನಾಲಜಿ ಆಧಾರಿತ ಕಂಪೆನಿ ಎಂಬ ಹೆಗ್ಗಳಿಕೆ ಟಿಸಿಎಸ್ ಪಾತ್ರವಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X